ಯಮುನಕ್ಕನ ಪರಿಸರ ಪ್ರೇಮ ಮಾದರಿ
ಮುಳ್ಳೇರಿಯ: ತನ್ನ 65ನೇ ವರ್ಷ ಪ್ರಾಯದಲ್ಲಿಯೂ ಬೆಳ್ಳೂರು ಸಮೀಪದ ಕುದ್ವದ ಯಮುನಕ್ಕ ಪರಿಸರ ಶುಚೀಕರಣ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಮಾದರಿಯಾದರು.
ಬೆಳ್ಳೂರು ಆರೋಗ್ಯ ಇಲಾಖೆಯು ಆಯೋಜಿಸಿದ ಆರೋಗ್ಯ ಜಾಗ್ರತಾ ಶುಚೀಕರಣ ಕಾರ್ಯಕ್ರಮಕ್ಕಾಗಿ ನಾಟೆಕ್ಕಲ್ಲು ಅಕ್ಷಯ ಕುಟುಂಬಶ್ರೀ ಸದಸ್ಯೆಯರೊಂದಿಗೆ ತನ್ನ ಪ್ರಾಯವನ್ನು ಮರೆತು ಯಮುನಕ್ಕ ಆಗಮಿಸಿ ಗಮನ ಸೆಳೆದರು. ಈ ಹಿಂದೆ ನಡೆದ ಸೊಳ್ಳೆಗಳ ಮೂಲ ನಶೀಕರಣ ಶುಚಿತ್ವದಲ್ಲಿಯೂ ಇವರು ಭಾಗಿಗಳಾಗಿದ್ದರು. 18 ವರ್ಷಗಳಿಂದ ಕುಟುಂಬಶ್ರೀಯಲ್ಲಿ ಸಜೀವರಾಗಿ ಇವರು ಕೆಲಸ ಮಾಡುತ್ತಿದ್ದಾರೆ. ಇವರ ಪರಿಸರ ಪ್ರಜ್ಞೆ ಯುವ ಜನತೆಗೆ ಮಾದರಿಯಾಗಿದೆ.
ಬೆಳ್ಳೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಆಶ್ರಯದಲ್ಲಿ ಇಲ್ಲಿನ ಹೈಯರ್ ಸೆಕೆಂಡರೀ ಶಾಲೆ ಮತ್ತು ಪೇಟೆ ಪರಿಸರವನ್ನು ಶುಚಿಗೊಳಿಸಲಾಯಿತು. ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಗೀತಾ.ಕೆ ಶುಚೀಕರಣವನ್ನು ಉದ್ಘಾಟಿಸಿದರು. ಕಿರಿಯ ಆರೋಗ್ಯ ಪರಿವೀಕ್ಷಕ ತಿರುಮಲೇಶ್ವರ ನಾಯಕ್, ಹೈದರ್ ಶರೀಫ್, ದಾದಿಯರಾದ ವಿ.ಎನ್.ಉಷಾ, ಲೀನಾ.ಎ.ಜಿ,ಕುಟುಂಬಶ್ರೀ ಸಿಡಿಎಸ್ ಅಧ್ಯಕ್ಷೆ ಸುಜಾತಾ.ಕೆ, ಮುಖ್ಯ ಶಿಕ್ಷಕಿ ವಾರಿಜಾ ಮೊದಲಾದವರು ಉಪಸ್ಥಿತರಿದ್ದರು. ಕುಟುಂಬಶ್ರೀ ಕಾರ್ಯಕರ್ತರು, ಶಾಲೆಯ ವಿದ್ಯಾಥರ್ಿಗಳು, ಸಾರ್ವಜನಿಕರು ಭಾಗವಹಿಸಿದ್ದರು.