ಪೆರಡಾಲ ಸರಕಾರಿ ಪ್ರೌಢ ಶಾಲೆಯಲ್ಲಿ ಹಲೋ ಇಂಗ್ಲೀಷ್
ಬದಿಯಡ್ಕ: ಇಂಗ್ಲೀಷ್ ಭಾಷೆ ಇಂದಿನ ಅನಿವಾರ್ಯತೆ. ಮಾತೃ ಭಾಷೆ ಜೊತೆ ಜೊತೆಗೆ ಇಂಗ್ಲೀಷ್ ಪ್ರಾವೀಣ್ಯತೆ ಪಡೆದು ಶಿಕ್ಷಣದ ನಂತರ ಯಶಸ್ಸು ಲಭ್ಯವಾಗಬಹುದು. ಇಂದು ಸರಕಾರಿ ಶಾಲೆಯಲ್ಲಿ ಹಲೋ ಇಂಗ್ಲೀಷ್ ಮೂಲಕ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲಾಗುತ್ತದೆ. ಎಲ್ಲರೂ ಪಾಲ್ಗೊಳ್ಳುವ ಮೂಲಕ ಶಿಕ್ಷಣದ ಗುರಿಗಳನ್ನು ಸಾಸಲು ಯತ್ನಿಸಬೇಕು ಎಂದು ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಬ್ದುಲ್ ರೆಹಮಾನ್ ಅನ್ನಡ್ಕ ಹೇಳಿದರು.
ಅವರು ಪೆರಡಾಲ ಸರಕಾರಿ ಪ್ರೌಢ ಶಾಲೆಯಲ್ಲಿ ಹಲೋ ಇಂಗ್ಲೀಷ್ ಕಾರ್ಯಕ್ರಮವನ್ನು ಉದ್ಘಾಟಿಸಿ ಇಂಗ್ಲೀಷ್ನಲ್ಲಿಯೇ ಮಾತನಾಡಿದರು. ಯಾವುದೇ ಭಯವಿಲ್ಲದೆ ಮುಕ್ತವಾದ ಮಾತುಗಾರಿಕೆಯಿಂದ ಭಾಷೆ ಕಲಿಯಲು ಸಾಧ್ಯ ಎಂದು ಅವರು ತಿಳಿಸಿದರು.
ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ರಾಮ ಮಾತನಾಡಿ ಕೀಳರಿಮೆ ಹೋಗಲಾಡಿಸಿ ಆತ್ಮಸ್ಥೈರ್ಯದಿಂದ ಭಾಷಾ ಕಲಿಕೆ ಉತ್ತಮ ರೀತಿಯಲ್ಲಿ ಜರಗಬಹುದು ಎಂದರು. ಶಾಲಾ ಮುಖ್ಯ ಶಿಕ್ಷಕ ರಾಜಗೋಪಾಲ್ ಅಧ್ಯಕ್ಷತೆ ವಹಿಸಿ ಸರಕಾರ ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚಿನ ಉತ್ತಮ ಯೋಜನೆ ಹಾಕಿಕೊಂಡು ಪ್ರೋತ್ಸಾಹ ನೀಡುತ್ತಿದೆ ಎಂದರು. ಹಲೋ ಇಂಗ್ಲೀಷ್ ಸಂಪನ್ಮೂಲ ಶಿಕ್ಷಕ ಚಂದ್ರಶೇಖರ ಅವರು ಪ್ರಾಸ್ತಾವಿಕ ಮಾತನಾಡಿ ಈ ವರ್ಷ 1 ರಿಂದ 7 ರ ವರೆಗೆ ಪೂರ್ವ ಸಿದ್ಧತೆಯ ಹಾಡು, ಆಟಗಳ ನಂತರ ಪಾಠ ಸಂಬಂಧಿ ಚಟುವಟಿಕೆಗಳು ನಡೆಸುವ ವಿಧಾನ ಮಂಡಿಸಿದರು. ಇಂಗ್ಲೀಷ್ನಲ್ಲಿಯೇ 7 ನೇ ತರಗತಿ ವಿದ್ಯಾಥರ್ಿನಿ ಫಾತಿಮತ್ ಸಬೀನಾ ಸ್ವಾಗತಿಸಿ, ಫಾತಿಮತ್ ಇಶ್ರತ್ ವಂದಿಸಿದರು. ಖದೀಜತ್ ಶಬನಾ ಕಾರ್ಯಕ್ರಮ ನಿರೂಪಿಸಿದರು.
ಮಕ್ಕಳಿಂದ ಅಭಿನಯ ಗೀತೆ. ಓದುವಿಕೆ, ಹಾಡುವಿಕೆ, ಪ್ರಹಸನ ಜರಗಿತು. ಶಿಕ್ಷಕರಾದ ರಿಶಾದ್, ಶ್ರೀಧರ ಭಟ್, ಶಿಕ್ಷಕಿಯರಾದ ಶ್ರೀದೇವಿ, ಜಯಲತಾ, ದೀಪಾ, ಲಲಿತಾಂಬ ಮಾರ್ಗದರ್ಶನವಿತ್ತರು.