ಇನ್ನು ಕೌಶಲ್ಯಾಧಾರಿತ ಮಾರ್ಗದರ್ಶನ ಲಭ್ಯ-ಜಿಲ್ಲಾ ಎಂಪ್ಲೋಯೆಬಿಲಿಟಿ ಸೆಂಟರ್ ಸಚಿವರಿಂದ ಉದ್ಘಾಟನೆ
ಕಾಸರಗೋಡು: ಕೌಶಲ್ಯವಿರುವ ವಿದ್ಯಾವಂತ ಉದ್ಯೋಗಾಕಾಂಕ್ಷಿಗಳ ಸಮಗ್ರ ಉದ್ಯೋಗ ಸೃಷ್ಟಿಗಾಗಿ ಎಂಪ್ಲೋಯೆಬಿಲಿಟಿ ಸೆಂಟರ್ ಆರಂಭಿಸಲಾಗಿದೆ. ವೃತ್ತಿಕೌಶಲ್ಯವನ್ನು ಬೆಳೆಸಿ ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಈ ಯೋಜನೆ ಜಾರಿಗೊಂಡಿದೆ ಎಂದು ರಾಜ್ಯ ಉದ್ಯೋಗ ಹಾಗೂ ಅಬಕಾರಿ ಸಚಿವ ಟಿ.ಪಿ.ರಾಮಕೃಷ್ಣನ್ ತಿಳಿಸಿದರು.
ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಆರಂಭಿಸಲಾದ ಎಂಪ್ಲೋಯೆಬಿಲಿಟಿ ಘಟಕವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಈ ಯೋಜನೆಯನ್ವಯ ಈಗಾಗಲೇ 1.35 ಲಕ್ಷ ಮಂದಿ ದಾಖಲಾತಿ ಮಾಡಿದ್ದಾರೆ. ಈ ಪೈಕಿ 85817 ಮಂದಿಗಳಿಗೆ ವಿವಿಧ ಸ್ವ ಉದ್ಯೋಗ ಸಂಬಂಧಿ ತರಬೇತಿ ನೀಡಲಾಗಿದೆ ಎಂದು ತಿಳಿಸಿದ ಸಚಿವರು, ಇವರಲ್ಲಿ 42 ಸಾವಿರ ಮಂದಿಗಳು ಉದ್ಯೋಗ ಪಡೆಯುವಲ್ಲಿ ಸಫಲತೆ ಸಾಧಿಸಿರುವರು ಎಮದು ತಿಳಿಸಿದರು.
ಕಾಸರಗೋಡು ಡಿಪಿಸಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಎನ್.ಎ.ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದರು. ಎಡಿಎಂ ಎನ್.ದೇವಿದಾಸ್, ಚೆಂಗಳ ಗ್ರಾಮ ಪಂಚಾಯತ್ ಸದಸ್ಯ ಸದಾನಂದನ್, ಕೆಎಎಸ್ಇ ಚೀಫ್ ಓಪರೇಟಿಂಗ್ ಆಫೀಸರ್ ಪ್ರತಾಪ್ ಮೋಹನ್, ಜಿಲ್ಲಾ ಉದ್ಯೋಗ ವಿನಿಮಯಾಧಿಕಾರಿ ಗೀತಾ ಕುಮಾರಿ ಮೊದಲಾದವರು ಮಾತನಾಡಿದರು. ಉದ್ಯೋಗ ವಿನಿಮಯ ವಿಭಾಗೀಯ ಉಪ ನಿದರ್ೇಶಕ ಮೋಹನ್ ಲೂಕೋಸ್ ಸ್ವಾಗತಿಸಿ, ರಾಜ್ಯ ವೊಕೇಶನಲ್ ಗೈಡೆನ್ಸ್ ಅಧಿಕಾರಿ ಕೆ.ಅಬ್ದುರಹಿಮಾನ್ ವಂದಿಸಿದರು.
ಎಂಪ್ಲೋಯೆಬಿಲಿಟಿ ಸೆಂಟರ್ : ಉದ್ಯೋಗ ವಿನಿಮಯ ವಿನಿಮಯ ಕೇಂದ್ರಗಳನ್ನು ಕೌಶಲ್ಯಗಳನ್ನಾಗಿಸುವ ಉದ್ದೇಶದಿಂದ ಈ ಕೇಂದ್ರವನ್ನು ಆರಂಭಿಸಲಾಗಿದೆ. ಇಂತಹ ಕೇಂದ್ರಗಳ ಮೂಲಕ ಖಾಸಗಿ ವಲಯಗಳಲ್ಲೂ ಉದ್ಯೋಗವಕಾಶ ಲಭಿಸಲಿದೆ. ಇದರಂತೆ ಖಾಸಗಿ ಸಂಸ್ಥೆಗಳಲ್ಲಿ ಹುದ್ದೆಗಳು ತೆರವು ಬಿದ್ದಲ್ಲಿ ಆ ಕುರಿತಾದ ಮಾಹಿತಿಗಳನ್ನು ಜಿಲ್ಲಾ ಎಂಪ್ಲೋಯೆಬಿಲಿಟಿ ಸೆಂಟರ್ಗೆ ನೀಡಿದ್ದಲ್ಲಿ ಅಂತಹ ಸಂಸ್ಥೆಗಳಿಗೆ ಈ ಕೇಂದ್ರ ಮೂಲಕ ಅಗತ್ಯದ ಉದ್ಯೋಗಾಥರ್ಿಗಳನ್ನು ಕಳುಹಿಸಿಕೊಡಲಾಗುವುದು ಈ ಪೈಕಿ ಅಗತ್ಯದವರನ್ನು ಖಾಸಗಿ ಸಂಸ್ಥೆಗಳು ಆರಿಸಿ ತಮ್ಮ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರ್ಪಡೆಗೊಳಿಸಬಹುದು.
ಎಂಪ್ಲೋಯೆಬಿಲಿಟಿ ಸೆಂಟರ್ನಲ್ಲಿ ಉದ್ಯೋಗಕ್ಕಾಗಿ ಹೆಸರು ನೋಂದಾಯಿಸುವವರ ಕೌಶಲ್ಯ ಸಾಮಥ್ರ್ಯವನ್ನು ಸೋಫ್ಟ್ ಸ್ಕಿನ್ನಲ್ಲಿ ಪರಿಶೀಲಿಸಿ ಅಗತ್ಯದ ಕೌಶಲ್ಯ ತರಬೇತಿಯನ್ನೂ ನೀಡಲಾಗುವುದು. ಸಂದರ್ಶನವನ್ನು ಹೇಗೆ ಎದುರಿಸಬೇಕು, ಬಯೋಡಾಟಾ, ಆಶಯ ವಿನಿಮಯ ರೀತಿ, ಭಾಷಾ ಕೌಶಲ್ಯ ಇತ್ಯಾದಿ ವಲಯಗಳಲ್ಲಿ ಈ ಕೇಂದ್ರದಲ್ಲಿ ತರಬೇತಿ ನೀಡಲಾಗುವುದು. ಮಾತ್ರವಲ್ಲ ಅಭಿರುಚಿ ಪರೀಕ್ಷೆಗಳು ಮತ್ತು ಸೈಕೋಮೆಟ್ರಿಕ್ ಪರೀಕ್ಷೆಗಳನ್ನು ನಡೆಸಲಾಗುವುದು. ಸ್ವೋದ್ಯೋಗ ತರಬೇತಿಗಳನ್ನು ನೀಡಲಾಗುವುದು. ಈ ಕುರಿತಾದ ಹೆಚ್ಚಿನ ಮಾಹಿತಿಗಳು 04994-255582 ನಂಬ್ರದಲ್ಲಿ ಕರೆ ಮಾಡಬಹುದು.