ಬದಿಯಡ್ಕದಲ್ಲಿ ಕನ್ನಡ ಸಾಹಿತ್ಯ ಸಿರಿ - 2
ಸಾಧಕರನ್ನು ಶೋಧಿಸಿ ಸಮ್ಮಾನಿಸಬೇಕು : ಡಾ.ಭರಣ್ಯ
ಬದಿಯಡ್ಕ: ಸಾಹಿತ್ಯಿಕ, ಸಾಂಸ್ಕೃತಿಕ ಕ್ಷೇತ್ರಗಳಿಗೆ ಅಪಾರ ಕೊಡುಗೆ ನೀಡಿದ ಅನೇಕ ಮಂದಿ ಹಿರಿಯರು ನಮ್ಮಲ್ಲಿದ್ದಾರೆ. ಪ್ರಚಾರವನ್ನು ಬಯಸದೆ ತೆರೆಮರೆಯಲ್ಲಿಯೇ ಉಳಿದುಕೊಂಡಿದ್ದಾರೆ. ಇಂತಹ ಸಾಧಕರನ್ನು ಶೋಧಿಸಿ ಅವರ ಸಾಧನೆ-ಕೃತಿಗಳನ್ನು ಪರಿಚಯಿಸಿ ಯೋಗ್ಯರೀತಿಯಲ್ಲಿ ಸಮ್ಮಾನಿಸಲು ಕನ್ನಡ ಸಂಘಟನೆಗಳು ಮುಂದೆ ಬರಬೇಕು ಎಂದು ಮಧುರೈ ಕಾಮರಾಜ ವಿವಿಯ ವಿಶ್ರಾಂತ ಕನ್ನಡ ವಿಭಾಗ ಮುಖ್ಯಸ್ಥ, ಸಾಹಿತಿ, ಸಂಶೋಧಕ ಡಾ.ಹರಿಕೃಷ್ಣ ಭರಣ್ಯ ಹೇಳಿದರು.
ಕನರ್ಾಟಕ ಸರಕಾರದ ಕನ್ನಡ ಪುಸ್ತಕ ಪ್ರಾಧಿಕಾರ ಮತ್ತು ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆ ಇವುಗಳ ಸಂಯುಕ್ತಾಶ್ರಯದಲ್ಲಿ ಬದಿಯಡ್ಕದಲ್ಲಿ ಶನಿವಾರ ನಡೆದ ಎರಡನೇ ಕನ್ನಡ ಸಾಹಿತ್ಯ ಸಿರಿಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ಸಾಹಿತಿಗಳು ಸಮಾಜದ ಸ್ಥಿತಿಗತಿಗೆ ಸ್ಪಂದಿಸುವವರು. ತಮ್ಮ ಭಾಷೆ, ಸಂಸ್ಕೃತಿಯ ಅಸ್ತಿತ್ವಕ್ಕೆ ಧಕ್ಕೆಯುಂಟಾದಾಗಲೆಲ್ಲ ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ. ಕಾಸರಗೋಡಿನಲ್ಲಿ ಕನ್ನಡದ ಅವಗಣನೆಯ ವಿರುದ್ಧ ಸಾಹಿತಿಗಳು, ಪತ್ರಕರ್ತರು ನಡೆಸಿದ ಹೋರಾಟ ಗಮನ ಸೆಳೆದಿದೆ. ಕೇರಳ ಸರಕಾರ ಮಲಯಾಳ ಕಡ್ಡಾಯ ಆದೇಶ ಹೊರಡಿಸಿದಾಗಲೂ ಅವರು ಭಾಷಣಗಳಲ್ಲಿ, ಬರಹಗಳಲ್ಲಿ ಪ್ರತಿಭಟಿಸಿದ್ದಾರೆ ಎಂದು ಡಾ.ಭರಣ್ಯ ಹೇಳಿದರು.
ಕವಿ, ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಾಹಿತ್ಯ ಪ್ರೀತಿ ಜನಾಂಗದ ಸಂಸ್ಕೃತಿಯಾಗಿರಬೇಕು. ಆಗಲೇ ಸಂಸ್ಕೃತಿ ಸಂವರ್ಧನೆ ಸಾಧ್ಯ. ಸಾಹಿತ್ಯ ಸಭೆ, ಸಮ್ಮೇಳನಗಳಿಂದ ಸಮಾಜ ಸುಧಾರಣೆ ಸಾಧ್ಯವೇ ಎಂಬ ಪ್ರಶ್ನೆ ಇತ್ತೀಚಿನ ದಿನಗಳಲ್ಲಿ ಕೇಳಿ ಬರುತ್ತಿದೆ. ಸಾಹಿತ್ಯ ಸಮಾನ ಮನಸ್ಕರನ್ನು ಒಟ್ಟಾಗಿಸುತ್ತದೆ. ಸಾಹಿತಿಗಳೆಲ್ಲ ಒಂದೇ ಸೂರಿನಡಿಯಲ್ಲಿ ಬೆರೆತು ಭಾವನೆಗಳನ್ನು ಹಂಚಿಕೊಳ್ಳಬೇಕು. ತಾವು ರಚಿಸಿದ ಕೃತಿಗಳನ್ನು ವಿನಿಮಯ ಮಾಡಿಕೊಳ್ಳಬೇಕು. ಸಾಮಾಜಿಕ ಸ್ಥಿತಿಗತಿಗಳ ಬಗ್ಗೆ ವಿಚಾರ ವಿಮಶರ್ೆ ನಡೆಸಬೇಕು. ಇಂತಹ ಕೆಲಸಗಳಿಂದ ಸಮಾಜ ಸುಧಾರಣೆಗೆ ಪೂರಕವಾದ ವಾತಾವರಣ ನಿಮರ್ಾಣವಾಗುತ್ತದೆ ಎಂದು ರಾಧಾಕೃಷ್ಣ ಕೆ.ಉಳಿಯತ್ತಡ್ಕ ಹೇಳಿದರು.
ಕ.ಸಾ.ಪ. ಕೇರಳ ಗಡಿನಾಡ ಘಟಕದ ಗೌರವ ಕಾರ್ಯದಶರ್ಿ ಧರ್ಮತ್ತಡ್ಕ ರಾಮಚಂದ್ರ ಭಟ್, ನಿವೃತ್ತ ಉಪನೋಂದಣಾಧಿಕಾರಿ ಮಹಮ್ಮದಾಲಿ ಪೆರ್ಲ, ಕಲಾವಿದ ಹಾಗೂ ದಸ್ತಾವೇಜು ಬರಹಗಾರ ಕರಿಂಬಿಲ ಲಕ್ಷ್ಮಣ ಪ್ರಭು ಉಪಸ್ಥಿತರಿದ್ದು ಶುಭಹಾರೈಸಿದರು.
ಕನ್ನಡ ಸಾಹಿತ್ಯ ಸಿರಿ ಸಂಚಾಲಕ ಕೇಳು ಮಾಸ್ತರ್ ಅಗಲ್ಪಾಡಿ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಕಾರ್ಯದಶರ್ಿ ಡಾ.ಬೇ.ಸಿ.ಗೋಪಾಲಕೃಷ್ಣ ಭಟ್ ವಂದಿಸಿದರು. ಕೇರಳ ಸರಕಾರವು ಭಾಷಾ ಅಲ್ಪಸಂಖ್ಯಾತ ಪ್ರದೇಶವಾದ ಕಾಸರಗೋಡಿನ ಕನ್ನಡ ವಿದ್ಯಾಥರ್ಿಗಳಿಗೂ ಮಲಯಾಳ ಕಡ್ಡಾಯಗೊಳಿಸಿರುವುದನ್ನು ಸಭೆಯಲ್ಲಿ ತೀವ್ರವಾಗಿ ಖಂಡಿಸಲಾಯಿತು. ಕನ್ನಡ ಸಾಹಿತ್ಯ ಸಿರಿ ತಿಂಗಳ ಕಾರ್ಯಕ್ರಮ ನಿರ್ವಹಣೆಗೆ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು.
ಅಮೃತ ಸಿಂಚನದ ಸಾಹಿತಿ ಅರ್ತಲೆಗೆ ಸಮ್ಮಾನ : ಸತ್ಯಾಮೃತ, ಜ್ಞಾನಾಮೃತ, ಗಾನಾಮೃತ, ಪಂಚಾಮೃತ, ದೀಪಾಮೃತ, ದೇವಾಮೃತ ಮೊದಲಾದ ಕೃತಿಗಳ ಮೂಲಕ ಸಾಹಿತ್ಯದ ಅಮೃತ ಸಿಂಚನ ಮಾಡಿದ ಎಲೆಮರೆಯ ಪ್ರತಿಭೆ ಅರ್ತಲೆ ಎಂ.ಪರಮೇಶ್ವರ ನಾಯ್ಕರನ್ನು `ಕನ್ನಡ ಸಾಹಿತ್ಯ ಸಿರಿ' ಸಮಾರಂಭದಲ್ಲಿ ಸಮ್ಮಾನಿಸಲಾಯಿತು. ಕಾಸರಗೋಡು ಸರಕಾರಿ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಪ್ರೊ.ಎ.ಶ್ರೀನಾಥ್ ಅಭಿನಂದನ ಭಾಷಣ ಮಾಡಿದರು.
ಭಕ್ತಿ, ಭಾವ, ನೀತಿಗೀತೆಗಳನ್ನು ಸರಳ ಸುಂದರ ಶೈಲಿಯಲ್ಲಿ ರಚಿಸಿ ಮಧುರ ಮನೋಹರವಾಗಿ ಹಾಡುವ ಸಾಮಥ್ರ್ಯವನ್ನು ರೂಢಿಸಿಕೊಂಡಿರುವ ಪರಮೇಶ್ವರ ನಾಯ್ಕರು ಈಗಾಗಲೇ ಸಹೃದಯರ ಸಹಕಾರದಿಂದ ಒಂಭತ್ತು ಕೃತಿಗಳನ್ನು ಪ್ರಕಟಿಸಿದ್ದಾರೆ. ಹಸ್ತಪ್ರತಿಯಲ್ಲಿರುವ ಇನ್ನೂ ಆರು ಕೃತಿಗಳು ಬೆಳಕಿಗೆ ಬರಲು ಉಳಿದುಕೊಂಡಿವೆ. ಇವರಿಗೆ ಇದುವರೆಗೆ ಯಾವುದೇ ಅಂಗೀಕಾರ ಲಭಿಸಿಲ್ಲ. ವಯೋವೃದ್ಧರಾದ ಅವರನ್ನು ಗುರುತಿಸುವ ಕಾಲ ಇನ್ನಾದರೂ ಬರಲಿ ಎಂದು ಪ್ರೊ.ಎ.ಶ್ರೀನಾಥ ಹೇಳಿದರು.
ಭಕ್ತಕವಿ, ಶಕ್ತಕವಿ ಪರಮೇಶ್ವರ ನಾಯ್ಕರನ್ನು ಸಭಾಧ್ಯಕ್ಷತೆ ವಹಿಸಿದ ಡಾ.ಹರಿಕೃಷ್ಣ ಭರಣ್ಯ ಸಮ್ಮಾನಿಸಿದರು. ಅತಿಥಿ ಅಭ್ಯಾಗತರು, ಕನ್ನಡ ಸಾಹಿತ್ಯ ಸಿರಿಯ ಪದಾಧಿಕಾರಿಗಳು ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಕವಿ ಅರ್ತಲೆ, ವಸಂತ ಬಾರಡ್ಕ, ಬೆಂಗ್ರೋಡಿ ಗೋವಿಂದ ಭಟ್ ಭಕ್ತಿ-ಭಾವಗೀತೆಗಳನ್ನು ಹಾಡಿದರು. ಪ್ರೊ.ಎ.ಶ್ರೀನಾಥ್ ಕಾರ್ಯಕ್ರಮ ನಿರೂಪಿಸಿದರು.