HEALTH TIPS

No title

             ಕನ್ನಡ ಕಂದನ ಸಿರಿಚಂದನ ಗಿಡ ಯೋಜನೆಗೆ ನಾಂದಿ
              "ಗಿಡ ನೆಡುವುದರ ಜೊತೆಗೆ ಅದರ ಸಂರಕ್ಷಣೆಯೂ ಮುಖ್ಯ"- ಕಾರಂತ
    ಮಧೂರು : "ಪರಿಸರವನ್ನು ಉಳಿಸಿ ಬೆಳೆಸುವ ಮೂಲಕ ವ್ಯಕ್ತಿತ್ವ ಮನುಷ್ಯ ತನ್ನ ಭವಿಷ್ಯದ ಅನೇಕ ಅಪಾಯಗಳನ್ನು ತಪ್ಪಿಸಬಹುದು. ಪರಂಪರಾಗತವಾಗಿ ಬಂದ ಸಂಪತ್ತಾದ ಪರಿಸರವನ್ನು ಉಳಿಸಿ ಮುಂದಿನ ತಲೆಮಾರಿಗೆ ಹಸ್ತಾಂತರಿಸುವುದು ಪ್ರತಿಯೊಬ್ಬನ ಕರ್ತವ್ಯ. ಪರಿಸರವನ್ನು ಉಳಿಸುವುದು ಪ್ರತಿಯೊಬ್ಬನ ಮೂಲಭೂತ ಹಕ್ಕು ಎಂದು ಪರಿಗಣಿಸದಿದ್ದಲ್ಲಿ ಅದು ಪಕೃತಿಯ ಅಧೋಗತಿಗೆ ಕಾರಣವಾಗುತ್ತೆ. ವಿಶ್ವ ಪರಿಸರ ದಿನ ಗಿಡಗಳನ್ನು ನೆಡುವುದು ಮುಖ್ಯ ವಿಷಯವಲ್ಲ. ನೆಟ್ಟ ಗಿಡಗಳನ್ನು ಸಂರಕ್ಷಿಸಿ ಉಳಿಸಿಕೊಳ್ಳುವುದು ಅತೀ ಅಗತ್ಯ. ಆ ಕೆಲಸವನ್ನು ಕಾಸರಗೋಡಿನ ಸಿರಿ ಚಂದನ ಕನ್ನಡ ಯುವ ಬಳಗ ಮಾಡುತ್ತಿರುವುದು ನಿಜವಾಗಿಯೂ ಶ್ಲಾಘನೀಯ ಎಂದು ಕೃಷಿಕ, ಪರಿಸರ ಪ್ರೇಮಿ ದೇಶಮಂಗಲ ಜಯರಾಮ ಕಾರಂತ ಅವರು ನುಡಿದರು.
   ಸಿರಿ ಚಂದನ ಕನ್ನಡ ಯುವ ಬಳಗದ ನೇತೃತ್ವದಲ್ಲಿ ಮಧೂರು ಸಮೀಪದ ಕರೋಡಿಯ ವೆಂಕಟೇಶ ನಿಲಯದಲ್ಲಿ ನಡೆದ 'ಕನ್ನಡ ಕಂದನ ಸಿರಿ ಚಂದನ ಗಿಡ' ಯೋಜನೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
    "ಪರಿಸರ ಸಂರಕ್ಷಣೆಯ ಕುರಿತು ಭಾಷಣಗಳಿಗೆ ಇವತ್ತೇನೂ ಕೊರತೆಯಿಲ್ಲ. ಜಾಗೃತಿಯೂ ನಡೆಯುತ್ತದೆ, ಗಿಡ ವಿತರಣೆಯಂತೂ ಒಂದುದಿನ ಎಗ್ಗಿಲ್ಲದೆ ನಡೆಯುತ್ತದೆ. ಆದರೆ ಗಿಡ ನೆಡುವ ಮತ್ತು ನೆಟ್ಟ ಗಿಡವನ್ನು ಉಳಿಸುವ ಪ್ರಕ್ರಿಯೆ ಮಾತ್ರ ನಡೆಯುವುದಿಲ್ಲ. ತಳಮಟ್ಟಕ್ಕಿಳಿದು ಯೋಚಿಸುವ ಹಾಗೂ ಪ್ರಾಮಾಣಿಕವಾಗಿ ದುಡಿಯುವ ಮನಸ್ಸುಗಳಿಗೆ ಇಂದು ಕೊರತೆಯಿದೆ. ಎಷ್ಟು ಗಿಡಗಳನ್ನು ನೆಟ್ಟಿದ್ದೇವೆ ಎಂಬುದು ಮುಖ್ಯವಲ್ಲ, ನೆಟ್ಟ ಗಿಡಗಳಲ್ಲಿ ಎಷ್ಟು ಬದುಕಿವೆ ಎಂಬುದು ಮುಖ್ಯ. ಜೈವಕೃಷಿಯ ಬಗ್ಗೆ ಅದರ ಮಹತ್ವಗಳ ಬಗ್ಗೆ ಭಾಷಣ ಮತ್ತು ಅದರ ಒಳಿತುಗಳ ಸಂದೇಶ ತಿಳಿಸುವುದರ ಜತೆಗೆ ನಾವೂ ನಮ್ಮ ಹಿತ್ತಿಲಲ್ಲಿ ಅದನ್ನು ಸಾಕಾರಗೊಳಿಸಬೇಕು. ಕಾಸರಗೋಡಿನ ಯುವಕರು ಪ್ರಾಧ್ಯಾಪಕರೊಬ್ಬರ ನೇತೃತ್ವದಲ್ಲಿ ಇಂತಹ ಪರಿಣಾಮಕಾರಿ ಯೋಜನೆಗಳನ್ನು ಹಮ್ಮಿಕೊಂಡು ಅದನ್ನು ಮನೆಮನೆಗೂ ತಲುಪಿಸುತ್ತಿರುವುದು ಉಳಿದವರಿಗೆ ಪ್ರೇರಣೆ" ಎಂದು ದೇಶಮಂಗಲ ಜಯರಾಮ ಕಾರಂತರು ಅಭಿಪ್ರಾಯಪಟ್ಟರು.
   ಕಾರ್ಯಕ್ರಮದಲ್ಲಿ ಸಿರಿಚಂದನ ಕನ್ನಡ ಯುವಬಳಗದ ಪರಿಸರ ಸಂರಕ್ಷಣಾ ಸಮಿತಿ ಸಂಚಾಲಕ ಕೀರ್ತನ್ ಕುಮಾರ್ ಸಿ. ಎಚ್ ಅಧ್ಯಕ್ಷತೆ ವಹಿಸಿದ್ದರು. ಬಳಗದ ಮಾರ್ಗದರ್ಶಕರೂ ಪ್ರಾಧ್ಯಾಪಕ ಡಾ. ರತ್ನಾಕರ ಮಲ್ಲಮೂಲೆ ಮಾತನಾಡಿ, ಸಿರಿಚಂದನ ಕನ್ನಡ ಯುವಬಳಗವು ಮಾಡಿದ ಕೆಲಸ ಕಾರ್ಯಗಳು ಔಚಿತ್ಯಪೂರ್ಣವಾಗಿರಬೇಕೆಂಬ ಉದ್ದೇಶದಿಂದ ಮತ್ತು ಸಾಮಾನ್ಯ ಶಾಲೆಯ ವಿದ್ಯಾಥರ್ಿಗಳಿಗೆ ಪ್ರೋತ್ಸಾಹ ನೀಡುವ ಸದುದ್ದೇಶದಿಂದ ಇಂತಹ ಯೋಜನೆಯೊಂದನ್ನು ಬಳಗವು ಹಮ್ಮಿಕೊಂಡಿದ್ದು, ಜಿಲ್ಲೆಯ ವಿವಿಧ ಭಾಗಗಳ ವಿದ್ಯಾಥರ್ಿಗಳ ಮನೆಗೆ ತೆರಳಿ ಅವರ ಹೆಸರಿನಲ್ಲಿಯೇ ಅವರ ಹಿತ್ತಲಲ್ಲಿ ಗಿಡ ನೆಡುವ ಯೋಜನೆಯನ್ನು ಮಾಡಿದ್ದೇವೆ. ಈ ಪ್ರಕ್ರಿಯೆಯನ್ನು ಪ್ರತಿ ವರ್ಷ ಮುಂದುವರೆಸಿಕೊಂಡು ಹೋಗುವ ಯೋಜನೆ ಬಳಗಕ್ಕಿದೆ. ಆ ಗಿಡದ ಸಂರಕ್ಷಣೆಯ ಹೊಣೆಯನ್ನು ಮಗುವಿಗೆ ವಹಿಸಿಕೊಟ್ಟು ಮಗುವಿಗೆ ಗಿಡದ ಬಗ್ಗೆ ಸದಾ ನೆನಪಿಡಲು ಮನೆಯ ಗೋಡೆಗೆ ತೂಗು ಹಾಕಲು ನೆನಪಿನ ಪ್ರಮಾಣ ಪತ್ರವೊಂದನ್ನು  ನೀಡಲಾಗುತ್ತದೆ. ಬಳಿಕ ಮೂರು ವರ್ಷ ಕಳೆದು ಅದೇ ಮನೆಗೆ ಬಳಗದ ಕಾರ್ಯಕರ್ತರು ಭೇಟಿ ನೀಡಿ, ನೆಡಲಾದ 'ಕನ್ನಡಕಂದನ ಸಿರಿಚಂದನ'ಎಂಬ ಹೆಸರಿನ ಈ ಎರಡು ಗಿಡಗಳಲ್ಲಿ ಕನಿಷ್ಠ ಒಂದರ ಸಂರಕ್ಷಣೆಯಾದರೂ ಸಮರ್ಪಕವಾಗಿದ್ದಲ್ಲಿ ಆ ವಿದ್ಯಾಥರ್ಿಯನ್ನು ಬಳಗವು ಸಾರ್ವಜನಿಕ ಕಾರ್ಯಕ್ರಮದಲ್ಲಿ ಅಭಿನಂದಿಸುವುದು. ಈ ಮೂಲಕ ಮಗುವಿನಲ್ಲಿ ಪರಿಸರದ ಕುರಿತು ಎಳವೆಯಲ್ಲಿಯೇ ಕಾಳಜಿ ಮೂಡಿಸುವುದು ಬಳಗದ ಮತ್ತೊಂದು ಉದ್ದೇಶ ಎಂದರು.
    ಮಧೂರು ಸರಕಾರಿ ಕಿರಿಯ ಬುನಾದಿ ಶಾಲೆಯ ಅಧ್ಯಾಪಿಕೆಯರಾದ ದೇವಕಿ ದೇವಿ, ಪ್ರಮೀಳಾ, ಬಳಗದ ಅಧ್ಯಕ್ಷ ರಕ್ಷಿತ್ ಪಿ.ಎಸ್, ಗೌರವ ಸಲಹೆಗಾರ ಸುಕುಮಾರ ಕುದ್ರೆಪ್ಪಾಡಿ ನಲ್ನುಡಿಗಳನ್ನಾಡಿದರು. ಗಿಡದ ಸಂರಕ್ಷಣೆಯನ್ನು ಮನೆಯವರ ಸಹಾಯದೊಂದಿಗೆ ಜವಾಬ್ದಾರಿುಂದಲೇ ಮಾಡುವುದಾಗಿ ಕುಮಾರಿ ಹಿತ ಭರವಸೆ ನೀಡಿದರು. ಸುಕುಮಾರ ಕುದ್ರೆಪ್ಪಾಡಿ ಪ್ರಮಾಣ ಪತ್ರವನ್ನು ಕು.ಹಿತಾರಿಗೆ ಹಸ್ತಾಂತರಿಸಿದರು. ಬಳಗದ ಪರಿಸರ ಸಂರಕ್ಷಣಾ ಸಮಿತಿ ಸಹ ಸಂಯೋಜಕ ಎಂ.ಫಿಲ್ ವಿದ್ಯಾಥರ್ಿ ಸುಜಿತ್ ಉಪ್ಪಳ ಪ್ರಾರ್ಥನೆ ಹಾಡಿದರು. ಬಳಗದ ಪರಿಸರ ಸಂರಕ್ಷಣಾ ಸಮಿತಿ ಸಹ ಸಂಯೋಜಕ ಪ್ರದೀಪ್ ಬಿ.ಎಸ್ ಸ್ವಾಗತಿಸಿ, ಸಿರಿ ಚಂದನ ಕನ್ನಡ ಯುವ ಬಳಗದ ಉಪಾಧ್ಯಕ್ಷ ಪ್ರಶಾಂತ್ ಹೊಳ್ಳ ವಂದಿಸಿದರು. ಜೊತೆ ಕಾರ್ಯದಶರ್ಿ ಸೌಮ್ಯಾ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ಕು. ಹಿತಾ ಅವರ ಮನೆಯ ಹಿತ್ತಲಲ್ಲಿ ಹಲಸು ಮತ್ತು ಸೀತಾಫಲಗಳ ಗಿಡ ನೆಡಲಾಯಿತು. ಬಾಲಕೃಷ್ಣ ಬೆಳಿಂಜ, ಸುಶ್ಮಿತಾ ಆರ್, ವಿನೋದ್ ಕುಮಾರ್ ಸಿ. ಎಚ್, ಅಜಿತ್ ಶೆಟ್ಟಿ ಬೋವಿಕ್ಕಾನ, ಕಲ್ಯಾಣಿ, ಚಿದಂಬರ ಕೆ, ಪ್ರವೀಣ, ಸುನೀತಾ, ವೀಣಾ, ಜೀವಾ. ಇ, ಜಿತಾಲಿ.ಇ, ಗುರುಪ್ರಸಾದ್, ಸಿ, ಕಮಲ, ಶರಣ್ಯ, ಸಂದೀಪ್ ಮುಂತಾದವರು ಉಪಸ್ಥಿತರಿದ್ದರು.

   


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries