ಭಾರತೀಯ ವಿಜ್ಞಾನಿಗಳಿಂದ ಸೌರಮಂಡಲದಾಚೆ ಬೃಹತ್ ಗ್ರಹ ಪತ್ತೆ
ಅಹಮದಾಬಾದ್: ಅಹಮದಾಬಾದ್ನ ಭೌತಶಾಸ್ತ್ರ ಸಂಶೋಧನಾ ಪ್ರಯೋಗಾಲಯದ ವಿಜ್ಞಾನಿಗಳು, ಇಂಜಿನಿಯರ್ ಗಳ ತಂಡವು ಶನಿ ಗ್ರಹಕ್ಕಿಂತ ಚಿಕ್ಕದಾದ ಆದರೆ ನೆಪ್ಚೂನ್ಗಿಂತ ದೊಡ್ಡದಿರುವ ಗ್ರಹವೊಂದು ನಮ್ಮ ಸೌರಮಂಡಲದಾಚೆ ಸೂರ್ಯನಂತಹಾ ನಕ್ಷತ್ರವೊಂದರ ಸುತ್ತ ಸುತ್ತುತ್ತಿರುವುದನ್ನು ಪತ್ತೆ ಮಾಡಿದ್ದಾರೆ.
ಸಂಶೋಧನಾ ಸಂಸ್ಥೆಯ ಪ್ರೊಫೆಸರ್ ಅಭಿಜಿತ್ ಚಕ್ರವತರ್ಿನೇತೃತ್ವದ ತಂಡ ಈ ನೂತನ ಗ್ರಹವನ್ನು ಆವಿಷ್ಕರಿಸಿದೆ. ಜೊತೆಗೆ ತಾವು ಕಂಡು ಹಿಡಿದಿರುವ ಈ ಹೊಸ ಗ್ರಹಕ್ಕೆ EPIC 211945201b ಅಥವಾ K2-236b ಎಂದು ನಾಮಕರಣ ಮಾಡಿದ್ದಾರೆ.
ಈ ಗ್ರಹ ಭೂಮಿಗಿಂತ ಶೇ.27ರಷ್ಟು ಹೆಚ್ಚಿನ ದ್ರವ್ಯರಾಶಿ ಹೊಂದಿದ್ದು ಇದರ ತ್ರಿಜ್ಯದ ಗಾತ್ರ ಸಹ ಭೂಮಿಗಿಂತ ಆರು ಪಟ್ಟು ಹೆಚ್ಚಿದೆ.
ಸೌರಮಂಡಲದಿಂದ ಆಚೆಗೆ ಇರುವ ಗ್ರಹವೊಂದನ್ನು ಭಾರತೀಯ ವಿಜ್ಞಾನಿಗಳು ಪತ್ತೆ ಮಾಡುತ್ತಿರುವುದು ಇದೇ ಮೊದಲ ಬಾರಿ ಎನ್ನುವ ಕಾರಣಕ್ಕೆ ಈ ಸಂಶೋಧನೆ ಮಹತ್ವವನ್ನು ಪಡೆದಿದೆ. ಜಗತ್ತಿನ ಕೆಲವೇ ಕೆಲವು ರಾಷ್ಟ್ರಗಳು ಇಂತಹಾ ಗಮನಾರ್ಹ ಸಂಶೋಧನೆಯಲ್ಲಿ ತೊಡಗಿಕೊಂಡಿದ್ದು ಇದೀಗ ಭಾರತ ಸಹ ಆ ಸಾಲಿಗೆ ಸೇರ್ಪಡೆಯಾಗಿದೆ.
ರಾಜಸ್ತಾನದ ಅಬು ಪರ್ವತದ ಗುರುಶಿಖರ್ ವೀಕ್ಷಣಾಲಯದಲ್ಲಿನ PRL Advance Radial-velocity Abu-sky Search ಸ್ಪೆಕ್ಟ್ರೋಗ್ರಾಫ್ ಹಾಗೂ 1.2 ಟೆಲಿಸ್ಕೋಪ್ ಸಹಾಯದೊಂದಿಗೆ ಈ ಗ್ರಹವನ್ನು ಪತ್ತೆ ಮಾಡಲಾಗಿದೆ. ಇದಲ್ಲದೆ, ಏಷ್ಯಾದಲ್ಲೇ ಪಿಎಆರ್ಎಎಸ್ ಇಂತಹಾ ಅವಿಷ್ಕಾರ ಮಾಡಿದ ಮೊದಲ ಸ್ಪೆಕ್ಟ್ರೋಗ್ರಾಫ್ ಆಗಿದೆ.
ಈ ಗ್ರಹದ ಅವಿಷ್ಕಾರವೂ ಸೇರಿದಂತೆ ಇದುವರೆಗೆ ಜಗತ್ತಿನ ವಿವಿಧ ರಾಷ್ಟ್ರಗಳು ಒಟ್ಟು 23 ಗ್ರಹ ವ್ಯವಸ್ಥೆಯನ್ನು ಪತ್ತೆ ಮಾಡಿದೆ. ಈ ಸಂಶೋಧನಾ ವರದಿಯು ಆಸ್ಟ್ರೋನಾಮಿಕಲ್ ಜರ್ನಲ್ ಆಫ್ ದಿ ಅಮೆರಿಕನ್ ಆಸ್ಟ್ರೋನಾಮಿಕಲ್ ಸೊಸೈಟಿ ಅಲ್ಲಿ ಪ್ರಕಟವಾಗಿದೆ.