HEALTH TIPS

No title

                         ಜ್ಞಾನ ಸಮೃದ್ಧಿ ವತಿಯಿಂದ ಉಚಿತ ಪುಸ್ತಕ ವಿತರಣೆ
    ಪೆರ್ಲ: ಸ್ವರ್ಗ ಸ್ವಾಮಿ ವಿವೇಕಾನಂದ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾಥರ್ಿಗಳಿಗೆ  ಬೆಂಗಳೂರಿನ ಜ್ಞಾನ ಸಮೃದ್ಧಿ ಟ್ರಸ್ಟ್ ವತಿಯಿಂದ ಉಚಿತ ಪುಸ್ತಕ ವಿತರಿಸಲಾಯಿತು.
   ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಗ್ರಾ.ಪಂ.ಸದಸ್ಯೆ ಕು.ಚಂದ್ರಾವತಿ ಎಂ. ಉಚಿತವಾಗಿ ಪುಸ್ತಕ ಲಭಿಸಿದೆಯೆಂದು ಕೇವಲವಾಗಿ ಪರಿಗಣಿಸದೆ ಅದರ ಪ್ರಾಧಾನ್ಯತೆ ಅರಿತು ಬಳಸಿ ಎಂದು ಮಕ್ಕಳಿಗೆ ಸಲಹೆ ನೀಡಿದರು. ಜ್ಞಾನ  ಸಮೃದ್ಧಿ ಟ್ರಸ್ಟಿ ಆಡಳಿತ ನಿದರ್ೇಶಕ ರವಿಕುಮಾರ್ ಮಾತನಾಡಿ ವಿದ್ಯಾಭ್ಯಾಸ ಪಡೆಯುವುದು ಪ್ರತಿಯೊಬ್ಬರ ಕರ್ತವ್ಯ. ಆದುದರಿಂದ ವಿದ್ಯಾಭ್ಯಾಸವನ್ನು ಯಾವುದೇ ಕಾರಣಕ್ಕೂ ಯಾರೂ  ಮೊಟಕುಗೊಳಿಸಬಾರದು. ಆಕಾಶಕ್ಕೆ ಹೇಗೆ ಮಿತಿಯೆಂಬುದಿಲ್ಲವೋ ಅದರಂತೆ ಬಹುವ್ಯಾಪಿಯಾದ ಶಿಕ್ಷಣಕ್ಕೂ  ಮಿತಿ ಇಲ್ಲ. ಅದನ್ನು ಸಮರ್ಪಕವಾಗಿ ಪೂರೈಸಿ ಎಂದು ಸಲಹೆ ನೀಡಿದರು.
    ಶಾಲೆಯ ಹಳೆ ವಿದ್ಯಾಥರ್ಿ ಟ್ರಸ್ಟಿಯ ಸದಸ್ಯನೂ, ಶಾಲಾ ಹಳೆ ವಿದ್ಯಾಥರ್ಿಯೂ ಆಗಿರುವ ಕೃಷ್ಣಪ್ರಸಾದ ಮಾಣಿಮೂಲೆ ಮಾತನಾಡಿ  ಕಲಿತ ಶಾಲೆಗೆ ಒಂದಷ್ಟು ಸಹಾಯ ಸಹಕಾರ ನೀಡಬೇಕೆಂದು ಆಶಿಸಿದ್ದೆ. ಇಂದು ಆ ಕಾಲ ಸನ್ನಿಹಿತವಾಗಿದೆ ಎಂದು ತಮ್ಮ ಮನದಾಳದ ಮಾತುಗಳನ್ನಾಡಿದರು. ಹಳೆ ವಿದ್ಯಾಥರ್ಿನಿ,ಮಾಜಿ ಮಾತೃ ಸಂಘದ ಅಧ್ಯಕ್ಷೆ ಅರುಣಾ ಶಿವರಾಂ ಉಪಸ್ಥಿತರಿದ್ದರು. ಜ್ಞಾನ ಸಮೃದ್ಧಿ ಟ್ರಸ್ಟ್ ಬೆಂಗಳೂರು ಕೊಡಮಾಡಿದ ಉಚಿತ ಬರವಣಿಗೆ ಪುಸ್ತಕವನ್ನು  ಒಂದರಿಂದ ಏಳನೇ ತರಗತಿವರೆಗಿನ ಎಲ್ಲಾ ವಿದ್ಯಾಥರ್ಿಗಳಿಗೂ ವಿತರಿಸಲಾಯಿತು. ಈ ಸಂದರ್ಭದಲ್ಲಿ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಶಾಮ ಪ್ರಕಾಶ್ ನೇರೋಳು ಹಾಗೂ ಮಾತೃ ಸಂಘದ ಅಧ್ಯಕ್ಷೆ ಚಂದ್ರಾವತಿ ಎ.ಟಿ.
ಸೂರಂಬೈಲುಕಟ್ಟೆ ಉಪಸ್ಥಿತರಿದ್ದರು.
   ಶಾಲಾ ಮುಖ್ಯ ಶಿಕ್ಷಕಿ ಗೀತಾ ಕುಮಾರಿ ಬಿ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಶಿಕ್ಷಕ ಶ್ರೀಹರಿ ಶಂಕರ ಶಮರ್ಾ ವಂದಿಸಿದರು. ಶಿಕ್ಷಕ ಪದ್ಮನಾಭ ಆರ್ ಕಾರ್ಯಕ್ರಮ ನಿರೂಪಿಸಿದರು.


   

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries