HEALTH TIPS

No title

                   ರಸ್ತೆ  ಅಪಘಾತ ನಿಯಂತ್ರಿಸಲು ಹೊಸ ನಿದರ್ೇಶನ ಜಾರಿ
    ಕಾಸರಗೋಡು: ಕೇರಳದಲ್ಲಿ  ರಸ್ತೆ  ಅಪಘಾತಗಳನ್ನು  ನಿಯಂತ್ರಿಸಲು ರಾಜ್ಯ ಪೊಲೀಸ್ ಮಹಾ ನಿದರ್ೇಶಕ (ಡಿಜಿಪಿ) ಲೋಕನಾಥ್ ಬೆಹ್ರಾ ಹೊಸ ನಿದರ್ೇಶನ ಜಾರಿಗೊಳಿಸಿದ್ದಾರೆ. ಕಳೆದ ಐದು ತಿಂಗಳಲ್ಲಿ  ನಡೆದ ರಸ್ತೆ  ಅಪಘಾತಗಳ ಬಗ್ಗೆ  ಕ್ರೈಮ್ ರೆಕಾಡರ್್ ಬ್ಯೂರೋ ಸಲ್ಲಿಸಿದ ವರದಿಯನ್ನು  ಪರಿಶೀಲಿಸಿದ ಡಿಜಿಪಿ ಹೊಸ ನಿದರ್ೇಶನ ಅನುಷ್ಠಾನಕ್ಕೆ ತಂದಿದ್ದಾರೆ.
    ರಾಜ್ಯದಲ್ಲಿ  ಈಗ ಗ್ರಾಮೀಣ ವಲಯಗಳಲ್ಲೇ ಹೆಚ್ಚು  ವಾಹನ ಅವಘಡಗಳು ನಡೆಯುತ್ತಿವೆ. ಟ್ರಾಫಿಕ್ ಸಿಗ್ನಲ್ಗಳು ಮತ್ತು  ಜಂಕ್ಷನ್ಗಳನ್ನು  ಹೊಂದಿರುವ ಪ್ರದೇಶಗಳಿಗೆ ಹೋಲಿಸಿದ್ದಲ್ಲಿ  ನೇರವಾದ ರಸ್ತೆಗಳಲ್ಲೇ ಅತೀ ಹೆಚ್ಚು  ವಾಹನ ಅವಘಡಗಳು ನಡೆಯುತ್ತಿದೆ. ಮುಂಜಾನೆ ಹಾಗೂ ತಡರಾತ್ರಿಗಳಲ್ಲಿ  ಹೆಚ್ಚು  ಅಪಘಾತಗಳು ಸಂಭವಿಸುತ್ತಿವೆ.
ಈ ಮಧ್ಯೆ ದ್ವಿಚಕ್ರ ವಾಹನಗಳು ಅತ್ಯಂತ ಅಧಿಕ ಸಂಖ್ಯೆಯಲ್ಲಿ  ಅಪಘಾತಕ್ಕೊಳಗಾಗುತ್ತಿವೆ. ಇದನ್ನು  ನಿಯಂತ್ರಿಸಲು ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಕೇರಳದಲ್ಲಿ  ಡ್ರೈವರ್ಗಳ ವೈಟಿಂಗ್ ಶೆಡ್ಗಳನ್ನು  ಸ್ಥಾಪಿಸಲು ಸಲಹೆ ನೀಡಲಾಗಿದೆ. ವಾಹನಗಳಿಗೆ ಬೆಂಕಿ ತಗಲುವುದನ್ನು  ಹೊರತುಪಡಿಸಲು ಎಲ್ಲಾ  ವಾಹನಗಳಲ್ಲೂ  ಅಗ್ನಿಶಮನ ಉಪಕರಣಗಳನ್ನು  ಅಳವಡಿಸಲು ಸೂಚಿಸಲಾಗಿದೆ.
    ಚತುಷ್ಪಥ ಮತ್ತು  ಷಟ್ಪಥ ರಸ್ತೆಗಳಲ್ಲಿ  ಲೈನ್ ಸಾರಿಗೆಯನ್ನು  ಕಡ್ಡಾಯಗೊಳಿಸಲಾಗುವುದು. ರಸ್ತೆ  ಬದಿಗಳಲ್ಲಿ  ಅನಧಿಕೃತ ಪಾಕರ್ಿಂಗ್ ಹಾಗೂ ರಸ್ತೆಗಳನ್ನು  ಅತಿಕ್ರಮಿಸಿ ನಡೆಸುವ ವ್ಯಾಪಾರಿಗಳನ್ನು  ಹೊರತುಪಡಿಸಲಾಗುವುದು. ಅಪಾರ ವೇಗವನ್ನು  ನಿಯಂತ್ರಿಸಲಾಗುವುದು. ಜೊತೆಗೆ 100 ಸ್ಪೀಡ್ ಕ್ಯಾಮರಾಗಳು ಮತ್ತು  ಲೈನ್ ಎನ್ಪೋಸರ್್ಮೆಂಟ್ ಕ್ಯಾಮರಾಗಳನ್ನು  ಸ್ಥಾಪಿಸಲಾಗುವುದು. ಹೆಲ್ಮೆಟ್ ಹಾಗೂ ಸೀಟ್ಬೆಲ್ಟ್  ಧರಿಸುವಿಕೆಯನ್ನು  ಕಡ್ಡಾಯಗೊಳಿಸಲಾಗುವುದು. ಮದ್ಯ ಬಾರ್ ಮತ್ತು  ಹೋಟೆಲ್ಗಳ ವಠಾರದಲ್ಲಿ  ವಾಹನ ತಪಾಸಣೆಯನ್ನು  ಇನ್ನಷ್ಟು  ಬಿಗಿಗೊಳಿಸಲು ತೀಮರ್ಾನಿಸಲಾಗಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries