HEALTH TIPS

No title

                 ಪಠ್ಯೇತರ ಚಟುವಟಿಕೆಗಳಲ್ಲೂ ಪಾಲ್ಗೊಳ್ಳುವುದು ಶಿಕ್ಷಣದ ಯಶಸ್ಸು- ಪಿ.ಜನಾರ್ಧನ ಮಾಸ್ತರ್
   ಬದಿಯಡ್ಕ: ಶಿಕ್ಷಣ ಕೇವಲ ಪಠ್ಯಕ್ಕೆ ಮಾತ್ರ ಸೀಮಿತವಾಗದೆ ಪಠ್ಯೇತರ ಚಟುವಟಿಕೆಗಳಲ್ಲೂ ವಿದ್ಯಾಥರ್ಿಗಳಿಗೆ ಸಮರ್ಪಕ ಮಾರ್ಗದರ್ಶನ ಲಭ್ಯಗೊಂಡು ಬಹು ಕ್ಷೇತ್ರಗಳಲ್ಲಿ ಮುಂದುವರಿಯಲು ಅವಕಾಶವಾದಾಗ ಶಿಕ್ಷಣ ಪೂರ್ಣತೆ ಪಡೆಯುತ್ತದೆ. ವಿದ್ಯಾಥರ್ಿಗಳು ಕಲಿಕೆಯ ಜೊತೆಗೆ ಓದು ಮತ್ತು ಇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಭವಿಷ್ಯದ ಯಶಸ್ಸಿನ ಮೆಟ್ಟಲುಗಳು ಎಂದು ಮುಂಡಿತ್ತಡ್ಕ ಎಸ್ಎಂಎಎಯುಪಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ವ್ಯವಸ್ಥಾಪಕ ಪಿ. ಜನಾರ್ಧನ ಮಾಸ್ತರ್ ಅಭಿಪ್ರಾಯ ವ್ಯಕ್ತಪಡಿಸಿದರು.
   ಮುಂಡಿತ್ತಡ್ಕದ ಮಂಜಯ್ಯ ಮೆಮೋರಿಯಲ್ ಅನುದಾನಿತ ಹಿರಿಯ ಪ್ರಾಥಮಿಕ  ಶಾಲೆಯಲ್ಲಿ ಮಂಗಳವಾರ ಅಪರಾಹ್ನ ನಡೆದ ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆಯ ಪ್ರಸ್ತುತ ವರ್ಷದ ಕಾರ್ಯಚಟುವಟಿಕೆಗಳ ಆರಂಭ, ವಾಚನಾ ವಾರ ಮತ್ತು ಶಾಲೆಯ ವಿವಿಧ ಕ್ಲಬ್ ಗಳನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
   ಇಂದು ಶಿಕ್ಷಣದ ಅರ್ಥ ವಿಸ್ತಾರತೆ ಹೊಂದಿದ್ದು, ಅವಕಾಶಗಳು ಸಾಕಷ್ಟಿವೆ. ಆದರೆ ಸಕಾಲಕ್ಕೆ ಅವುಗಳನ್ನು ಬಳಸುವಲ್ಲಿ ಮಾರ್ಗದರ್ಶನ ಹಾಗೂ ಛಲ ಬೇಕು ಎಂದು ತಿಳಿಸಿದ ಅವರು, ರಾಜ್ಯದಲ್ಲಿ ಲೈಬ್ರರಿ ಚಟುವಟಿಕೆಗಳ ವಿಸ್ತಾರತೆಗೆ ಕೆ.ಎನ್ ಪಣಿಕ್ಕರ್ ರವರ ಮಹಾನ್ ಕೊಡುಗೆ ಎಂದಿಗೂ ಅನುಸರಣೀಯ ಎಂದು ತಿಳಿಸಿದರು.
   ಶಾಲಾ ಹಿರಿಯ ಶಿಕ್ಷಕಿ ಸಾವಿತ್ರಿ ಟೀಚರ್ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ನಿವೃತ್ತ ಸಂಸ್ಕೃತ ಶಿಕ್ಷಕ ಉದಯಭಾನು ಅವರು ಮಾತನಾಡಿ ಶಿಕ್ಷಣದ ಮೂಲ ತತ್ವವಾದ ಜ್ಞಾನ ಗಳಿಸಿವಿಕೆ ಕೇವಲ ಪಠ್ಯಗಳಿಂದ ಪೂರ್ಣವಾಗದು. ಜ್ಞಾನವೆಂಬುದು ಅರ್ಥ ವಿಸ್ತಾರತೆಯ ಬಹುಕೋನಗಳ ಸಾಗರವಾಗಿದ್ದು, ಪ್ರತಿಯೊಬ್ಬ ವಿದ್ಯಾಥರ್ಿಯ ಒಳತೋಟಿಗಳಿಗೆ ಬೆಲೆನೀಡಿ ಬೆಳೆಸುವ ಶಕ್ತಿಹೊಂದಿದೆ ಎಂದು ತಿಳಿಸಿದರು. ದಿ.ಕೆ.ಎನ್.ಪಣಿಕ್ಕರ್ ಮಾಡಿರುವ ಪುಸ್ತಕ ಪ್ರೀತಿಯ ಕ್ರಾಂತಿ ವ್ಯಾಪಕ ಬದಲಾವಣೆಗಳಿಗೆ ಕಾರಣವಾಗಿ ಜ್ಞಾನದಾಹಿಗಳ ಸಂತೃಪ್ತಿಗೆ ಕಾರಣವಾಗಿರುವುದು ಈ ನೆಲದ ಪುಣ್ಯ ಎಂದು ತಿಳಿಸಿದರು. ಆಸಕ್ತವಾದ ಸದಭಿರುಚಿಯ ಕ್ಷೇತ್ರಗಳಲ್ಲಿ ಮುನ್ನಡೆಯುವಲ್ಲಿ ವಿದ್ಯಾಥರ್ಿಗಳಿಗೆ ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆ ಉತ್ತಮ ಸೇತುವೆಯಾಗಿ ಭವಿಷ್ಯ ರೂಪಿಸುವಲ್ಲಿ ನೆರವಾಗಿದೆ. ಗ್ರಾಮೀಣ ಪ್ರದೇಶಗಳ ವಿದ್ಯಾಥರ್ಿಗಳೂ ಈ ನೆಲೆಯಲ್ಲಿ ಹೆಚ್ಚು ಆಸಕ್ತರಾಗಬೇಕು ಎಂದು ಅವರು ಕರೆನೀಡಿದರು.
   ಪತ್ರಕರ್ತ ಪುರುಷೋತ್ತಮ ಭಟ್ ಕೆ, ಶಾಲಾ ನೌಕರ ಸಂಘದ ಕಾರ್ಯದಶರ್ಿ ಪದ್ಮನಾಭ ಮಾಸ್ತರ್ ಉಪಸ್ಥಿತರಿದ್ದು ಮಾತನಾಡಿದರು. ಶಾಲಾ ಮುಖ್ಯೋಪಾಧ್ಯಾಯ ಗಣೇಶ್ ಕಾಮತ್ ಪ್ರಾಸ್ತಾವಿಕವಾಗಿ ಮಾತನಾಡಿ ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆಯ ಕಾರ್ಯಚಟುವಟಿಕೆ, ಶಾಲೆಯ ವಿವಿಧ ಕ್ಲಬ್ ಗಳ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿ ಸ್ವಾಗತಿಸಿದರು. ಅಶ್ವಿನಿ ಟೀಚರ್ ವಂದಿಸಿದರು. ಶಿಕ್ಷಕ ಸಂತೋಷ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಪ್ರಶಾಂತ್ಕುಮಾರ್ ಶೆಟ್ಟಿ ಸಹಕರಿಸಿದರು.
   

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries