ಮಳೆಗಾಲದ ರೋಗಗಳು ಮತ್ತು ನಿಯಂತ್ರಣದ ಬಗ್ಗೆ ಮಾಹಿತಿ ಶಿಬಿರ
ಮುಳ್ಳೇರಿಯ: ಬೀರಂಗೋಳು ನವದುಗರ್ಾ ಆಟ್ಸರ್್ ಮತ್ತು ಸ್ಪೋಟ್ಸರ್್ ಕ್ಲಬ್ಬಿನ ವತಿಯಿಂದ ಮಳೆಗಾಲದ ರೋಗಗಳು ಮತ್ತು ನಿಯಂತ್ರಣದ ಬಗ್ಗೆ ಮಾಹಿತಿ ಶಿಬಿರ ಬೀರಂಗೋಳು ಕ್ಲಬ್ ಕಟ್ಟಡದಲ್ಲಿ ಇತ್ತೀಚೆಗೆ ನಡೆಯಿತು.
ಕಾರಡ್ಕ ಗ್ರಾಮ ಪಂಚಾಯಿತಿ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ರೇಣುಕಾದೇವಿ ಶಿಬಿರವನ್ನು ಉದ್ಘಾಟಿಸಿದರು. ಕ್ಲಬ್ಬಿನ ಅಧ್ಯಕ್ಷ ಶಶಿಕುಮಾರ್.ಬಿ ಅಧ್ಯಕ್ಷತೆ ವಹಿಸಿದ್ದರು. ಮುಳ್ಳೇರಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಹೆಲ್ತ್ ಇನ್ಸ್ಫೆಕ್ಟರ್ ಸುರೇಶ್ ಕುಮಾರ್.ಕೆ ತರಗತಿಯನ್ನು ನಡೆಸಿಕೊಟ್ಟರು. ಮಳೆಗಾಲದಲ್ಲಿ ಹರಡುವ ಸಾಂಕ್ರಾಮಿಕ ರೋಗಗಳು ಹಾಗೂ ಅವುಗಳು ಹರಡಲಿರುವ ಪ್ರಮುಖ ಕಾರಣಗಳು, ತಡೆಗಟ್ಟಲು ನಾವು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು, ಆರೋಗ್ಯ ಕೇಂದ್ರದಿಂದ ನೀಡುವ ಸವಲತ್ತುಗಳು ಹಾಗೂ ಶುಚಿತ್ವದ ಕುರಿತಾದ ಸಮಗ್ರ ಮಾಹಿತಿಯನ್ನು ಅವರು ನೀಡಿದರು.
ಇದೇ ಸಂದರ್ಭದಲ್ಲಿ ಹತ್ತನೇ ತರಗತಿ ಮತ್ತು ಪ್ಲಸ್ಟು ತರಗತಿಯಲ್ಲಿ ವಿಜೇತರಾದವರನ್ನು ಕ್ಲಬ್ಬಿನ ವತಿಯಿಂದ ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಕ್ಲಬ್ ಸದಸ್ಯರು, ಕುಟುಂಬಶ್ರೀ ಸದಸ್ಯೆಯರು ಮೊದಲಾದವರು ಭಾಗವಹಿಸಿದ್ದರು.
ಕಾರ್ಯದಶರ್ಿ ಮನೀಶ್ ಕುಮಾರ್.ಬಿ ಸ್ವಾಗತಿಸಿ, ಸುಧಾಕರ ಬೀರಂಗೋಳು ವಂದಿಸಿದರು. ಪ್ರದೀಪ್.ಕೆ.ವಿ. ಕಾರ್ಯಕ್ರಮ ನಿರೂಪಿಸಿದರು.