ಪಡ್ರೆ ಶಾಲೆಯಲ್ಲಿ ಭತ್ತ ಬಿತ್ತನೆಯೊಂದಿಗೆ ಪ್ಲಸ್ ವನ್ ತರಗತಿ ಪ್ರಾರಂಭೋತ್ಸವ
ಪೆರ್ಲ:ಭತ್ತ ಬಿತ್ತನೆಯ ಮೂಲಕ ವಿಶಿಷ್ಟ ರೀತಿಯಲ್ಲಿ ಸ್ವಾಗತಿಸುವುದರೊಂದಿಗೆ ಗುರುವಾರ ಪಡ್ರೆ ವಾಣೀನಗರ ಸರಕಾರಿ ಹೈಯರ್ ಸೆಕೆಂಡರಿ ವಿಭಾಗದ ಪ್ಲಸ್ ವನ್ ತರಗತಿ ಪ್ರಾರಂಭೋತ್ಸವ ಆಚರಿಸಲಾಯಿತು.
'ವಿದ್ಯೆಯೊಂದಿಗೆ ಕೃಷಿ' ಧ್ಯೇಯ ಸಂದೇಶ ಸಾರುವ ಈ ಪರಿಕಲ್ಪನೆ ಸಾಕಾರಗೊಳಿಸಲು ಪ್ಲಸ್ ಟು ವಿದ್ಯಾಥರ್ಿಗಳ ಶ್ರಮದೊಂದಿಗೆ ತಯಾರಿಸಲಾದ ಭತ್ತದ ಗದ್ದೆಯಲ್ಲಿ ಹಿರಿಯ ಅಧ್ಯಾಪಿಕೆ ನಾಗರತ್ನ ಸರ್ಪಂಗಳ ಭತ್ತ ಬಿತ್ತನೆಗೆ ಚಾಲನೆ ನೀಡಿದರು.ಬಳಿಕ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ನರಸಿಂಹ ಪೂಜಾರಿ, ಪ್ರಭಾರ ಪ್ರಾಂಶುಪಾಲ ದಿಲೀಪ್ ಡಿ ಆನಂದ್, ಅರ್ಥಶಾಸ್ತ್ರ ಅಧ್ಯಾಪಕ ಗಂಗಾಧರ ಕೆ. ಸಹಿತ ಅಧ್ಯಾಪಕರು ಹಾಗೂ ವಿದ್ಯಾಥರ್ಿಗಳು ಬಿತ್ತನೆ ಕಾರ್ಯದಲ್ಲಿ ತೊಡಗಿ ಕೊಂಡರು. ಆಧುನಿಕ ರೀತಿಗಳಿಗೆ ಅನುಗುಣವಾಗಿ ಕೃಷಿ ನೀತಿಗಳು ಬದಲಾಗಿ ಭತ್ತದ ಕೃಷಿ ಮಾಯವಾಗುತ್ತಿರುವ ಈ ಕಾಲದಲ್ಲಿ ಎಂಡೋ ದಾಳಿಗೆ ಒಳಗಾದ ತೀರಾ ಹಿಂದುಳಿದ ಪ್ರದೇಶದ ಗ್ರಾಮೀಣ ಶಾಲೆ ಯೊಂದರ ಈ ವಿಭಿನ್ನ ಕಲ್ಪನೆ ಎಲ್ಲೆಡೆ ಪ್ರಶಂಸೆಗೆ ಪಾತ್ರವಾಯಿತು.