HEALTH TIPS

No title

                    ಅಗ್ರಸಾಲೆಯಲ್ಲಿ ಮಂಡಲ ಸಭೆ
     ಬದಿಯಡ್ಕ : ಕುಂಬಳೆ ಸೀಮೆಯ ಪ್ರಧಾನ ದೇವಸ್ಥಾನಗಳಲ್ಲೊಂದಾದ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ಕ್ಷೇತ್ರದ ಜೀಣರ್ೋದ್ಧಾರ ಕಾರ್ಯಗಳು ಭರದಿಂದ ಸಾಗುತ್ತಿದ್ದು, ಈ ಕಾರ್ಯದಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ನೀಚರ್ಾಲು ವಲಯ ಅಧ್ಯಕ್ಷ ಜಯದೇವ ಖಂಡಿಗೆ ಕರೆನೀಡುತ್ತಾ ಜೀಣರ್ೋದ್ಧಾರ ಕಾರ್ಯಗಳ ಮಾಹಿತಿಗಳನ್ನು ನೀಡಿದರು.
ನೀಚರ್ಾಲು ವಲಯದ ಅಗ್ರಸಾಲೆ ಶ್ರೀ ಶಾಸ್ತಾರ ಮಂದಿರದಲ್ಲಿ, ಪರಮಪೂಜ್ಯ ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ನೇತೃತ್ವದ ಮುಳ್ಳೇರಿಯ ಹವ್ಯಕ ಮಂಡಲದ ಇತ್ತೀಚೆಗೆ ನಡೆದ  ಸಭೆಯಲ್ಲಿ ಅವರು ಮಾತನಾಡಿದರು.
ಮುಳ್ಳೇರಿಯ ಮಂಡಲಾಧ್ಯಕ್ಷ ಪ್ರೊ. ಶ್ರೀಕೃಷ್ಣ ಭಟ್ ಸಭೆಯ ಅಧ್ಯಕ್ಷತೆಯಲ್ಲಿ ಕಾರ್ಯದಶರ್ಿ ಬಾಲಸುಬ್ರಹ್ಮಣ್ಯ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮಂಡಲ ಪದಾಧಿಕಾರಿಗಳಾದ ಕುಮಾರ್ ಪೈಸಾರಿ, ಸುಬ್ರಹ್ಮಣ್ಯ ಭಟ್ ಗಬ್ಬಲಡ್ಕ, ಡಾ. ಡಿ.ಪಿ ಭಟ್, ಬಾಲಸುಬ್ರಹ್ಮಣ್ಯ ಭಟ್ ಪರಪ್ಪೆ, ಕೇಶವಪ್ರಸಾದ್ ಎಡೆಕ್ಕಾನ, ದೇವಕಿ ಪನ್ನೆ, ಗೀತಾಲಕ್ಷ್ಮಿ, ಸರಳಿ ಮಹೇಶ, ಸತ್ಯಶಂಕರ ಭಟ್ ಹಿಳ್ಳೆಮನೆ ತಮ್ಮ ವಿಭಾಗಗಳ ಕಾರ್ಯಯೋಜನೆಗಳ ಬಗ್ಗೆ ಅವಲೋಕನ ಮಾಡಿ ಮಾಹಿತಿಗಳನ್ನಿತ್ತರು. ಮಹಾಮಂಡಲಾಧ್ಯಕ್ಷೆ ಈಶ್ವರಿ ಬೇರ್ಕಡವು, ಯಮ್.ವಿ. ಹೆಗ್ಡೆ ಸಿದ್ಧಾಪುರ, ಮಹಾಮಂಡಲ ಕೃಷಿ ಪ್ರಧಾನ ಭಾಸ್ಕರ ಹೆಗ್ಡೆ ಕೊಡ್ಗಿಬೈಲು ಇವರು ಬಾನ್ಕುಳಿ ಮಠದಲ್ಲಿ ಜರಗಲಿರುವ "ಗೋಸ್ವರ್ಗ-ಚಾತುಮರ್ಾಸ್ಯ"ದ ಕುರಿತು ಸಮಗ್ರ ಮಾಹಿತಿಗಳನ್ನಿತ್ತರು. ಮಹಾಮಂಡಲ ಉಲ್ಲೇಖ ಪ್ರಧಾನ ಗೋವಿಂದ ಬಳ್ಳಮೂಲೆ ಸಂಘಟನೆಯ ಕಾರ್ಯರೂಪದ ಕುರಿತು ವಿವರಣೆಯನ್ನಿತ್ತರು.
ಇದೇ ಸಂದರ್ಭದಲ್ಲಿ ಉನ್ನತ ಅಂಕಗಳಿಸಿದ ವಲಯದ ವಿದ್ಯಾಥರ್ಿಗಳನ್ನು ಗೌರವಿಸಿ ಸನ್ಮಾನಿಸಲಾಯಿತು. ಶ್ರೀ ಮಠದ ಅಂಗಸಂಸ್ಥೆ ಮಹಿಳೋದಯದ ವತಿಯಿಂದ ಬಜಕೂಡ್ಲು ಗೋಶಾಲೆಯಲ್ಲಿ ನಿಮರ್ಾಣವಾಗುತ್ತಾ ಇರುವ ಗೋವರ್ಧನ ಯಾಗಮಂಟಪ ಯೋಜನೆ ಹಾಗೂ ಪಳ್ಳತ್ತಡ್ಕ ವಲಯದ ಕೆಡೆಂಜಿ ವೆಂಕಟೇಶ್ವರಿ ಅಮ್ಮನವರ ಮನೆ ದುರಸ್ಥಿಗೆ ನೀಡಿದ ದೇಣಿಗೆ ಸಮರ್ಪಣೆಯನ್ನು ಹಸ್ತಾಂತರಿಸಲಾಯಿತು. ಸುಬ್ರಹ್ಮಣ್ಯ ನೆಕ್ಕರೆಕಳೆಯ ಗವ್ಯೋದ್ಯಮ, ಗವ್ಯೋತ್ಪನ್ನಗಳ ವಿಶೇಷತೆ ಬಗ್ಗೆ ಮಾಹಿತಿಗಳನ್ನಿತ್ತರು. ರಾಮಮಂತ್ರ, ಶಾಂತಿಮಂತ್ರ, ಗೋಸ್ತುತಿ, ಧ್ವಜರೋಹಣ, ಶಂಖನಾದದೊಂದಿಗೆ ಸಭೆ ಮುಕ್ತಾಯವಾಯಿತು.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries