ಋಷಿಯಾದವ ಮಾತ್ರ ಕವಿಯಾಗಬಲ್ಲ-ರಾಧಾಕೃಷ್ಣ ಕೆ. ಉಳಿಯತ್ತಡ್ಕ
ಸವಿ ಹೃದಯದ ಕವಿಮಿತ್ರರ ಮುಂಗಾರು ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಅಭಿಮತ
ಪೆರ್ಲ: ವರ್ತಮಾನ ಕಾಲದ ಸಮಕಾಲೀನ ವಸ್ತು ವಿಷಯಗಳಿಗೆ ಧ್ವನಿಯಾಗಿ, ವ್ಯವಸ್ಥೆಗೆ ಬೆಳಕಾಗಿ ಕಾವ್ಯಗಳು ಬೆಳೆಯಬೇಕು. ಒಂದು ಓದಿಗೆ ಒಂದು ಅರ್ಥವನ್ನು ನೀಡಿದರೆ ಮತ್ತೊಂದು ಓದಿಗೆ ಬೇರೆಯದೇ ಒಂದರ್ಥವ ನೀಡುವ ಕಾವ್ಯಗಳು ಅನುಭವ, ಅಧ್ಯಯನದ ಮಿತಿಯಲ್ಲಿ ಓದುಗನನ್ನು ಮುಟ್ಟುತ್ತದೆ ಎಂದು ಹಿರಿಯ ಸಾಹಿತಿ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಅಭಿಪ್ರಾಯ ವ್ಯಕ್ತಪಡಿಸಿದರು.
ಪೆರ್ಲದ ಸವಿ ಹೃದಯದ ಕವಿಮಿತ್ರರು ತಂಡದಿಂದ ಭಾನುವಾರ ಸಂಜೆ ಪೆರ್ಲ ಸತ್ಯನಾರಾಯಣ ಫ್ರೌಢಶಾಲಾವರಣದಲ್ಲಿ ನಡೆದ ಮುಂಗಾರು ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮನದೊಳಗಿನ ವಿಶಾದ, ಸಂತಸಗಳ ಸ್ವರೂಪಗಳ ಸಂದರ್ಭಕ್ಕನುಸರಿಸಿ ಸೃಷ್ಟಿಸಲ್ಪಡುವ ಕವಿತೆ, ಸಾಹಿತ್ಯಗಳು ಓದುಗನ ಮೇಲೆ ಬೀರುವ ಪರಿಣಾಮ ಸಾಹಿತ್ಯ ಚಳವಳಿ, ಆಂದೋಲನಕ್ಕೆ ನಾಂದಿಯಾಗಿ ಹೊಸ ಹುಟ್ಟಿಗೆ ಕಾರಣವಾಗುತ್ತದೆ. ಕಾವ್ಯಗಳು ಹೋರಾಟಕ್ಕೆ ಶಕ್ತಿ ನೀಡುತ್ತದೆ ಎಂದು ಅವರು ತಿಳಿಸಿದರು.ವ್ಯಕ್ತಿ ಋಷಿಯಾದರೆ ಮಾತ್ರ ಕವಿಯಾಗ ಬಲ್ಲ. ಆದುದರಿಂದ ಸಾಹಿತಿ ವರ್ತಮಾನದ ಘಟನಾವಳಿಗಳಿಗೆ ಸಾಕ್ಷಿಯಾಗಿ ಚಿಕಿತ್ಸಕ ದೃಷ್ಟಿಕೋನದಿಂದ ವಿಶ್ಲೇಷಣಾತ್ಮಕನಾಗಿ ಗ್ರಹಿಸಿ ಅಕ್ಷರ ರೂಪದಲ್ಲಿ ವಸ್ತು ವಿಷಯಗಳನ್ನು ಹೇಳಬಲ್ಲವನಾಗಿರುತ್ತಾನೆ ಎಂದು ಅವರು ಈ ಸಂದರ್ಭ ತಿಳಿಸಿದರು.
ಹಿರಿಯ ಸಾಹಿತಿ ಹರೀಶ್ ಪೆರ್ಲ ದೀಪ ಬೆಳಗಿಸಿ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಯೊಳಗಿರುವ ಕವಿತ್ವಕ್ಕೆ ಸಾಕಷ್ಟು ಬೆಂಬಲ ಪ್ರೋತ್ಸಾಹ ಲಭಿಸಲ್ಪಡಬೇಕು. ಈ ನಿಟ್ಟಿನಲ್ಲಿ ಕವಿಗೋಷ್ಠಿ ಪ್ರಸ್ತುತ ಎಂದು ತಿಳಿಸಿದರು.ಇಂದು ಸಾಹಿತ್ಯ ಹೊಸ ನಮೂನೆಯಲ್ಲಿ ಕವಲು ಹಾದಿಯಲ್ಲಿದ್ದು, ಮೂಲ ಸತ್ವಗಳಿಂದ ಬೇರಾಗದೆ ಬೆಳವಣಿಗೆ ಪಡೆಯಲಿ ಎಂದು ತಿಳಿಸಿದರು.
ಉಕ್ಕಿನಡ್ಕ ಅನುದಾನಿತ ಶಾಲಾ ಸಂಚಾಲಕ ಪಿ.ಜಿ.ಶಂಕರನಾರಾಯಣ ಭಟ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು. ಯುವ ಕವಿಗಳಾದ ಶಾರದಾ ಭಟ್, ದಯಾನಂದ ರೈ ಕಳುವಾಜೆ, ಶಾರದಾ ಭಟ್ ಕಾಡಮನೆ, ದೇವರಾಜ್ ಕೆ.ಎಸ್, ಶಮರ್ಿಳಾ ಬಜಕ್ಕೂಡ್ಳು, ಅಕ್ಷತಾರಾಜ್ ಪೆರ್ಲ, ಚಿತ್ರಕಲಾ ದೇವರಾಜ್ ಆಚಾರ್ಯ, ಬಾಲಕೃಷ್ಣ ಬೇರಿಕೆ, ಶ್ವೇತಾ ಕಜೆ, ಸುಭಾಶ್ ಪೆರ್ಲ, ಮಮತಾ ಬಜಕ್ಕೂಡ್ಳು, ಚಿನ್ಮಯಕೃಷ್ಣ ಕಡಂದೇಲು, ಡಾ.ಎಸ್.ಎನ್.ಭಟ್, ಲತಾ ಆಚಾರ್ಯ ಬನಾರಿ, ಪುರುಷೋತ್ತಮ ಭಟ್ ಕೆ, ಮಣಿರಾಜ್ ವಾಂತಿಚ್ಚಾಲ್, ಚಿತ್ತರಂಜನ್ ಕಡಂದೇಲು, ಆನಂದ ರೈ ಅಡ್ಕಸ್ಥಳ ಸ್ವರಚಿತ ಕವಿತೆಗಳನ್ನು ವಾಚಿಸಿದರು.
ಆನಂದ ರೈ ಅಡ್ಕಸ್ಥಳ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಪುರುಷೋತ್ತಮ ಭಟ್ ಕೆ ವಂದಿಸಿದರು. ಕಾರ್ಯಕ್ರಮ ಸಂಯೋಜಕ ಮಣಿರಾಜ್ ವಾಂತಿಚ್ಚಾಲ್ ಸಂಘಟನೆಯ ರೂಪುರೇಖೆ, ಸಾಹಿತ್ಯ ಚಟುವಟಿಕೆಗಳ ಬಗ್ಗೆ ಮಾತನಾಡಿದರು.