ಇವರಿಗಿದು 84ನೇ ಗೌರವ ಡಾಕ್ಟರೇಟ್!!
ಚೆನ್ನೈ: ಪ್ರಸಿದ್ದ ಕೃಷಿ ವಿಜ್ಞಾನಿ ಎಂ.ಎಸ್. ಸ್ವಾಮಿನಾಥನ್ 84ನೇ ಗೌರವ ಡಾಕ್ಟರೇಟ್ ಪದವಿ ಪಡೆದುಕೊಂಡಿದ್ದಾರೆ. 82ರ ಹರೆಯದ ಹಿರಿಯ ವಿಜ್ಞಾನಿ ಸ್ವಾಮಿನಾಥನ್ ಸುಸ್ಥಿರ ಕೃಷಿ ವಿಧಾನ ಹಾಗೂ ಜಾಗತಿಕ ಆಹಾರ ಭದ್ರತೆ ವಿಚಾರದಲ್ಲಿ ನಡೆಸಿದ ಸಂಶೋಧನೆಗಾಗಿ ಗ್ವಾಲಿಯರ್ ಐಟಿಎಂ ವಿಶ್ವವಿದ್ಯಾಲಯದಿಂದ ಡಾಕ್ಟರ್ ಆಫ್ ಲೆಟಸರ್್ ಡಿಗ್ರಿ ಪಡೆದುಕೊಂಡಿದ್ದಾರೆ.
ತಮ್ಮ 92ನೇ ವಯಸ್ಸಿನಲ್ಲಿ 84ನೇ ಗೌರವ ಡಾಕ್ಟರೇಟ್ ಪದವಿ ಪಡೆದುಕೊಂಡಿದ್ದು, ಇವುಗಳಲ್ಲಿ 24 ಗೌರವ ಡಾಕ್ಟರೇಟ್ ಪದವಿಗಳು ಅಂತಾರಾಷ್ಟ್ರೀಯ ವಿವಿಗಳಿಂದ ಲಭಿಸಿವೆ.
ಎಂ.ಎಸ್. ಸ್ವಾಮಿನಾಥನ್ ಸಂಶೋಧನಾ ಫೌಂಡೇಷನ್ ಆವರಣದಲ್ಲಿ ನಡೆದ ವಿಶೇಷ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಅವರಿಗೆ 84ನೇ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗಿದೆ. ವಿವಿಯ ಕುಲಪತಿ ಡಾ. ಕಮಲ್ ಕಂತ್ ದ್ವಿವೇದಿ ಅವರು ಸ್ವಾಮಿನಾಥನ್ ಅವರಿಗೆ ಪದವಿ ಪ್ರದಾನ ಮಾಡಿದ್ದಾರೆ.