HEALTH TIPS

No title

             ಆರ್ಎಸ್ಎಸ್ ಸಮಾವೇಶದಲ್ಲಿ ಪಾಲ್ಗೊಳ್ಳದಂತೆ ಹೇಳುವವರಿಗೆ ನಾಗ್ಪುರದಲ್ಲೇ ಉತ್ತರಿಸುವೆ: ಪ್ರಣಬ್ ಮುಖಜರ್ಿ
    ನವದೆಹಲಿ: ಆರ್ಎಸ್ಎಸ್  ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದಂತೆ ಒತ್ತಡ ಹೇರುತ್ತಿರುವವರಿಗೆ ಜೂನ್ 7ರಂದು ನಾಗ್ಪುರದಲ್ಲಿ ಉತ್ತರ ಹೇಳುವುದಾಗಿ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖಜರ್ಿ ಹೇಳಿದ್ದಾರೆ.
   ನಾನು ಹೇಳಬೇಕಾಗಿರುವುದನ್ನು ನಾಗ್ ಪುರದಲ್ಲಿ ಹೇಳುತ್ತೇನೆ. ನನಗೆ ಆರ್ಎಸ್ಎಸ್  ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದಿರುವಂತೆ ಕೋರಿ ಹಲವು ಪತ್ರಗಳು, ದೂರವಾಣಿ ಕರೆಗಳು ಬಂದಿದೆ. ನಾನು ಯಾವುದಕ್ಕೂ ಪ್ರತಿಕ್ರಯಿಸಿಲ್ಲ. ಅವರಿಗೆಲ್ಲಾ ನಾನು ನಾಗ್ಪುರದಲ್ಲಿಯೇ ಪ್ರತಿಕ್ರಿಯೆ ನೀಡುತ್ತೇನೆ  ಎಂದು ಬೆಂಗಾಲಿ ದಿನಪತ್ರಿಕೆ ಆನಂದ್ ಬಜಾರ್ ಪತ್ರಿಕಾದಲ್ಲಿ ಮುಖಜರ್ಿ ಅವರ ಈ ಹೇಳಿಕೆ ದಾಖಲಾಗಿದೆ.
    ಜೈರಾಮ್ ರಮೇಶ್, ಸಿ.ಕೆ. ಜಾಫರ್ ಶರೀಫ್ ಸೇರಿ ಹಲವಾರು ಹಿರಿಯ ಕಾಂಗ್ರೆಸ್ ನಾಯಕರು ಮುಖಜರ್ಿ ಅವರ ನಿಧರ್ಾರವನ್ನು ಮರುಪರಿಶೀಲಿಸುವಂತೆ ಮನವಿ ಮಾಡಿದ್ದರು.
   ಕೇರಳ ವಿಧಾನಸಭೆ ವಿರೋಧ ಪಕ್ಷದ ನಾಯಕ ರಮೇಶ್ ಚೆನ್ನಿತ್ತಲ ಅವರು ಮಾಜಿ ರಾಷ್ಟ್ರಪತಿಗಳು ಆರ್ಎಸ್ಎಸ್  ಸಮಾವೇಶದಲ್ಲಿ ಪಾಲ್ಗೊಳ್ಳುವುದರಿಂದ ಜಾತ್ಯಾತೀತ ಮನಸ್ಸುಗಳಿಗೆ ಘಾಸಿಯಾಗಲಿದೆ ಎಂದಿದ್ದಾರೆ.
    ಆದರೆ ಕಾಂಗ್ರೆಸ್ ಮುಖಂಡರಾದ ಪಿ. ಚಿದಂಬರಂ ಮುಖಜರ್ಿಯವರು ಆರ್ಎಸ್ಎಸ್  ಕಾರ್ಯಕ್ರಮಕ್ಕೆ ಹಾಜರಾಗಬೇಕು. ಅಲ್ಲಿ ಮಾತನಾಡುವ ವೇಳೆ ಆರ್ಎಸ್ಎಸ್ ಸಿದ್ದಾಂತದಲಿರುವ  ದೋಷಗಳನ್ನು ಎತ್ತಿ ತೋರಬೇಕು ಎಂದಿದ್ದಾರೆ. ಮುಖಜರ್ಿಯವರು ಆರ್ಎಸ್ಎಸ್   ಆಮಂತ್ರಣವನ್ನು ಒಪ್ಪಿದ್ದಾರೆ. ಅದರಂತೆ ಅವರು ಸಮಾವೇಶಕ್ಕೆ ಹಾಜರಾಗಬೇಕು ಎಂದು ಚಿದಂಬರಂ ಹೇಳಿರುವರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries