ಸಾರ್ವಜನಿಕ ಯೋಗ ಶಿಬಿರ ಉದ್ಘಾಟನೆ
ಉಪ್ಪಳ: ರಾಷ್ಟ್ರದ ಮಹಾನ್ ಕೊಡುಗೆಗಳಲ್ಲಿ ಯೋಗಶಾಸ್ತ್ರವೂ ಪ್ರಮುಖವಾಗಿದ್ದು, ನಿತ್ಯ ಜೀವನದಲ್ಲಿ ಪ್ರತಿಯೊಬ್ಬರೂ ಯೋಗವನ್ನು ಬಳಸುವ ಅಗತ್ಯ ಇದೆ. ಈ ಹಿನ್ನೆಲೆಯಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿರುವ ಯೋಗದ ಮಹತ್ವ ನಮ್ಮ ಅರಿವಿನಲ್ಲಿರಬೇಕು ಎಂದು ಕೇಂದ್ರ ಆಯುಷ್ ಖಾತೆಯ ಸಚಿವ ಶ್ರೀಪಾದ್ ಎಸ್ಸೋ ನಾಯಕ್ ಅಭಿಪ್ರಾಯ ವ್ಯಕ್ತಪಡಿಸಿದರು.
ಕೇಂದ್ರ ಆಯುಷ್ ಖಾತೆಯ ಸಹಕಾರದೊಂದಿಗೆ ಸೇವಾ ಭಾರತಿ ಕಾಸರಗೋಡು ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಹಮ್ಮಿಕೊಂಡಿದ್ದು, ಅದರ ಪೂರ್ವಭಾವೀ ತರಬೇತಿಯನ್ನು ಸೋಮವಾರ ಅಪರಾಹ್ನ ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ದೈಹಿಕ, ಮಾನಸಿಕ ಆರೋಗ್ಯ ನಿರ್ವಹಣೆಯಲ್ಲಿ ಯೋಗ ಶಾಸ್ತ್ರದ ಬಳಕೆ ನಮಗಾದಲ್ಲಿ ಸುವ್ಯವಸ್ಥಿತ ಬದುಕನ್ನು ಮುನ್ನಡೆಸಬಹುದು. ಹೊಸ ತಲೆಮಾರು ಯೋಗದತ್ತ ಆಕಷರ್ಿತರಾಗುತ್ತಿರುವುದು ಸ್ತುತ್ಯರ್ಹವಾಗಿದ್ದು, ಸೂಕ್ತ ಮಾರ್ಗದರ್ಶನದ ಅಗತ್ಯ ಇದೆ ಎಂದು ತಿಳಿಸಿದರು. ಕನರ್ಾಟಕ ವಿದ್ಯಾಭ್ಯಾಸ ಇಲಾಖೆಯ ಒಂಭತ್ತನೇ ತರಗತಿಯ ತಪ್ಪಿದ ಪಠ್ಯ ಕ್ರಮದ ಬಗ್ಗೆ ಪ್ರಸ್ತಾಪಿಸಿದ ಸಚಿವರು, ಭಾರತೀಯತೆಯನ್ನು ಮರೆಮಾಡಿ ವಿದ್ಯಾಥರ್ಿಗಳಿಗೆ ಅನಗತ್ಯವಾದುದನ್ನು ತುರುಕುವುದರಿಂದ ಅಸಂತುಷ್ಠ ಸಮಾಜ ರಚನೆಯ ಭೀತಿ ಎದುರಾಗಲಿದೆ. ಈ ನಿಟ್ಟಿನಲ್ಲಿ ಭಾರತೀಯ ತತ್ವ, ಆದರ್ಶ, ಪರಂಪರೆಯ ಜ್ಞಾನವನ್ನು ದಾಟಿಸುವ ಶಿಕ್ಷಣ ಉಪಕ್ರಮಕ್ಕೆ ಸರಕಾರಗಳು ಮುಂದಾಗಬೇಕು. ಆಯುವರ್ೇದ, ಯೋಗದಂತಹ ಜೀವನ ಪಾಠಗಳು ಮತ ಧರ್ಮಕ್ಕಿಂತ ಅತೀತವಾಗಿ ಜಾಗತಿಕ ಶಾಂತಿಯ ದ್ಯೋತಕವಾಗಿದೆ ಎಂಬುದನ್ನು ಇಲ್ಲಿಯ ಬುದ್ದಿಜೀವಿಗಳು ಅಥರ್ೈಸಬೇಕು ಎಂದು ತಿಳಿಸಿದರು.
ಕೊಂಡೆವೂರು ಸದ್ಗುರು ಶ್ರೀ ನಿತ್ಯಾನಂದ ವಿದ್ಯಾಪೀಠದ ಆಡಳಿತ ಸಮಿತಿ ಅಧ್ಯಕ್ಷ ರಾಮಚಂದ್ರ ಚೆರುಗೋಳಿ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಉಪಸ್ಥಿತರಿದ್ದು ಮಾತನಾಡಿದ ಶ್ರೀಯೋಗಾನಂದ ಸರಸ್ವತೀ ಶ್ರೀಗಳು, ಸುಂದರ ಬದುಕನ್ನು ರೋಗಗಳ ಗೂಡಾಗಿಸುವ ಬದಲು ಆರೋಗ್ಯವಂತ ದೃಢತೆಯ ಬದುಕಿನ ಮೂಲಕ ಪಾವನಗೊಳಿಸಬೇಕು. ಈ ನಿಟ್ಟಿನಲ್ಲಿ ಯೋಗ ಶಾಸ್ತ್ರ ನಮಗಿರುವ ಅತ್ಯುತ್ತಮ ಅವಕಾಶವಾಗಿದ್ದು, ನಿತ್ಯದ ಜೀವನದಲ್ಲಿ ಯೋಗದ ಬಳಕೆ ಅಗತ್ಯ ಇದೆ ಎಂದು ತಿಳಿಸಿದರು.
ಶಾಲಾ ಮುಖ್ಯಶಿಕ್ಷಕಿ ವಾರಿಜಾ, ಶಾಲಾ ಆಡಳಿತಾಧಿಕಾರಿ ಕಮಲಾಕ್ಷ ಎಂ ಉಪಸ್ಥಿತರಿದ್ದು, ಶುಭಾಶಂಸನೆಗೈದರು. ಸುನಿತಾ ಮಾತಶ್ರೀ ಸ್ವಾಗತಿಸಿ, ರೇಖಾ ಪ್ರದೀಪ್ ವಂದಿಸಿದರು. ಶಾಲಾ ಸಮಿತಿ ಸಂಚಾಲಕ ಅಶೋಕ ಬಾಡೂರು ಕಾರ್ಯಕ್ರಮ ನಿರೂಪಿಸಿದರು. ಗಾಯತ್ರೀ ಪ್ರಾರ್ಥನಾ ಗೀತೆ ಹಾಡಿದರು. ಬಳಿಕ ವಿದ್ಯಾಥರ್ಿಗಳಿಂದ ಯೋಗ ಪ್ರದರ್ಶನ ನಡೆಯಿತು. ಯೋಗ ತರಬೇತಿ ಶಿಬಿರವು ಜೂ. 21ರ ವರೆಗೆ ಕೊಂಡೆವೂರಿನ ಸದ್ಗುರು ಶ್ರೀ ನಿತ್ಯಾನಂದ ವಿದ್ಯಾಪೀಠದಲ್ಲಿ ಸಂಜೆ 4.30ರಿಂದ 5.30ರ ತನಕ ನಡೆಯಲಿದ್ದು ಆಸಕ್ತರು ವಿದ್ಯಾಲಯವನ್ನು ಸಂಪಕರ್ಿಸಬಹುದಾಗಿದೆ.