ಕನ್ನಡ ಕಂದನ ಸಿರಿಚಂದನ ಗಿಡ: ನಾಳೆ ಉದ್ಘಾಟನೆ
ಕಾಸರಗೋಡು: ಕಾಸರಗೋಡು ಸಿರಿಚಂದನ ಕನ್ನಡ ಯುವಬಳಗದ ಆಶ್ರಯದಲ್ಲಿ ವಿಭಿನ್ನ ರೀತಿಯಲ್ಲಿ ವಿಶ್ವ ಪರಿಸರ ದಿನಾಚರಣೆ ನಡೆಯಲಿದೆ. ಇದರ ಅಂಗವಾಗಿ ಜಿಲ್ಲೆಯ ಬೇರೆ ಬೇರೆ ಭಾಗದ ಐದು ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕಲಿಯುತ್ತಿರುವ ವಿದ್ಯಾಥರ್ಿಗಳನ್ನು ಆಯ್ಕೆ ಮಾಡಿ ಅವರ ಮನೆಗಳಿಗೆ ತೆರಳಿ ಆಯಾ ಮಗುವಿನ ಹೆಸರಿನಲ್ಲಿ ಮಗುವಿನ ಮನೆಯ ಹಿತ್ತಿಲಿನಲ್ಲಿ ತಲಾ ಎರಡೆರಡು ಗಿಡಗಳನ್ನು ನೆಡುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಗಿಡದ ಸಂರಕ್ಷಣೆಯ ಹೊಣೆಯನ್ನು ಆ ಮಗುವಿಗೆ ವಹಿಸಿಕೊಟ್ಟು ಮಗುವಿನ ಮನೆಯ ಗೋಡೆಗೆ ತೂಗು ಹಾಕಲು ನೆನಪಿನ ಪ್ರಮಾಣಪತ್ರವನ್ನು ನೀಡಲಾಗುವುದು. ಬಳಿಕ ಮೂರು ವರ್ಷ ಕಳೆದು ಅದೇ ಮನೆಗೆ ಬಳಗದ ಕಾರ್ಯಕರ್ತರು ಭೇಟಿ ನೀಡಿ ನೆಡಲಾದ ಕನ್ನಡ ಕಂದನ ಸಿರಿಚಂದನ ಎರಡು ಗಿಡಗಳಲ್ಲಿ ಕನಿಷ್ಠ ಒಂದರ ಸಂರಕ್ಷಣೆಯಾದರೂ ಸಮರ್ಪಕವಾಗಿದ್ದಲ್ಲಿ ಆ ವಿದ್ಯಾಥರ್ಿಯನ್ನು ಬಳಗವು ಸರ್ವಜನಿಕ ಕಾರ್ಯಕ್ರಮದಲ್ಲಿ ಅಭಿನಂದಿಸುವುದು. ಕಾರ್ಯಕ್ರಮದ ಉದ್ಘಾಟನೆ ಜೂ. 5ರಂದು ಸಂಜೆ 5 ಗಂಟೆಗೆಮಧೂರು ಕಿರಿಯ ಬುನಾದಿ ಶಾಲೆಯ ನಾಲ್ಕನೇ ತರಗತಿ ವಿದ್ಯಾಥರ್ಿನಿ ಹಿತಾ ಅವರ ನಿವಾಸದಲ್ಲಿ ನಡೆಯಲಿದೆ. ಉಳಿದಂತೆ ಪೆರ್ಲ, ಕುಳೂರು, ಬಂದಡ್ಕ, ದೇಲಂಪಾಡಿ ಭಾಗದ ಕನ್ನಡ ಶಾಲಾ ವಿದ್ಯಾಥರ್ಿಗಳನ್ನು ಯೋಜನೆಗೆ ಆಯ್ಕೆ ಮಾಡಲಾಗಿದೆ.