HEALTH TIPS

No title

          ಕಂಡು ಕೇಳಿ ಅರಿಯದ ಭಾರೀ ಗಾಳಿ=ಹಾನಿ= ಜೀವದಾನಪಡೆದ  ವಿದ್ಯಾಥರ್ಿಗಳು
                                                                      ಪೋಟೋ= ಪ್ರಭಾ ಅಡೂರು
    ಮುಳ್ಳೇರಿಯ: ದೇಲಂಪಾಡಿ ಸಮೀಪದ ಅಡೂರು ಪಾಂಡಿಯಲ್ಲಿ ಬುಧವಾರ ಅಪರಾಹ್ನ 3.15ರ ವೇಳೆ ಬೀಸಿದ ಭಾರೀ ಬಿರುಗಾಳಿಗೆ ವ್ಯಾಪಕ ನಾಶ ನಷ್ಟ ಸಂಭವಿಸಿದ್ದು ಜೀವಾಪಾಯಗಳಿಲ್ಲದೆ ಪಾರಾದ ವಿದ್ಯಮಾನ ನಡೆದಿದೆ.
   ಕುಗ್ರಾಮವಾದ ಪಾಂಡಿಯಲ್ಲಿ ಬುಧವಾರ ಬೀಸಿದ ಭಾರೀ ಬಿರುಗಾಳಿಯಿಂದ ಪಾಂಡಿ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಆವರಣ ಗೋಡೆಗೆ 8 ರಷ್ಟು ಮರಗಳು ಬಂದಪ್ಪಳಿಸಿ ಅಪಾರ ನಷ್ಟ ಸಂಭವಿಸಿದೆ. ಕೆಲವು ತರಗತಿ ಕೊಠಡಿಗಳಿಗೂ ಹಾನಿಯಾಗಿದೆ. ಅಧ್ಯಾಪಕರ ಸಕಾಲಿಕ ಯತ್ನದಲ್ಲಿ ವಿದ್ಯಾಥರ್ಿಗಳನ್ನು ಬೆಂಚು=ಡೆಸ್ಕುಗಳ ಅಡಿಯಲ್ಲಿ ಕುಳ್ಳಿರಿಸಿದ್ದರಿಂದ ಜೀವಹಾನಿ ಕೂದಳೆಳೆಯ ಅಂತರದಲ್ಲಿ ತಪ್ಪಿದೆ.
    ಜೊತೆಗೆ ಕೃಷ್ಣ ನಾಯ್ಕ್ ಪಾಂಡಿ, ಮೊಹಮ್ಮದ್ ಸೂರ್ಲಡಿ ಎಂಬವರ ಸಹಿತ 6 ರಷ್ಟು ಮನೆಗಳು, ದಿವಾಕರ ಪಾಂಡಿಯವರ ಹೋಟೆಲ್ ಹಾಗೂ 8 ಅಂಗಡಿಗಳು, ಪಾಂಡಿ ಅಯ್ಯಪ್ಪ ಭಜನಾ ಮಂದಿರದ ಕಾಯರ್ಾಲಯ ಸಂಪೂರ್ಣ ಮರಬಿದ್ದು ನಾಶವಾಗಿದೆ.
    ಸುಂಟರ ಗಾಳಿಗೆ ಪಾಂಡಿ ಪರಿಸರದ 1000 ಕ್ಕಿಂತಲೂ ಮಿಕ್ಕಿದ ಮರಗಳು, ಕಂಗಿನ ಮರಗಳು, ಬಾಳೆ ಮೊದಲಾದವುಗಳು ವ್ಯಾಪಕ ಪ್ರಮಾಣದಲ್ಲಿ ನಾಶವಾಗಿವೆ. ಘಟನೆ ನಡೆಯುತ್ತಿರುವಂತೆ ಮಕ್ಕಳ ಪಾಲಕರು ಶಾಲೆಗೆ ಧಾವಿಸಿರುವುದು ಕಂಡುಬಂತು. ಶಿಕ್ಷಕರ ಸಕಾಲಿಕ ಯತ್ನದಿಂದ ಜೀವಹಾನಿಗೆ ಆಸ್ಪದವಾಗದಿರುವುದು ಸಾರ್ವಜನಿಕರ ಪ್ರಶಂಸೆಗೂ ಕಾರಣವಾಯಿತು. ಒಂದು ಗಂಟೆಗಿಂತಲೂ ಹೆಚ್ಚು ಕಾಲ ಬೀಸಿದ ಪ್ರಚಂಡ ಬಿರುಗಾಳಿ ಜನರನ್ನು ತೀವ್ರ ಭೀತಗೊಳಿಸಿ ಪ್ರಳಯದ ಭಯ ತಂದಿತ್ತು.   ಪಾಂಡಿ ಹೈಯರ್ ಸೆಕೆಂಡರಿ ಶಾಲಾ ಮುಖ್ಯೋಪಾಧ್ಯಾಯ ನಾರಾಯಣ ದೇಲಂಪಾಡಿ ಯವರು ತನ್ನ ನೆನಪಿನಲ್ಲಿ ಈವರೆಗೆ ಈ ಮಟ್ಟದ ಬಿರುಗಾಳಿ ಕಂಡಿಲ್ಲವೆಂದು ತಿಳಿಸಿರುವರು.
   ಜಿಲ್ಲೆಯಲ್ಲಿ ಕಳೆದ ಒಂದು ವಾರಗಳಿಂದ ಮಳೆ ಬಿರುಸುಗೊಂಡಿದ್ದು, ಸೋಮವಾರದಿಂದ ಎಡೆಬಿಡದೆ ಮಳೆ ಸುರಿಯುತ್ತಿದೆ. ಮಂಗಳವಾರ ರಾತ್ರಿ ಧಾರಾಕಾರ ಮಳೆ, ಗುಡುಗು, ಸಿಡಿಲು ಹಾಗೂ ಭಾರೀ ಗಾಳಿಗಳ ಜೊತೆಗೆ ಸುರಿದಿದ್ದು ವಿಶೇಷ ಹಾನಿಗಳಾಗಿಲ್ಲ.

    

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries