ಬಿಜೆಪಿ ಜನಸಂಪರ್ಕ ಯೋಜನೆಗೆ ಚಾಲನೆ
ಬದಿಯಡ್ಕ : ಪ್ರಧಾನಿ ನರೇಂದ್ರ ಮೋದಿಯವರ ಆಳ್ವಿಕೆಯಿಂದ ದೇಶವು ಅಭಿವೃದ್ಧಿಯನ್ನು ಕಾಣುತ್ತಿದ್ದು, ಇನ್ನು ಕೆಲವೇ ವರ್ಷಗಳಲ್ಲಿ ವಿಶ್ವದಲ್ಲೇ ಸಂಪೂರ್ಣ ಅಭಿವೃದ್ಧಿಹೊಂದಿ ಭಾರತವು ಅಗ್ರಗಣ್ಯವೆನಿಸಿ ವಿಶ್ವಗುರುವಾಗಲಿದೆ ಎಂದು ಕೊಡುಗೈದಾನಿ, ಸಾಯಿರಾಂ ಗೋಪಾಲಕೃಷ್ಣ ಭಟ್ ಕಿಳಿಂಗಾರು ಅಭಿಪ್ರಾಯ ವ್ಯಕ್ತಪಡಿಸಿದರು.
ಕೊಡುಗೈದಾನಿ ಕಿಳಿಂಗಾರು ಸಾಯಿರಾಂ ಗೋಪಾಲಕೃಷ್ಣ ಭಟ್ ಅವರ ನಿವಾಸದಲ್ಲಿ ಕೇಂದ್ರ ಸರಕಾರದ 4ನೇ ವರ್ಷದ ಪ್ರಯುಕ್ತ ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿ ಗುರುವಾರ ಹಮ್ಮಿಕೊಂಡ ಜನಸಂಪರ್ಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನೋಟು ಅಮಾನತಿನಿಂದಾಗಿ ಬಡಜನರು ಸ್ವಲ್ಪ ಕಷ್ಟವನ್ನು ಅನುಭವಿಸುವಂತಾದರೂ ಮುಂದಿನ ದಿನಗಳು ಒಳ್ಳೆಯ ದಿನಗಳಾಗಿ ಬದಲಾಗಲಿವೆ ಎಂಬ ಭರವಸೆಯ ಮಾತುಗಳನ್ನು ಅವರು ಹೇಳಿದರು. ದೇಶದ ಹಿತದೃಷ್ಟಿಯಿಂದ ಸರಕಾರವು ತೆಗೆದುಕೊಂಡ ಡಿಟ್ಟ ನಿಧರ್ಾರವು ಭಾರತವನ್ನು ಅಭಿವೃದ್ಧಿಯತ್ತ ಮುನ್ನಡೆಸಲಿ. ಮೋದಿಯವರ ವಿದೇಶಾಂಗ ನೀತಿಯು ಅತ್ಯುತ್ತಮವಾಗಿದ್ದು, ಭಾರತವು ವಿಶ್ವವಂದ್ಯವಾಗುವತ್ತ ದಾಪುಗಾಲಿಡುತ್ತದೆ. ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿದೆ. ಗಡಿ ವಿಚಾರದಲ್ಲಿ ಪಾಕಿಸ್ತಾನ ಪದೇ ಪದೇ ಕ್ಯಾತೆ ತೆಗೆಯುತ್ತಿದ್ದು, ಆದರೆ ತನ್ನ ಹಳ್ಳವನ್ನು ತಾನೇ ತೋಡಿಕೊಂಡಿದೆ ಎಂಬ ಅರಿವು ಪಾಕಿಸ್ತಾನಕ್ಕಿಲ್ಲ. ಕೇವಲ 5 ದಿನದಲ್ಲಿ ವಿಶ್ವದ ಭೂಪಟದಿಂದ ಪಾಕಿಸ್ತಾನವನ್ನು ಇಲ್ಲವಾಗಿಸುವ ಶಕ್ತಿ ಭಾರತೀಯ ಸೇನೆಗಿದೆ ಎಂದು ಅವರು ಖಡಕ್ ಆಗಿ ತಿಳಿಸಿದರು.
ಬಿಜೆಪಿ ಜಿಲ್ಲಾ ಅಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್, ಸಾಯಿರಾಂ ಭಟ್ ಅವರ ಆಶೀವರ್ಾದವನ್ನು ಪಡೆದು, ಕರಪತ್ರವನ್ನು ನೀಡಿ ಜನಸಂಪರ್ಕ ಅಭಿಯಾನಕ್ಕೆ ಚಾಲನೆಯನ್ನು ನೀಡಿದರು. ಅವರು ಮಾತನಾಡುತ್ತಾ ಕೇಂದ್ರ ಸರಕಾರದ ನಾಲ್ಕು ವರ್ಷದ ಆಡಳಿತದ ಕುರಿತು ಜನರಿಗೆ ನೇರವಾಗಿ ತಿಳಿಸುವ ಸಲುವಾಗಿ ಜನಸಂಪರ್ಕ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, ಸಾಧಕ ಬಾಧಕಗಳ ಕುರಿತು ಚಚರ್ಿಸಿ, ಜನರ ಅಭಿಪ್ರಾಯವನ್ನು ಕ್ರೂಡೀಕರಿಸಿ ಪಕ್ಷದ ರಾಜ್ಯ ಹಾಗೂ ಕೇಂದ್ರ ಸಮಿತಿಗೆ ಹಸ್ತಾಂತರಿಸಲಾಗುವುದು. ಸರಕಾರವು ದೇಶವನ್ನು ಅಭಿವೃದ್ಧಿ ಪಥದತ್ತ ಮುನ್ನಡೆಸಿ ಜನರ ವಿಶ್ವಾಸವನ್ನು ಪಡೆದುಕೊಂಡಿದೆ. 2019ರ ಚುನಾವಣೆಯಲ್ಲೂ ಮೋದಿಯವರೇ ದೇಶವನ್ನು ಮುನ್ನಡೆಸಲಿದ್ದಾರೆ ಎಂಬ ಅಚಲ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಬಿಜೆಪಿ ರಾಜ್ಯ ಸಮಿತಿ ಸದಸ್ಯ ನ್ಯಾಯವಾದಿ ವಿ. ಬಾಲಕೃಷ್ಣ ಶೆಟ್ಟಿ, ಮಂಜೇಶ್ವರ ಮಂಡಲಾಧ್ಯಕ್ಷ ಕೋಳಾರು ಸತೀಶ್ಚಂದ್ರ ಭಂಡಾರಿ, ಕಾಸರಗೋಡು ಮಂಡಲಾಧ್ಯಕ್ಷ ಎಂ. ಸುಧಾಮ ಗೋಸಾಡ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ನ್ಯಾಯವಾದಿ ಸದಾನಂದ ರೈ, ಕಾಸರಗೋಡು ಮಂಡಲ ಕಾರ್ಯದಶರ್ಿ ಹರೀಶ್ ನಾರಂಪಾಡಿ, ಬ್ಲಾಕ್ ಪಂಚಾಯತಿ ಸದಸ್ಯ ಅವಿನಾಶ್ ರೈ, ಪಕ್ಷದ ನೇತಾರರಾದ ಕೃಷ್ಣ ಮಣಿಯಾಣಿ ಮೊಳೆಯಾರು, ರಾಮಕೃಷ್ಣ ಹೆಬ್ಬಾರ್, ಶಂಕರ ಡಿ., ಬಾಲಕೃಷ್ಣ ಶೆಟ್ಟಿ ಕಡಾರು, ವಿಶ್ವನಾಥ ಪ್ರಭು ಕರಿಂಬಿಲ, ಜಯಂತಿ, ರಾಜೇಶ್ವರಿ, ಈಶ್ವರಚಂದ್ರ ಪ್ರಸಾದ್ ಕುಳಮರ್ವ ಈ ಸಂದರ್ಭ ಉಪಸ್ಥಿತರಿದ್ದರು.
ಮುಂದಿನ ದಿನಗಳಲ್ಲಿ ಬಿಜೆಪಿ ನೇತಾರರು ಜಿಲ್ಲೆಯ ಹಿರಿಯ ವ್ಯಕ್ತಿಗಳ, ಸಮಾಜ ಸೇವಕರ, ಕ್ರೀಡಾತಾರೆಗಳನ್ನು ಭೇಟಿಯಾಗಿ ಕೇಂದ್ರ ಸರಕಾರದ ಆಡಳಿತ ಸಾಧನೆಗಳ ಬಗ್ಗೆ ಮಾಹಿತಿ ನೀಡುವರು. ಬಿಜೆಪಿ ಬೂತ್ ಮಟ್ಟದ ಕಾರ್ಯಕರ್ತರು ಪ್ರತಿ ಮನೆಗಳಿಗೂ ಭೇಟಿ ನೀಡಿ ಜಾಗೃತಿ ಮೂಡಿಸುವರು. ಜೂ.30 ರ ವರೆಗೆ ಇಂತಹ ಜಾಗೃತಿ ಕಾರ್ಯಕ್ರಮ ನಡೆಯಲಿದೆ.