HEALTH TIPS

No title

            ಭೌಗೋಳಿಕ ಕೌತುಕ: ನಿನ್ನೆ ವರ್ಷದ ದೀರ್ಘಕಾಲ ಹಗಲು ದಿನ
    ನವದೆಹಲಿ: ನಿನ್ನೆ ವಿಶ್ವದಾದ್ಯಂತ ಯೋಗ ದಿನಾಚರಣೆ ಆಚರಿಸುತ್ತಿರುವಂತೆಯೇ  ವರ್ಷದ ದೀರ್ಘಕಾಲ ಹಗಲು ಹೊಂದಿರುವ ದಿನ ಕೂಡ ಆಗಿತ್ತು.
       ವಿಶ್ವಾದ್ಯಂತ ಗುರುವಾರ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಮಿಂದೆದ್ದಿರುವ ಮಧ್ಯೆ ವರ್ಷದ ದೀರ್ಘಕಾಲ ಹಗಲು ಹೊಂದಿರುವ ದಿನವಾಗಿ ಗಮನ ಸೆಳೆಯಿತು.  ಜೂನ್ 21 ದೀರ್ಘಕಾಲ ಹಗಲು ಹೊಂದಿರುವ ದಿನ, ವರ್ಷದಲ್ಲಿ ಉತ್ತರ ಗೋಳಾರ್ಧದ ಅತಿ ಉದ್ದದ ಹಾಗೂ ದಕ್ಷಿಣ ಗೋಳಾರ್ಧದ ಅತಿ ಚಿಕ್ಕ ದಿನವನ್ನು ಅಂತರಾಷ್ಟ್ರೀಯ ಯೋಗ ದಿನಾಚರಣೆಗೆ ಆಯ್ಕೆ ಮಾಡಲಾಗಿದೆ.
    ವಿಜ್ಞಾನಿಗಳು ನೀಡಿರುವ ಮಾಹಿತಿಯಂತೆ ಗುರುವಾರ ಬ್ರಿಟನ್ ನಲ್ಲಿ ಸುಧೀರ್ಘ 16 ಗಂಟೆಗಳ ಕಾಲ ಹಗಲು ಹೊಂದಿತ್ತು. 4.52ಕ್ಕೆ ಸೂಯರ್ೋದಯವಾಗಿ ರಾತ್ರಿ 9.27ಕ್ಕೆ ಸೂಯರ್ಾಸ್ತವಾಯಿತು. ಇದೇ ಕಾರಣಕ್ಕೆ ಇದು ವರ್ಷದ ದೀರ್ಘಕಾಲ ಹಗಲುದಿನವೆಂದು ಕರೆಯುತ್ತಾರೆ. ಡಿಸೆಂಬರ್ 21 ವರ್ಷದ ಕಡಿಮೆ ಹಗಲಿನ ರಾತ್ರಿಯಾಗಿರುತ್ತದೆ. ಅಂದು ಸೂರ್ಯ ಬೆಳಗ್ಗೆ 8.4ಕ್ಕೆ ಉದಯಿಸಿ ಮಧ್ಯಾಹ್ನ 3.52ಕ್ಕೆ ಮುಳುಗುತ್ತಾನೆ ಎಂದು ತಜ್ಞರು ಹೇಳಿದ್ದಾರೆ.
       ಜೂನ್ 21 ಮತ್ತು ಯೋಗ ದಿನದ ನಂಟು:
  ಜೂನ್ 21 ರ ದಿನವನ್ನು ಬೇಸಿಗೆ ಅಯನ ಸಂಕ್ರಾಂತಿ ದಿನವೆಂದು (ವರ್ಷದಲ್ಲಿನ ಅತ್ಯಂತ ಹೆಚ್ಚು ಹಗಲುಳ್ಳ ದಿನ) ಕರೆಯಲಾಗುತ್ತದೆ!! ಯೋಗದ ದೃಷ್ಟಿಕೋನದಲ್ಲಿ ಇದು ಅತ್ಯಂತ ಹೆಚ್ಚು ಮಹತ್ವ ಪಡೆದಿದೆಯಲ್ಲದೇ, ಮುಂಗಾರು ಆಗಮನವಾಗಿ ಆಷಾಢದ ಗಾಳಿ ಮೈಮನ ಜಡಗಟ್ಟಿ ಹೆಚ್ಚಿನ ಚಟುವಟಿಕೆಗಳಿಂದ ಕೂಡಿದ ಕಾಲವಾಗಿದೆ. ಸೂರ್ಯನ ಪ್ರಖರತೆ ಒಂದೊಂದು ಕಾಲಕ್ಕೆ ಒಂದೊಂದು ಪ್ರದೇಶಕ್ಕೆ ಒಂದೊಂದು ರೀತಿಯಾಗಿರುತ್ತದೆ. ಆದರೆ, ಈ ಕಾಲದಲ್ಲಿ ಅನೇಕ ರಾಷ್ಟ್ರಗಳಲ್ಲಿ ಜಡತ್ವ ಕಳೆದು ಹೊಸ ಹುರುಪು ತುಂಬುವ ಕಾಲ, ಜೂನ್ 21 ದೀರ್ಘಕಾಲ ಹಗಲು ಹೊಂದಿರುವ ದಿನವೂ ಆಗಿದೆ. ಆದಿ ಕಾಲದಲ್ಲಿ ಸೂಯರ್ಾಭಿಮುಖವಾಗಿ ದೃಷ್ಟಿ ನೆಟ್ಟು ``ಧೀ ಶಕ್ತಿ'' ಉದ್ದೀಪನಗೊಳಿಸುತ್ತಿದ್ದ ದಿನ ಇದಾಗಿದೆ ಎಂದು ನಂಬಲಾಗಿದೆ. ಹಾಗಾಗಿ ಈ ಪರಿವರ್ತನೆಯು ಯೋಗ ಅಭ್ಯಾಸಿಗರಿಗೆ ಬೆಂಬಲಿಸಲಾಗುತ್ತದೆ ಎಂಬ ನಂಬಿಕೆಯಿದೆ.
   ಯೋಗಾಭ್ಯಾಸ, ವಿಶ್ವಕ್ಕೆ ಭಾರತ ನೀಡಿದ ಅದ್ಭುತ ಕಾಣಿಕೆ. ಈಗ ವಿಶ್ವಯೋಗ ದಿನಾಚರಣೆ ಇಡೀ ವಿಶ್ವಕ್ಕೆ ಭಾರತದ ಕೊಡುಗೆಯಾಗಿದೆ. ಇವೆಲ್ಲದರ ಹೊರತಾಗಿ, ಶಿವ ದೇವರು ಈ ದಿನದಂದು ಉಳಿದ ಮಾನವ ಜನಾಂಗಕ್ಕೆ ಯೋಗದ ಜ್ಞಾನವನ್ನು ನೀಡಲು ಪ್ರಾರಂಭಿಸಿದನೆಂಬ ನಂಬಿಕೆಯಿದೆ. ಅಷ್ಟೇ ಅಲ್ಲದೇ, ಶಿವ, ಈಶ್ವರ, ಬೋಲೆನಾಥನೆಂದು ಕರೆಸಿಕೊಳ್ಳುವ ಮಹಾದೇವನು ಯೋಗದ ಆದಿ ಗುರು ಆದ ದಿನವೂ ಕೂಡಾ ಹೌದೆಂಬ ನಂಬಿಕೆಯಿದೆ. ಈ ಕಾರಣದಿಂದ ಜೂ. 21  ಸೂಕ್ತ ಎಂದು ಪ್ರಧಾನಿ ಮೋದಿ ಅವರು ಆಯ್ಕೆ ಮಾಡಿಕೊಂಡಿದ್ದಾರೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries