HEALTH TIPS

No title

              ವಾಚಕರಿಗಾಗಿ ಗ್ರಂಥಾಲಯಗಳು ನಡೆಸುವ ಜ್ಞಾನ ಯಜ್ಞ
                 ಇಂದು ರಾಜ್ಯದೆಲ್ಲೆಡೆ ವಾಚನಾ ಸಪ್ತಾಹಕ್ಕೆ ಚಾಲನೆ
    ಕಾಸರಗೋಡು: ರಾಷ್ಟ್ರದಲ್ಲಿಯೆ ಕೇರಳ ರಾಜ್ಯ ಅತೀ ಹೆಚ್ಚು ಗ್ರಂಥಾಲಯ ಮತ್ತುವಾಚನಾಲಯಗಳನ್ನು ಹೊಂದಿದ್ದು, ಪುಸ್ತಕಗಳ ಓದು ಮತ್ತು ಸಂಗ್ರಹದಲ್ಲಿ ಪ್ರಮುಖ ಸ್ಥಾನ ಪಡೆದಿದೆ. ಕೇರಳದಲ್ಲಿ ಜನರಿಗೆ ಪುಸ್ತಕದ ಹುಚ್ಚು ಹಿಡಿಸಿದವರಲ್ಲಿ ದಿ.ಪಿ.ನಾರಾಯಣ ಪಣಿಕ್ಕರ್ ರವರು ಯುಗ ಪ್ರವರ್ತಕರಾಗಿ ಅಜರಾಮರರಾದವರು. ಈ ಕಾರಣದಿಂದ ಜೂ.19 ರಂದು ಅವರ ಸಂಸ್ಮರಣಾ ದಿನವಾಗಿ ಸರಕಾರ ರಾಜ್ಯಾದ್ಯಂತ ವಾಚನಾ ಸಪ್ತಾಹದ ಮೂಲಕ ಆಚರಿಸುತ್ತಿದೆ.
   ಗಾಂದೀಜಿಯವರಿಂದ ಪ್ರಭಾವಿತರಾಗಿದ್ದ ದಿ.ಪಣಿಕ್ಕರ್ ರವರ ಜೀವನ ಗಾಂಧಿ ಆದರ್ಶಗಳಿಂದ ಪರಿಪುಷ್ಟವಾಗಿತ್ತು.  ಗಾಂಧೀಜಿಯವರ ತತ್ತ್ವ ಮತ್ತು ಮಾರ್ಗದರ್ಶನದಂತೆ ಸದಾ ಖಾದಿಧಾರಿಯಾಗಿದ್ದರು. ಜನರಲ್ಲಿ ಪತ್ರಿಕೆಗಳನ್ನು ಮತ್ತು ಪುಸ್ತಕಗಳನ್ನು ಓದುವಂತೆ ಮಾಡಲು ಆಸಕ್ತಿ ವಹಿಸಿದರು. ಅವರು ಪ್ರಥಮವಾಗಿ ತನ್ನ ಹುಟ್ಟೂರಿನಲ್ಲಿ ಅನಕ್ಷರಸ್ಥರನ್ನು ಗುಂಪುಗಳನ್ನಾಗಿ ಮಾಡಿ ಅವರಿಗೆ ಅಕ್ಷರಾಭ್ಯಾಸ ಮಾಡಿಸಿ ವೃತ್ತ ಪತ್ರಿಕೆಗಳನ್ನು ಓದುವಂತೆ ಮಾಡುವಲ್ಲಿ ಸಫಲರಾದರು. ಪ್ರಥಮವಾಗಿ ತನ್ನ ಗ್ರಾಮದಲ್ಲಿ ಸಹಕಾರಿ ಸಂಘವೊಂದು ಉಚಿತವಾಗಿ ನೀಡಿದ ಸಣ್ಣ ಕೋಣೆಯಲ್ಲಿ ಸನಾತನ ಧರ್ಮ ಎಂಬ ಕಿರು ಗ್ರಂಥಾಲಯವನ್ನು ತೆರೆದರು. ಅನಕ್ಷರತೆಯು ದೇಶಕ್ಕೆ ಬಲುದೊಡ್ಡ ಅಪಮಾನ ಎಂದು ಬಗೆದು ಮಹಾತ್ಮಾ ಗಾಂಧೀಜಿಯವರ ನಿದರ್ೇಶನದಂತೆ ಜನರಲ್ಲಿ ಅನಕ್ಷರತೆಯನ್ನು ಹೋಗಲಾಡಿಸಲು ಅಕ್ಷರ ಜ್ಞಾನದ ಆಂದೋಲನವನ್ನೇ ಕೈಗೊಂಡರು. ಶ್ರೀ ನಾರಾಯಣ ಗುರು, ಅಯ್ಯಂಗಾಳಿ, ಭಟ್ಟತ್ತಿರಿಪ್ಪಾಡ್ ಮೊದಲಾದವರ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಅನಕ್ಷರತೆಯ ವಿರುದ್ಧ ಒಂದು ಕ್ರಾಂತಿಯನ್ನೇ ಉಂಟುಮಾಡಿದರು. 1945ರಲ್ಲೇ ಕೇರಳದಲ್ಲಿ ತಿರುವಾಂಕೂರು ಗ್ರಂಥಶಾಲಾ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿ ಅದರ ಮೂಲಕ ಸುಮಾರು 47 ಗ್ರಾಮೀಣ ಗ್ರಂಥಾಲಯಗಳನ್ನು ಸ್ಥಾಪಿಸಿದರು. ವಾಯಿಚ್ಚು ವಳರುಗ, ಚಿಂದಿಚ್ಚು ವಿವೇಕಂ ನೇಡುಗ' (ಓದಿ ಬೆಳೆಯೋಣ, ಚಿಂತಿಸಿ ಬುದ್ಧಿಶಾಲಿಗಳಾಗೋಣ) ಎಂಬುದು ಪಣಿಕ್ಕರ್ ರವರೇ ಹುಟ್ಟುಹಾಕಿದ ಅಕ್ಷರ ಕ್ರಾಂತಿಯ ಘೋಷಣೆಯಾಗಿ ಪ್ರಭಾವಶಾಲಿಯಾಯಿತು.  `ಹಿರಿಯ, ಕಿರಿಯ ವಿದ್ಯಾಲಯಗಳಿಗೆ ತೆರಳಿ ಶಿಕ್ಷಕರನ್ನು ಸಂಪಕರ್ಿಸಿ ಮಕ್ಕಳಲ್ಲಿ ಓದುವಿಕೆಯ ಹವ್ಯಾಸವನ್ನು ಹೆಚ್ಚಿಸಲು ಶ್ರಮಿಸಿದರು. ಈ ಚಟುವಟಿಕೆಯ ಮುಂದುವರಿಕೆಯ ರೂಪವಾಗಿ ದಿ.ಪಣಿಕ್ಕರ್ ಅವರು ಕಾನ್ಫೆಡ್ (ಕೇರಳ ಅನೌಪಚಾರಿಕ ವಿದ್ಯಾಭ್ಯಾಸ ಪದ್ಧತಿ) ಎಂಬ ಸಂಸ್ಥೆಯನ್ನು ಹುಟ್ಟು ಹಾಕಿದರು. ಈ ಎಲ್ಲ ಸಂಘಟನೆಗಳು ಕೇರಳದ ಶಿಕ್ಷಣ, ಸಂಸ್ಕೃತಿ ಮತ್ತು ಬೆಳವಣಿಗೆಯ ಮೇಲೆ ಗಾಢವಾದ ಪ್ರಭಾವವನ್ನು ಬೀರಿ ಒಂದು ಚಲನಾ ಚಟುವಟಿಕೆಯಾಗಿ ಮಾರ್ಪಟ್ಟಿತ್ತು. ಶಿಕ್ಷಣ ಮತ್ತು ಅಭಿವೃದ್ಧಿ ಸಂದೇಶದ ಕುರಿತಾಗಿ ಇವರು ಕೇರಳದ ಬುಡಕಟ್ಟು ಪಾಕೆಟ್ಸ್ ಎಂಬ ಕೃತಿಯನ್ನು ರಚಿಸಿದರು.
   ದಿ.ಪಣಿಕ್ಕರ್ ಅವರು ಸಾಮಾಜಿಕ ಸೌಹಾರ್ದ ಸಾಮರಸ್ಯ ಬೆಳೆಸುವ ಕೆಲಸಕ್ಕಾಗಿ ರೂಪಿಸಿದ ಸೇವಾ ಗ್ರಾಮದ ಚಳವಳಿಯಲ್ಲಿ ಸಾವಿರಾರು ಕಾರ್ಯಕರ್ತರು ಸೇವೆಗೈದುದರ ಫಲವಾಗಿ ಕೇರಳವು ದೇಶದಲ್ಲಿಯೇ ಸಾಕ್ಷರತಾ ರಾಜ್ಯವಾಗಲು ಸಾಧ್ಯವಾಯಿತು. ಮಾತ್ರವಲ್ಲ 2008ರಲ್ಲಿ ಇಂದಿರಾಗಾಂಧಿ ಮುಕ್ತ ವಿದ್ಯಾಲಯವು ಗ್ರಾಮೀಣ ಜನರಿಗೆ ಅಂತಜರ್ಾಲ ಮೂಲಕ ಶಿಕ್ಷಣಕ್ಕೆ ಅನುವು ಮಾಡಿಕೊಟ್ಟಿತು.
    ಇಂದು ಕೇರಳದಲ್ಲಿ ಗ್ರಾಮ-ಪಟ್ಟಣಗಳಲ್ಲಿ ಸುಮಾರು 6 ಸಾವಿರಕ್ಕಿಂತ ಹೆಚ್ಚು ಗ್ರಂಥಾಲಯಗಳಿದ್ದು, ನೆಟ್ವಕರ್್ಗಳ ಮೂಲಕವೂ ಓದುವಿಕೆಯನ್ನು ಮಾಡಬಹುದಾಗಿದೆ. ಅವರ ಸಾಕ್ಷರತಾ ಆಂದೋಲನಕ್ಕಾಗಿ 2004ರಲ್ಲಿ ಕೇಂದ್ರ ಸರಕಾರವು ಅವರ ಸ್ಮರಣಾರ್ಥ ಅಂಚೆ ಚೀಟಿಯನ್ನು ಹೊರತರುವ ಮೂಲಕ ಗೌರವಿಸಿತು. 2010ರಲ್ಲಿ ಪಿ.ಎನ್.ಪಣಿಕ್ಕರ್ ಫೌಂಡೇಶನ್ನ ಆಶ್ರಯದಲ್ಲಿ ಅವರ ಜನ್ಮಶತಮಾನೋತ್ಸವವನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಅದ್ಧೂರಿಯಿಂದ ಆಚರಿಸಲಾಗಿದೆ. ಮಾತ್ರವಲ್ಲದೆ ಕೇರಳದಾದ್ಯಂತ ಸರಕಾರವು ಸ್ಥಾಪಿಸಿದ ಕೇರಳ ಲೈಬ್ರೆರಿ ಕೌನ್ಸಿಲ್ ಕಾರ್ಯವೆಸಗುತ್ತದೆ. ಪಣಿಕ್ಕರರು ನಿಧನರಾದ ಜೂನ್ 19ರಿಂದ ಕೇರಳದಾದ್ಯಂತ ಶಾಲಾ-ಕಾಲೇಜು ಗ್ರಂಥಾಲಯ ಹಾಗೂ ಸಾರ್ವಜನಿಕ ಸಂಘ ಸಂಸ್ಥೆಗಳಲ್ಲಿ ವಾಚನಾ ಸಪ್ತಾಹಗಳನ್ನು ಆಚರಿಸಲಾಗುತ್ತದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries