HEALTH TIPS

No title

               ಅಧಿಕಾರಿಗಳು ಜನಪರರಾಗಬೇಕು-ಸಚಿವ ಇ.ಚಂದ್ರಶೇಖರನ್
                ಬೆಳ್ಳೂರು ಗ್ರಾಮಾಧಿಕಾರಿಗಳ ನೂತನ ಕಟ್ಟಡ ಉದ್ಘಾಟನೆ
    ಮುಳ್ಳೇರಿಯ: ಸರಕಾರಿ ಸೇವೆಯನ್ನು ಯಾವುದೇ ದೂರುಗಳಿಲ್ಲದೆ ಕ್ರೀಯಾತ್ಮಕವಾಗಿ ಮುನ್ನಡೆಸುವುದು ಅಧಿಕಾರಿಗಳ ಆದ್ಯ ಕರ್ತವ್ಯವಾಗಬೇಕು. ಜನಸಾಮಾನ್ಯರಿಗೆ ಲಭಿಸಬೇಕಾದ ಸೌಕರ್ಯಗಳನ್ನು ಸವಾಲುಗಳನ್ನು ಸ್ವೀಕರಿಸಿ ಒದಗಿಸಿಕೊಡುವ ಜವಾಬ್ದಾರಿಯಿರುವ ಅಧಿಕಾರಿ ವರ್ಗ ಕರ್ತವ್ಯ ಲೋಪವೆಸಗುವುದನ್ನು ಸರಕಾರ ಸಹಿಸದು ಎಂದು ರಾಜ್ಯ ಕಂದಾಯ ಸಚಿವ ಇ.ಚಂದ್ರಶೇಖರನ್ ತಿಳಿಸಿದರು.
   ಬೆಳ್ಳೂರು ಗ್ರಾಮಾಧಿಕಾರಿಗಳ ನೂತನ ಕಾಯರ್ಾಲಯ ಕಟ್ಟಡವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
   ಅಧಿಕಾರಿಗಳ ಕರ್ತವ್ಯ ಲೋಪವು ಜನಸಾಮಾನ್ಯರಿಗೆ ಪ್ರತ್ಯಕ್ಷವಾಗಿಯೂ, ಆಡಳಿತ ನಡೆಸುವ ಸರಕಾರಕ್ಕೆ ಪರೋಕ್ಷವಾಗಿಯೂ ಬಾಧಿಸಿ ವ್ಯಾಪಕ ಸಮಸ್ಯೆಗಳಿಗೆ ಎಡೆಮಾಡಿಕೊಡುವುದರಿಂದ ಸರಕಾರಿ ಸೇವೆಗಳನ್ನು ಕ್ಲಪ್ತ ಸಮಯಕ್ಕೆ ಸಮರ್ಪಕವಾಗಿ ಒದಗಿಸುವಲ್ಲಿ ಸರಕಾರ ಕಟಿಬದ್ದವಾಗಿದೆ ಎಮದು ಸಚಿವರು ತಿಳಿಸಿದರು. ಸರಕಾರಿ ಕಾಯರ್ಾಲಯಗಳು ಜನಪ್ರೀತಿಯ ಕಾಯರ್ಾಲಯಗಳಾಗಿ ಬದಲಾಗಬೇಕು. ಅಧಿಕಾರಿ ದರ್ಪಗಳ ಕಾಲ ಮುಗಿದಿರುವುದನ್ನು ಅಧಿಕಾರಿಗಳು ಗಮನದಲ್ಲಿರಿಸಬೇಕಾದುದು ಇಂದಿನ ಅಗತ್ಯ ಎಮದು ಸಚಿವರು ಕಿವಿಮಾತು ಹೇಳಿದರು.ಕಳೆದ ಒಮದು ವರ್ಷದಲ್ಲಿ ಆಡಳಿತ ನಡೆಸುವ ರಾಜ್ಯದ ನೂತನ ಸರಕಾರಕ್ಕೆ ಗ್ರಾಮಕಚೇರಿಗಳ ಅಭಿವೃದ್ದಿಯ ನಿಟ್ಟಿನಲ್ಲಿ ವಿವಿಧ ಉಪಕ್ರಮಗಳನ್ನು ಕೈಗೊಳ್ಳುವಲ್ಲಿ ಸಫಲವಾಗಿದೆ ಎಂದು ತಿಳಿಸಿದ ಅವರು ರಾಜ್ಯದ 1664 ಗ್ರಾಮ ಕಚೇರಿ ಅಧಿಕಾರಿಗಳ ಸಭೆ ನಡೆಸಿ ವಿವಿಧ ಅಭಿವೃದ್ದಿಗೆ ಚಚರ್ಿಸಲಾಗಿದೆ ಎಂದು ತಿಳಿಸಿದರು.
  ಸಮಾರಂಭದಲ್ಲಿ ಕೋಡೋಬೆಳ್ಳೂರು ಗ್ರಾಮ ಪಂಚಾಯತು ಅಧ್ಯಕ್ಷ ಸಿ.ಕುಂಞಿಕಣ್ಣನ್ ಅಧ್ಯಕ್ಷತೆ ವಹಿಸಿದ್ದರು. ಪರಪ್ಪ ಬ್ಲಾಕ್ ಪಂಚಾಯತು ಅಧ್ಯಕ್ಷ ವಿ.ರಾಜನ್, ಜಿಲ್ಲಾ ಪಂಚಾಯತು ಸದಸ್ಯ ಇ.ಪದ್ಮಾವತಿ, ಕೋಡೋಬೆಳ್ಳೂರು ಗ್ರಾಮ ಪಂಚಾಯತು ಉಪಾಧ್ಯಕ್ಷೆ ಉಷಾ, ಪರಪ್ಪ ಬ್ಲಾ.ಪಂ. ಸದಸ್ಯರುಗಳಾದ ವಿ.ದಾಮೋದರನ್, ಟಿ.ಬಾಬು, ಪಂ.ಸದಸ್ಯ ಅಂಬಾಡಿ, ವಿವಿಧ ರಾಜಕೀಯ ಪಕ್ಷಗಳ ಮುಖಂಡರುಗಳು, ಸಂಘಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು. ಜಿಲ್ಲಾ ನಿಮರ್ಿತಿ ಕೇಂದ್ರದ ಯೋಜನಾಧಿಕಾರಿ ಎಂ.ವಿ.ಕುಂಞಿಕೃಷ್ನನ್ ವರದಿ ವಾಚಿಸಿದರು. ಜಿಲ್ಲಾ ಸಹಾಯಕ ದಂಡಾಧಿಕಾರಿ ಎಲ್.ದೇವೀದಾಸ್ ಸ್ವಾಗತಿಸಿ, ಕಾಂಞಿಗಾಡ್ ವಿಭಾಗೀಯ ಕಂದಾಯಾಧಿಕಾರಿ ಸಿ.ಬಿಜು ವಂದಿಸಿದರು.   

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries