ಭಾಷೆಯನ್ನು ಪ್ರೀತಿಸಿದರಷ್ಟೆ ಅಧ್ಯಯನಶೀಲತೆ ಬೆಳೆಯಬಲ್ಲದು-ಪ್ರೊ.ಪಿ.ಎನ್.ಮೂಡಿತ್ತಾಯ
ಕುಂಬಳೆ: ಭಾಷೆಯನ್ನು ಪ್ರೀತಿಸಬೇಕು. ಬಳಿಕವಷ್ಟೇ ಅದರ ಅಧ್ಯಯನದತ್ತ ಮುಖ ಮಾಡಬೇಕು. ಸಂಸ್ಕೃತ ಭಾಷೆಯ ನಂತರದ ಭಾಷೆಗಳಲ್ಲಿ ಅತಿ ಪುರಾತನವೆನಿಸಿದ ಕನ್ನಡದ ಸ್ವರಾಕ್ಷರಗಳಲ್ಲಿ ಮಾಂತ್ರಿಕ ಶಕ್ತಿ ಅಡಗಿದೆ. ಹಾಗೆಯೇ ಭಾರತೀಯ ಭಾಷೆಗಳಲ್ಲಿ ಶಾಸ್ತ್ರೀಯತೆಯ ಆಳವಾದ ಅಧ್ಯಯನವಿರುವುದರಿಂದಲೇ ಅದು ಆಂಗ್ಲ ಭಾಷೆಗಳಿಗಿಂತ ಹೆಚ್ಚು ಎತ್ತರದ ಸ್ಥಾನದಲ್ಲಿ ನಿಂತಿರಲು ಸಾಧ್ಯವಾಗಿದೆ ಎಂದು ಸಾಹಿತಿ. ನಿವೃತ್ತ ಪ್ರಾಂಶುಪಾಲ ಪಿ.ಎನ್.ಮೂಡಿತ್ತಾಯ ಅವರು ಅಭಿಪ್ರಾಯಪಟ್ಟರು.
ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕ ಕಾಸರಗೋಡು ಇದರ ಆಶ್ರಯದಲ್ಲಿ ಶುಕ್ರವಾರ ಅಪರಾಹ್ನ ಧರ್ಮತ್ತಡ್ಕ ಶ್ರೀ ದುಗರ್ಾಪರಮೇಶ್ವರೀ ಹೈಯರ್ ಸೆಕೆಂಡರಿ ಶಾಲಾ ಪರಿಸರದಲ್ಲಿ ನಡೆದ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಪ್ರಾಥಮಿಕ, ಪ್ರೌಢ ತರಗತಿಗಳಲ್ಲಿ ಕನ್ನಡವನ್ನು ಅಭ್ಯಸಿಸಲು ಹೆಚ್ಚು ಇಷ್ಟ ಪಡುವ ಕನ್ನಡಿಗರು ಉನ್ನತ ವಿದ್ಯಾಭ್ಯಾಸ ತರಗತಿಗಳಲ್ಲಿ ಹಳೆಗನ್ನಡದ ಕ್ಲಿಷ್ಟಕರ ಸಂಗತಿಗಳಿಂದ ದೂರ ಸರಿಯುತ್ತಿದ್ದಾರೆ. ಬದಲಾಗಿ ಭಾಷೆಯನ್ನು ಪ್ರೀತಿಸಲು ತೊಡಗಿಸಿದಲ್ಲಿ ಮಾತ್ರ ಇದು ಸಾಧ್ಯವಾಗುತ್ತದೆ. ಇತ್ತೀಚಿನ ಸಾಹಿತ್ಯಗಳು ಒಳವಿಂಗಡಣೆಗಳಿಂದ ಕೂಡಿದ್ದು, ಓದುಗ ಯಾವುದೇ ಕೃತಿಯನ್ನು ಸ್ವತಂತ್ರ ಕೃತಿಯೆಂದು ಭಾವಿಸಿದಲ್ಲಿ ಮಾತ್ರ ಕೃತಿಯ ಸಂದೇಶ, ಕೃತಿಯಲ್ಲಿ ಅಡಗಿರುವ ಸ್ವಾರಸ್ಯಕರ ವಿಚಾರಗಳನ್ನು ಅನುಭವಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಬಳಿಕ ಕನ್ನಡ ಸಾಹಿತ್ಯಕ್ಕೆ ಜೈನರ ಕೊಡುಗೆ ಎಂಬ ವಿಚಾರವಾಗಿ ಮಾತನಾಡಿದ ಮೂಡಿತ್ತಾಯ ಅವರು, ಸುಮಾರು 9ನೇ ಶತಮಾನದ ಕಾಲದಿಂದ ಜೈನ ಸಾಹಿತ್ಯ ಆರಂಭವಾಗುತ್ತದೆ. ಜೈನ ಸಾಹಿತ್ಯದಲ್ಲಿ ಕನ್ನಡದ ದೇಸೀ ಶೈಲಿ ಬಿಂಬಿತವಾಗಿದ್ದು, ಅದರಲ್ಲಿ ಒಂದು ಜೀವನಕ್ರಮ ಅಡಗಿಕೊಂಡಿದೆ. ಆಗಮ, ಧಾಮರ್ಿಕ, ಲೌಕಿಕ ಗ್ರಂಥಗಳು ಜೈನ ಸಾಹಿತ್ಯದ ವೈಶಿಷ್ಟ್ಯತೆಯಾಗಿದೆ ಎಂದು ಅವರು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಎಸ್.ವಿ.ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡ ಸಂಸ್ಕೃತಿ ಪ್ರವಚನ ಕನ್ನಡ ಸಾಹಿತ್ಯ ಕೊಡುಗೆ ಅಪಾರ. ಕನರ್ಾಟಕ ಮಾತ್ರವಲ್ಲದೆ ಕನ್ನಡದ ಸೊಗಡು ಅತ್ಯಂತ ಹಿಂದಿನಿಂದಲೂ ಆಂಧ್ರ ಮತ್ತು ಮಹಾರಾಷ್ಟ್ರ ಪ್ರದೇಶಗಳಲ್ಲೂ ವ್ಯಾಪಿಸಿದೆ. ಇದುವರೆಗೆ ಹಲ್ಮಿಡಿ ಶಾಸನ ಕನ್ನಡದ ಹಳೆಯ ಶಾಸನ ಎಂದು ಹೇಳಲಾಗಿತ್ತು. ಆದರೆ ಅದಕ್ಕಿಂತಲೂ ಹಳಮೆಯ ಶಾಸನ ದೊರೆತ ಬಗ್ಗೆ ವರದಿಯಾಗಿದೆ. ಇದರಿಂದ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಪ್ರಾಚೀನತೆಯನ್ನು ಕಂಡುಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಭಾಷಾವಾರು ಪ್ರಾಂತ್ಯ ವಿಂಗಡಣೆಯ ವೇಳೆ ಅಚ್ಛ ಕನ್ನಡದ ಪ್ರದೇಶ ಕಾಸರಗೋಡು ಕೇರಳದ ಪಾಲಾಯಿತು.ಅಂದಿನಿಂದ ಇಂದಿನವರೆಗೆ ಕನ್ನಡ ಹಲವು ಸಮಸ್ಯೆಗಳನ್ನು ಅನುಭವಿಸುವಂತಾಗಿದೆ ಎಂದು ತಿಳಿಸಿದರು.
ಕಮಲಮ್ಮ ದತ್ತಿನಿಧಿ ಉಪನ್ಯಾಸವನ್ನು ನಿವೃತ್ತ ಪ್ರಾಂಶುಪಾಲ ಡಾ.ಬೇ.ಸೀ.ಗೋಪಾಲಕೃಷ್ಣ ನಿರ್ವಹಿಸಿ, ಕನ್ನಡ ಸಾಹಿತ್ಯದ ಅನನ್ಯತೆ ಎಂಬ ವಿಚಾರವಾಗಿ ಮಾತನಾಡಿದರು. ಗುಮ್ಮಣ್ಣ ಶೆಟ್ಟಿ ಜೈನ್ ದತ್ತಿ ಉಪನ್ಯಾಸವನ್ನು ಲೇಖಕಿ ರಾಜಶ್ರೀ ತಾರಾನಾಥರೈ ನಿರ್ವಹಿಸಿ, ತುಳು-ಕನ್ನಡ ಭಾಷಾ ಬಾಂಧವ್ಯ ಎಂಬ ವಿಚಾರವಾಗಿ ವಿಷಯ ಮಂಡಿಸಿದರು.
ಬಳಿಕ ಶಾಲಾ ವಿದ್ಯಾಥರ್ಿನಿಯರಿಂದ ಗಾನ ಸುಧಾ ಕಾರ್ಯಕ್ರಮ ಏರ್ಪಟ್ಟಿತ್ತು.ಶಾಲಾ ಪ್ರಬಂಧಕ ಶಂಕರನಾರಾಯಣ ಭಟ್.ಎನ್, ಶಾಲಾ ಪ್ರಾಂಶುಪಾಲ ಎನ್.ರಾಮಚಂದ್ರ ಭಟ್ ಉಪಸ್ಥಿತರಿದ್ದರು.
ಕ.ಸಾ.ಪ ಗಡಿನಾಡು ಘಟಕದ ಗೌರವ ಕಾರ್ಯದಶರ್ಿ ರಾಮಚಂದ್ರ ಭಟ್.ಪಿ ಸ್ವಾಗತಿಸಿ, ಇನ್ನೋರ್ವ ಗೌರವ ಕಾರ್ಯದಶರ್ಿ ಎಂ.ಎಸ್.ನವೀನ್ಚಂದ್ರ ವಂದಿಸಿದರು. ಶಾಲಾ ಅಧ್ಯಾಪಕ ಶಿವನಾರಾಯಣ ಭಟ್ ಕಾರ್ಯಕ್ರಮ ನಿರ್ವಹಿಸಿದರು.
ಬೆಂಗಳೂರು ಸ್ಟೇಟ್ ಬ್ಯಾಂಕ್ಆಫ್ಇಂಡಿಯಾ ಬ್ಯಾಂಕಿನ ನಿವೃತ್ತ ಹಿರಿಯ ಅಧಿಕಾರಿ ವಿಜಯ್ಕುಮಾರ್ ಕಲ್ಯಾಣ್ ಅವರ ತೀರ್ಥರೂಪದ ಸ್ಮರಣಾರ್ಥ ಶಾಲೆಯಲ್ಲಿ ಆಥರ್ಿಕವಾಗಿ ಹಿಂದುಳಿದ ಪ್ಲಸ್ಒನ್ ತರಗತಿಯಲ್ಲಿ ಶೇ. 81 ಅಂಕ ಗಳಿಸಿದ ಚಿತ್ರಲತಾ ಎಂಬ ವಿದ್ಯಾಥರ್ಿನಿಗೆ ಕಲಿಕಾ ಸಾಮಾಗ್ರಿಗಳನ್ನು ವಿತರಿಸಲಾಯಿತು. ಇದೇ ವೇಳೆ ಕ.ಸಾ.ಪ ದ ಅಂಗವಾಗಿ ಶಾಲಾ ಗ್ರಂಥಾಲಯಕ್ಕೆ ಉಚಿತ ಪುಸ್ತಕಗಳನ್ನು ವಿತರಿಸಲಾಯಿತು.