ಕ್ವೀನ್ ಜಾತಿಯ ಅನಾನಸ್ ಇನ್ನು ತ್ರಿಪುರಾ ರಾಜ್ಯದ ಹಣ್ಣು: ರಾಷ್ಟ್ರಪತಿ ಕೋವಿಂದ್ ಘೋಷಣೆ
ಅಗರ್ತಲಾ(ತ್ರಿಪುರಾ): ರಾಷ್ಟ್ರಪತಿ ರಾಮನಾಥ ಕೋವಿಂದ್ ಗುರುವಾರದಿಂದ ಎರಡು ದಿನಗಳ ಕಾಲ ತ್ರಿಪುರಾ ರಾಜ್ಯ ಪ್ರವಾಸ ಕೈಗೊಂಡಿದ್ದು ಈ ವೇಳೆ 'ಕ್ವೀನ್' ತಳಿಯ ಅನಾನಸ್ ಹಣ್ಣನ್ನು ತ್ರಿಪುರಾದ ರಾಜ್ಯದ ಹಣ್ಣು ಎಂದು ಘೋಷಿಸಿದ್ದಾರೆ.
ಗುರುವಾರ ನಡೆದ ಸಮಾರಂಭವೊಂದರಲ್ಲಿ ಈ ಘೋಷಣೆ ಮಾಡಿದ್ದ ರಾಷ್ಟ್ರಪತಿ " ಕ್ವೀನ್ ತಳಿಯ ಅನಾನಸ್ ಈ ರಾಜ್ಯದ ಹಣ್ಣಾಗಿರಲಿದೆ. ಇದು ತ್ರಿಪುರಾವನ್ನು ಜಾಗತಿಕ ಮಾರುಕಟ್ಟೆಯೊಡನೆ ಜೋಡಿಸಲಿದ್ದು ರಾಜ್ಯದ ರಫ್ತು ವಹಿವಾಟು ಹೆಚ್ಚಿಸಲಿದೆ" ಎಂದಿದ್ದಾರೆ.
ಕ್ವೀನ್ ತಳಿಯ ಅನಾನಸ್ ನ್ನು ಬಾಂಗ್ಲಾದೇಶ ಸೇರಿ ಹಲವು ರಾಷ್ಟ್ರಗಳು ಆಮದು ಮಾಡಿಕೊಳ್ಳುವ ವಿಶ್ವಾಸವಿರುವುದಾಗಿ ರಾಷ್ಟ್ರಪತಿ ಕೋವಿಂದ್ ಹೇಳಿದ್ದಾರೆ. ಬಾಂಗ್ಲಾ ಸೇರಿದಂತೆ ಏಷ್ಯಾದ ಪ್ರಮುಖ ರಾಷ್ಟ್ರಗಳೊಡನೆ ತ್ರಿಪುರಾ ವ್ಯಾಪಾರ ಸಂಪರ್ಕ ಬೆಳೆಸಿಕೊಳ್ಳಲು ಇದು ನೆರವಾಗಲಿದೆ. ಇದೇ ವೇಳೆ ಈಶಾನ್ಯ ರಾಜ್ಯಗಳ ಅಭಿವೃದ್ದಿಗಾಗಿ ಕೇಂದ್ರ ಸಕರ್ಾರ ಆಕ್ಟ್ ಈಸ್ಟ್ ನೀತಿಯನ್ನು ರೂಪಿಸಿದೆ. ಇದು ಮಹತ್ವದ ಯೋಜನೆಯಾಗಿದ್ದು ಸಕರ್ಾರ ಈ ರಾಜ್ಯಗಳ ಪ್ರಗತಿಯನ್ನು ಗಂಭೀರವಾಗಿ ಪರಿಗಣಿಸಿದೆ ಎಂದು ಅವರು ಹೇಳಿದ್ದಾರೆ.