ನೀಚರ್ಾಲು-ಕಾಸರಗೋಡು ವಯಾ ಮಧೂರು ರಸ್ತೆ ಹಾಗೂ ಕೊರತ್ತಿಗುಳಿ ಸೇತುವೆ ಸಚಿವರಿಂದ ಲೋಕಾರ್ಪಣೆ
ಬದಿಯಡ್ಕ: ರಸ್ತೆ ಸಹಿತ ಪ್ರಾಥಮಿಕ ಮೂಲ ಸೌಕರ್ಯಗಳು ಅಭಿವೃದ್ದಿಗೊಳ್ಳದೆ ಇತರ ಯೋಜನೆಗಳನ್ನು ಜಾರಿಗೊಳಿಸಲು ಸಾಧ್ಯವಿಲ್ಲ. ಕಾಸರಗೋಡಿನ ಮಲೆನಾಡು, ಕರಾವಳಿ ಹಾಗೂ ಗ್ರಾಮೀಣ ಪ್ರದೇಶಗಳ ಸಂಪರ್ಕ ವ್ಯವಸ್ಥೆಯ ಸೌಕರ್ಯಗಳಿಗೆ ಸರಕಾರ ಬದ್ದವಾಗಿದ್ದು, ಸಾಕಷ್ಟು ಅನುದಾನಗಳನ್ನು ಈಗಾಗಲೇ ಬಿಡುಗಡೆಗೊಳಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಪ್ರಕ್ರಿಯೆಗೆ ಜುಲೈ ತಿಂಗಳಾಂತ್ಯ ಅಥವಾ ಆಗಸ್ಟ್ ಆರಂಭದಲ್ಲಿ ರಾಜ್ಯದಲ್ಲಿ ನೀಡಲಾಗುವ ಕಾಮಗಾರಿಗಳ ಉದ್ಘಾಟನೆ ಗಡಿ ಜಿಲ್ಲೆ ಕಾಸರಗೋಡಿನಿಂದ ನಡೆಸಲಾಗುವುದೆಂದು ರಾಜ್ಯ ಲೋಕೋಪಯೋಗಿ ಇಲಾಖಾ ಸಚಿವ ಜಿ.ಸುಧಾಕರನ್ ತಿಳಿಸಿದರು.
ನೀಚರ್ಾಲು-ಮಧೂರು-ಕಾಸರಗೋಡು ರಸ್ತೆಯ ಮೆಕ್ಡಾಂ ಡಾಮರೀಕರಣ ಹಾಗೂ ನೂತನವಾಗಿ ನಿಮರ್ಿಸಿದ ಕೊರತ್ತಿಗುಳಿ ಸೇತುವೆಯನ್ನು ಶನಿವಾರ ಅಪರಾಹ್ನ ಲೋಕಾರ್ಪಣೆಗೊಳಿಸಿ ಬಳಿಕ ಕಡಂಬಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾದ ಸಾರ್ವಜನಿಕ ಸಭೆಯಲ್ಲಿ ಸಚಿವರು ಮಾತನಾಡಿದರು.
ಜಿಲ್ಲೆಯಲ್ಲಿ ಹಾದುಹೋಗುವ 80 ಕಿಲೋಮೀಟರ್ ರಾಷ್ಟ್ರೀಯ ಹೆದ್ದಾರಿಯ ಅಗಲೀಕರಣಕ್ಕೆ 4300 ಕೋಟಿ ರೂ.ಗಳ ಅಂದಾಜು ವೆಚ್ಚ ನಿರೀಕ್ಷಿಸಲಾಗಿದೆ. ಹೆದ್ದಾರಿ ಅಗಲೀಕರಣಕ್ಕೆ ಸಂಬಂಧಿಸಿ ಅಗತ್ಯದ ಸ್ಥಳ ಸ್ವಾಧೀನಪಡಿಸಲು, ಸೇತುವೆ ನಿಮರ್ಾಣ ಮೊದಲಾದ ಕಾಮಗಾರಿಗೆ 1 ಕಿಲೋಮೀಟರ್ ವ್ಯಾಪ್ತಿಗೆ ತಲಾ 50 ಕೋಟಿ ರೂ.ಗಳಂತೆ ಮೀಸಲಿರಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಕನರ್ಾಟಕ ರಾಜ್ಯದೊಂದಿಗೆ ನಿಕಟತೆಯಿರುವ ಜಿಲ್ಲೆಯ ರಸ್ತೆಗಳ ಅಭಿವೃದ್ದಿಗೆ ಎರಡೂ ರಾಜ್ಯ ಸರಕಾರಗಳು ಜೊತೆಯಾಗಿ ವಿವಿಧ ಅಭಿವೃದ್ದಿ ಯೋಜನೆಗಳನ್ನು ರೂಪಿಸುವ ಬಗ್ಗೆ ಎರಡೂ ರಾಜ್ಯಗಳ ಮುಖ್ಯಮಂತ್ರಿ ಸಹಿತ ಉನ್ನತ ಅಧಿಕಾರಿಗಳು ಚಚರ್ಿಸಲಿದ್ದಾರೆ. ಆ ಮೂಲಕ ಸಮಗ್ರ ಅಭಿವೃದ್ದಿಯ ಮೂಲ ಸೌಕರ್ಯ ಉನ್ನತಿಗೆ ಆದ್ಯತೆ ನೀಡಲಾಗುವುದೆಂದು ಸಚಿವರು ಈ ಸಂದರ್ಭ ತಿಳಿಸಿದರು.
ಶಾಸಕ ಎನ್.ಎ.ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯ ಸಮಗ್ರ ಅಭಿವೃದ್ದಿಯಲ್ಲಿ ಸಹಕರಿಸುತ್ತಿರುವ ರಾಜ್ಯ ಸರಕಾರದ ಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಲೋಕೋಪಯೋಗಿ ಇಲಾಖಾ ಉತ್ತರ ವಿಭಾಗ ಅಭಿಯಂತರೆ ಮಿನಿ ವಿ.ಕೆ. ವರದಿ ಮಂಡಿಸಿದರು. ಮಧೂರು ಗ್ರಾ.ಪಂ. ಉಪಾಧ್ಯಕ್ಷ ದಿವಾಕರ ಆಚಾರ್ಯ, ಬ್ಲಾಕ್ ಪಂಚಾಯತು ಸದಸ್ಯ ಎ.ಎಸ್.ಮೊಹಮ್ಮದ್, ಪ್ರಭಾಕರ ರೈ, ಗ್ರಾ.ಪಂ.ಸದಸ್ಯರುಗಳಾದ ಸಿರಾಜ್ ಮೊಹಮ್ಮದ್, ಪ್ರೇಮಾ ಕುಮಾರಿ, ಬದಿಯಡ್ಕ ಗ್ರಾ.ಪಂ. ಮಾಜೀ ಅಧ್ಯಕ್ಷ ಮಾಹಿನ್ ಕೇಳೋಟ್, ಪ್ರತಿನಿಧಿಗಳಾದ ಚಂದ್ರಶೇಖರ ಶೆಟ್ಟಿ, ಅನಂತನ್ ನಂಬ್ಯಾರ್, ಟಿಂಬರ್ ಮೊಹಮ್ಮದ್, ದಾಮೋದರ ಬೆಳ್ಳಿಗೆ, ಪಿ.ಎಂ.ಮೈಕಲ್, ಟಿ.ಕುಂಞಿಕಣ್ಣನ್, ಮಧು ಮಾಣಿಯೋತ್, ಕೆ.ಸದಾನಂದ ರೈ, ಎಂ.ಎಚ್.ಜನಾರ್ಧನ್ಮ ಮೊದಲಾದವರು ಉಪಸ್ಥಿತರಿದ್ದರು.
ಬದಿಯಡ್ಕ ಗ್ರಾಮ ಪಂಚಾಯತು ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಸ್ವಾಗತಿಸಿ, ವಂದಿಸಿದರು.
ಮೆಕ್ಡಾಂ ಡಾಮರೀಕರಣಗೊಂಡಿರುವ ಮತ್ತು ಕೊರತ್ತಿಗುಳಿಯಲ್ಲಿ ವ್ಯವಸ್ಥಿತವಾಗಿ ನಿಮರ್ಿಸಿರುವ ಸೇತುವೆ ಬದಿಯಡ್ಕ, ಪೆರ್ಲ ಸಹಿತ ಗಡಿ ಗ್ರಾಮಗಳಿಗೆ ಕಾಸರಗೋಡನ್ನು ನಿಕಟವಾಗಿಸಿದ್ದು, ಪ್ರಸಿದ್ದ ಕ್ಷೇತ್ರ ಮಧೂರು ದೇವಳಕ್ಕೆ ನೇರ ಸಂಪರ್ಕ ಕಲ್ಪಿಸುತ್ತದೆ.