HEALTH TIPS

No title

              ಬೇಂಗಪದವು ಶಾಲೆಯಲ್ಲಿ ಪುಸ್ತಕ ವಾರಾಚರಣೆಗೆ ಚಾಲನೆ
    ಪೆರ್ಲ: ಬೇಂಗಪದವು ಶ್ರೀ ಗಿರಿಜಾಂಬಾ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕೇರಳ ಗ್ರಂಥಾಲಯಗಳ ಪಿತಾಮಹ  ಪಿ.ಯನ್ ಪಣಿಕ್ಕರ್  ಅವರ ಸಮಸ್ಮರಣಾ ದಿನವನ್ನು ಮಂಗಳವಾರ ವಾಚನಾ ವಾರದ ಚಾಲನೆಯೊಂದಿಗೆ ಉದ್ಘಾಟಿಸಲಾಯಿತು.
    ವಾಚನಾ ವಾರವನ್ನು ಯುವಕವಿ  ಮಣಿರಾಜ್ ವಾಂತಿಚ್ಚಾಲು ಉದ್ಘಾಟಿಸಿ ಮಾತನಾಡಿ, ಮಕ್ಕಳು  ಓದಿನ ಮಹತ್ವವನ್ನು  ತಿಳಿದುಕೊಳ್ಳಬೇಕು. ವೈವಿಧ್ಯಮಯ ಭಾಷಾ ಚಟುವಟಿಕೆಗಳಲ್ಲಿ  ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು ತಿಳಿಸಿದರು. ಪುಸ್ತಕಗಳ ಓದು ಸಮಗ್ರ ಜ್ಞಾನವನ್ನು ನಿಡುವ ಜೊತೆಗೆ ಬದುಕಿಗೆ ಮಾರ್ಗದಶರ್ಿಯಾಗುವುದು ಎಂದು ಅವರು ತಿಳಿಸಿದರು. 
   ಶಾಲಾ ಮುಖ್ಯೋಪಾಧ್ಯಾಯ  ಶಿವಕುಮಾರರ್  ಸ್ವಾಗತಿಸಿ, ಅಧ್ಯಾಪಿಕೆ  ನಳಿನಿ  ವಂದಿಸಿದರು. ಅಧ್ಯಾಪಿಕೆ  ಯಕ್ಷಿತಾ. ಯು ಪ್ರಾರ್ಥನೆ ಹಾಡಿದರು. ಅಧ್ಯಾಪಿಕೆ  ಹರಿಣಾಕ್ಷಿ.ಟಿ  ಕಾರ್ಯಕ್ರಮ ನಿರೂಪಿಸಿದರು. ವಾಚನಾ ವಾರದಲ್ಲಿ  ವಿದ್ಯಾಥರ್ಿಗಳ ಭಾಷಾಪರವಾದ  ನೈಪುಣ್ಯಗಳು ಮತ್ತು  ಸೃಜನಾತ್ಮಕತೆಗೆ ಒತ್ತು  ನೀಡಲಾಗುವುದು. ಓದುವಿಕೆ ಮತ್ತು ಬರವಣಿಗೆಗೆ ಸಂಬಂಧಿಸಿ ವಿವಿಧ ರಚನೆಗಳ ಬಗ್ಗೆ ತರಬೇತಿ ಹಾಗೂ ಸ್ಪಧರ್ೆಗಳು ನಡೆಯಲಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries