ವಿದ್ಯಾಥರ್ಿ ಕಲಿಕಾ ಸಹಾಯಧನ ವಿತರಣೆ, ಪ್ರತಿಭಾ ಪುರಸ್ಕಾರ ಪ್ರದಾನ
ಮಂಜೇಶ್ವರ: ಬಂಟರು ಹೃದಯ ಶ್ರೀಮಂತಿಕೆ ಉಳ್ಳವರು. ಗಳಿಸಿದ ಸಂಪಾದನೆಯನ್ನು ಸಂಸ್ಕಾರದ ಮೂಲಕ ಸತ್ಕಾರಕ್ಕೆ ಬಳಸಿದರೆ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯವಾಗುತ್ತದೆಯೆಂದು ಮುಂಬೈ ಉದ್ಯಮಿ ರಘುರಾಮ ಶೆಟ್ಟಿ ಕುಳೂರು ಕನ್ಯಾನ ಹೇಳಿದರು.
ಅವರು ಮೀಯಪದವಿನ ಚೌಟರ ಚಾವಡಿಯಲ್ಲಿ ಬಂಟರ ಸಂಘ ಮೀಂಜ ವತಿಯಿಂದ ಭಾನುವಾರ ನಡೆದ ವಿದ್ಯಾಥರ್ಿ ಕಲಿಕಾ ಸಹಾಯಧನ ವಿತರಣೆ, ಪ್ರತಿಭಾ ಪುರಸ್ಕಾರ ಮತ್ತು ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾಥರ್ಿಗಳು ತಾವು ಪಡೆದ ಕಲಿಕೆ ಸಹಾಯಧನದ ಋಣವನ್ನು ಸಮಾಜಕ್ಕೆ ಸಂದಾಯ ಮಾಡಬೇಕು. ಬಂಟ ಸಮಾಜದ ಹಿರಿಯರ ಆದರ್ಶವನ್ನು ಪಾಲಿಸಿಕೊಂಡು ಯುವ ಪೀಳಿಗೆ ಮುನ್ನಡೆಯಬೇಕು ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಮೀಂಜ ಬಂಟರ ಸಂಘದ ಅಧ್ಯಕ್ಷ ಜಗದೀಶ ಶೆಟ್ಟಿ ಎಲಿಯಾಣ ವಹಿಸಿದ್ದರು. ಮೀಂಜ ಪಂಚಾಯತ್ಗೊಳಪಟ್ಟ 5ರಿಂದ 10ನೇ ತರಗತಿಯಲ್ಲಿ ಕಲಿಯುತ್ತಿರುವ 65 ಬಂಟ ಸಮಾಜ ವಿಧ್ಯಾಥರ್ಿಗಳಿಗೆ ಈ ವೇಳೆ ಕಲಿಕಾ ಸಹಾಯಧನ ವಿತರಣೆ ಹಾಗೂ 2017-18ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಅತೀ ಹೆಚ್ಚು ಅಂಕಗಳಿಸಿದ ದೇರಂಬಳ ಶ್ರೀಧರ ಶೆಟ್ಟಿಯವರ ಪುತ್ರಿ ದೀಕ್ಷಿತಾ ಶೆಟ್ಟಿ ಹಾಗೂ ಆಂಗ್ಲ ಮಾಧ್ಯಮ ವಿಭಾಗದಲ್ಲಿ ಅತೀ ಹೆಚ್ಚು ಅಂಕಗಳಿಸಿದ ದಡ್ಡಂಗಡಿ ನಿವಾಸಿ ಅರವಿಂದಾಕ್ಷ ಭಂಡಾರಿ ಅವರ ಪುತ್ರ ಪ್ರಮಿತ್ ಭಂಡಾರಿ ಮತ್ತು ಕುಳೂರು ಕೋಣಿಮಾರು ನಿವಾಸಿ ಕೃಷ್ಣ ಶೆಟ್ಟಿ ಅವರ ಪುತ್ರಿ ಆಶ್ರಿತಾ ಶೆಟ್ಟಿ ಅವರಿಗೆ ಪ್ರತಿಭಾ ಪುರಸ್ಕಾರವನ್ನು ಬಂಟರ ಯಾನೆ ನಾಡವರ ಸಂಘ ಮಂಜೇಶ್ವರ ಫಿಕರ್ಾದ ಅಧ್ಯಕ್ಷ ಕೆ.ದಾಸಣ್ಣ ಆಳ್ವ ಕುಳೂರುಬೀಡು ಪ್ರಧಾನಗೈದರು. ಬಳಿಕ ಮಾತನಾಡಿದ ಅವರು ವಿದ್ಯಾಥರ್ಿಗಳ ಕಲಿಕಾ ಸಹಾಯಧನವು ಕಲಿಕೆಗೆ ಪ್ರೇರಣೆಯಾಗಲಿ. ಮೀಂಜ ಬಂಟರ ಸಂಘ ಸಮಾಜಮುಖಿ ಚಟುವಟಿಕೆಯಲ್ಲಿ ಇನ್ನಷ್ಟು ತೊಡಗಿಕೊಳ್ಳಬೇಕು ಹಾಗೂ ಆದಷ್ಟು ಬೇಗ ಸಂಘಕ್ಕೆ ಸ್ವಂತ ಕಟ್ಟಡದ ಭಾಗ್ಯ ಒದಗಿ ಬರಲೆಂದು ಶುಭ ಹಾರೈಸಿದರು.
ಸಮಾರಂಭದಲ್ಲಿ ಕಾಸರಗೋಡು ಜಿಲ್ಲಾ ಬಂಟರ ಸಂಘದ ಅಧ್ಯಕ್ಷ ಸದಾನಂದ ರೈ, ಬಂಟರ ಯಾನೆ ನಾಡಾವರ ಮಾತೃ ಸಂಘ ಮಂಗಳೂರಿನ ಕಾರ್ಯಕಾರಿ ಸಮಿತಿ ಸದಸ್ಯ ಸಂಕಬೈಲು ಸತೀಶ ಅಡಪ, ಬಂಟರ ಸಂಘ ಮಂಜೇಶ್ವರ ಫಿಕರ್ಾ ಕಾರ್ಯದಶರ್ಿ ಸದಾನಂದ ಶೆಟ್ಟಿ ತಲೇಕಳ, ಬಂಟರ ಸಂಘ ಕಾಸರಗೋಡು ಫಿಕರ್ಾದ ಅಧ್ಯಕ್ಷ ಸುಬ್ಬಣ್ಣ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭಾಶಂಸನೆಗೈದರು. ಈ ವೇಳೆ ಕಾಸರಗೋಡು ಜಿಲ್ಲೆ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಕಂಬಳ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾದ ಪಿ.ಆರ್.ಶೆಟ್ಟಿ ಪೊಯ್ಯೆಲ್ ಮತ್ತು ಕನರ್ಾಟಕ ಸರಕಾರದ ಯಕ್ಷಗಾನ ಆಕಾಡೆಮಿ ಸದಸ್ಯರಾಗಿ ಆಯ್ಕೆಗೊಂಡ ನ್ಯಾಯವಾದಿ. ದಾಮೋದರ ಶೆಟ್ಟಿ ಮಜಿಬೈಲ್ ಅವರನ್ನು ಶಾಲು ಹೊದೆಸಿ, ಸ್ಮರಣಿಕೆ, ಫಲಪುಷ್ಪವನ್ನಿತ್ತು ಸಮ್ಮಾನಿಸಲಾಯಿತು. ಹಾಗೂ ಮೀಂಜ ಬಂಟರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ದಿನೇಶ್ ಬಂಡಾಲೆ ನಡುಹಿತ್ಲು ಗುಂಡಿಬೈಲು ಅವರು ಐಲ ಶ್ರೀ ದುಗರ್ಾಪರಮೇಶ್ವರಿ ಕ್ಷೇತ್ರದ ಸೇವಾ ಸಮಿತಿಯ ಅಧ್ಯಕ್ಷರಾಗಿ ಪುನರಾಯ್ಕೆಗೊಂಡಿದ್ದು ಅವರನ್ನು ಈ ವೇಳೆ ಸಂಘದ ವತಿಯಿಂದ ಆಭಿನಂದಿಸಲಾಯಿತು. ಇತ್ತೀಚೆಗೆ ನಿಧಾನರಾದ ಮನ್ನಿಪ್ಪಾಡಿ ಪ್ರಕಾಶ್ ಶೆಟ್ಟಿಯವರ ಕುಟುಂಬಕ್ಕೆ ಕನ್ಯಾನ ಶೀಲಾವತಿ ಪಿ. ಶೆಟ್ಟಿ ಕೊಡಮಾಡಿದ ಸಹಾಯಧನವನ್ನು ಅವರ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.
ಬಂಟರ ಸಂಘ ಮೀಂಜದ ಪ್ರಧಾನ ಕಾರ್ಯದಶರ್ಿ ಅರವಿಂದಾಕ್ಷ ಭಂಡಾರಿ ದಡ್ಡಂಗಡಿ ಸ್ವಾಗತಿಸಿ, ಸಂಘದ ಜೊತೆಕಾರ್ಯದಶರ್ಿ ಪುಷ್ಪರಾಜ ಶೆಟ್ಟಿ ತಲೇಕಳ ಕಾರ್ಯಕ್ರಮ ನಿರೂಪಿಸಿ, ಸಾಂಸ್ಕೃತಿಕ ಕಾರ್ಯದಶರ್ಿ ದೇವಿಪ್ರಸಾದ್ ಶೆಟ್ಟಿ ಬೆಜ್ಜ ವಿದ್ಯಾಥರ್ಿಗಳ ಕಲಿಕಾ ಸಹಾಯಧನ ವಿತರಣೆಯ ವಿವರ, ಪ್ರತಿಭಾ ಪುರಸ್ಕಾರದ ವಿವರ, ಆಭಿನಂದನಾ ಕಾರ್ಯಕ್ರಮದ ವಿವರ ವಾಚಿಸಿದರು. ಸಂಘದ ಜೊತೆ ಕಾರ್ಯದಶರ್ಿ ಬಾಲಕೃಷ್ಣ ಶೆಟ್ಟಿ ಪೊಯ್ಯೆಲು ವಂದಿಸಿದರು.