ಸೂಪರ್ ಕಂಪ್ಯೂಟರ್ ಕೋಡಿಂಗ್ ಗಾಗಿ ಭಾರತದ 4 ಸಾವಿರ ವರ್ಷಗಳ ಹಳೆಯ ಭಾಷೆಯ ಬಳಕೆ!
ಕೋಲ್ಕತಾ: ಭವ್ಯ ಭಾರತತದ ಸುಮಾರು 4 ಸಾವಿರ ವರ್ಷಗಳಷ್ಟು ಹಳೆಯದಾದ ಸಂಸ್ಕೃತ ಭಾಷೆಯನ್ನು ಭವಿಷ್ಯದ ಸೂಪರ್ ಕಂಪ್ಯೂಟರ್ ಗಳ ಕೋಡಿಂಗ್ ಗಾಗಿ ಬಳಕೆ ಮಾಡಬಹುದು ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಹೇಳಿದರು.
ಕೋಲ್ಕತಾದಲ್ಲಿ ಗುರುವಾರ ನಡೆದ ಕೌಶ್ಯಲ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ವಿಜ್ಞಾನಿಗಳು ಸಂಸ್ಕೃತ ಭಾಷೆಯನ್ನು ಸೂಪರ್ ಕಂಪ್ಯೂಟರ್ ಗಳ ಕೋಡಿಂಗ್ ಗಾಗಿ ಬಳಕೆ ಮಾಡುವ ಕುರಿತು ಗಂಭೀರ ಚಿಂತನೆಯಲ್ಲಿ ತೊಡಗಿದ್ದಾರೆ. ಆದರೆ ನಾವು ಇನ್ನೂ ಇಂಗ್ಲೀಷಿನ ಮೇಲೆ ಅವಲಂಭಿತರಾಗಿದ್ದೇವೆ, ನಮ್ಮದೇ ಐತಿಹಾಸಿಕ ಭಾಷೆ ಸಂಸ್ಕೃತದ ಮಹತ್ವ ತಿಳಿದ ವಿದೇಶಿಗರು ಸಂಸ್ಕೃತ ಕಲಿಯುತ್ತಿದ್ದಾರೆ. ಆದರೆ ನಾವು ಮಾತ್ರ ಇಂಗ್ಲೀಷಿಗೆ ಅಂಟಿಕೊಂಡಿದ್ದೇವೆ ಎಂದು ಹೇಳಿದರು.
ಸಂಸ್ಕೃತದ ಮಹತ್ವ ಅರಿತಿರುವ ಹಲವು ದೇಶಗಳು ಈಗಗಾಲೇ ತಮ್ಮ ಪ್ರಜೆಗಳಿಗೆ ಈ ಭಾಷೆಯನ್ನು ಕಲಿಸುತ್ತಿದ್ದು, ಯೂರೋಪಿನ ಹಲವು ದೇಶಗಳ ವಿವಿಯಲ್ಲಿ ಸಂಸ್ಕೃತವನ್ನು ಬೋಧಿಸಲಾಗುತ್ತಿದೆ. ಹೀಗಾಗಿ ಕೇಂದ್ರ ಸಕರ್ಾರ ಕೂಡ ಕೌಶಸ್ಯ ಅಭಿವೃದ್ಧಿಯ ತನ್ನ ಕಾರ್ಯಕ್ರಮಗಳಲ್ಲಿ ಸಂಸ್ಕೃತ ಬೋಧನೆ ಸೇರಿಸುವ ಕುರಿತು ಗಂಭೀರ ಚಿಂತನೆಯಲ್ಲಿ ತೊಡಗಿದೆ. ಇದಕ್ಕಾಗಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸ್ಕಿಲ್ ಎಂಬ ಸಂಸ್ಥೆಯನ್ನು ತೆರಯಲಿದ್ದು, ಇದು ದೇಶದ ಅತ್ಯುನ್ನತ ವಿದ್ಯಾಸಂಸ್ಥೆಗಳಲ್ಲಿ ಒಂದಾಗಲಿದೆ. ಕಾನ್ಪುರದಲ್ಲಿ ಐಐಎಸ್ ಸಂಸ್ಥೆಗೆ ಪ್ರಧಾನಿ ಮೋದಿ ಅಡಿಗಲ್ಲು ಹಾಕಲಿದ್ದಾರೆ. ಅಂತೆಯೇ ಪ್ರತೀಯೊಂದು ರಾಜ್ಯದಲ್ಲೂ ಈ ಐಐಎಸ್ ಸಂಸ್ಥೆಯನ್ನು ತೆರಯಾಲಾಗುತ್ತದೆ. ಈ ಸಂಬಂಧ ಪ್ರತೀ ರಾಜ್ಯಕ್ಕೂ ಕೇಂದ್ರ ಸಕರ್ಾರ ನಿಧರ್ಿಷ್ಟ ಆಥರ್ಿಕ ಮತ್ತು ತಾಂತ್ರಿಕ ನೆರವು ನೀಡಲಿದೆ ಎಂದು ಅನಂತ್ ಕುಮಾರ್ ಹೆಗಡೆ ಮಾಹಿತಿ ನೀಡಿದರು.