HEALTH TIPS

No title

                    ಹಸಿರು ಸಹಕಾರ ಯೋಜನೆಗೆ ಚಾಲನೆ       
   ಮಂಜೇಶ್ವರ: ರಾಜ್ಯ ಸರಕಾರದ ನಿದರ್ೇಶನದಂತೆ ಮಂಗಲ್ಪಾಡಿ, ಪೈವಳಿಕೆ ಅರ್ಬನ್ ಕೋಪರೇಟಿವ್ ಸಹಕಾರಿ ಬ್ಯಾಂಕ್ ನೇತೃತ್ವದಲ್ಲಿ ಹೊಸಂಗಡಿ ಸಮೀಪದ ವಾಮಂಜೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಸಿರು ಸಹಕಾರ ಯೋಜನೆಗೆ ಸೋಮವಾರ ಚಾಲನೆ ನೀಡಲಾಯಿತು.
  ಸಹಕಾರಿ ಬ್ಯಾಂಕ್ ಅಧ್ಯಕ್ಷ ಕೆ.ಆರ್.ಜಯಾನಂದ ಅವರು ಗಿಡ ನೆಡುವ ಮೂಲಕ ಯೋಜನೆಯನ್ನು ಉದ್ಘಾಟಿಸಿದರು.ಬಳಿಕ ಅವರು ಮಾತನಾಡಿ, ಆಧುನಿಕ ನಗರೀಕರಣ, ಯಾಂತ್ರೀಕರಣಗಳ ಮಧ್ಯೆ ಭೌಗೋಳಿಕ ಸ್ಥಿತಿಗತಿಗಳು ಗಂಭೀರ ಸ್ವರೂಪದ ಅಸಮತೋಲನಕ್ಕೆ ಕಾರಣವಾಗುತ್ತಿದ್ದು, ಜೀವಜಾಲಗಳ ಅಸ್ತಿತ್ವಕ್ಕೆ ಸವಾಲಾಗುತ್ತಿದೆ. ಇದರಿಂದ ಭೂಗೋಲವನ್ನು ಸಂರಕ್ಷಿಸುವಲ್ಲಿ ಗಿಡ=ಮರಗಳ ಪಾತ್ರವನ್ನು ಅಥ್ರ್ಯಸಿ ಕ್ರಿಯಾತ್ಮಕ ಯೋಜನೆಗಳ ಮೂಲಕ ಸಸ್ಯ ಸಂಪತ್ತನ್ನು ಮತ್ತೆ ಬೆಳೆಸುವ ಅಗತ್ಯವಿದೆ ಎಂದು ತಿಳಿಸಿದರು.
   ಶಾಲಾ ಮುಖ್ಯೋಪಾಧ್ಯಾಯಿನಿ ಶಶಿಕಲಾ ಟೀಚರ್ ಅಧ್ಯಕ್ಷತೆ ವಹಿಸಿದ್ದರು. ಬ್ಲಾಕ್ ಪಂಚಾಯತು ಮಾಜಿ ಸದಸ್ಯ ಪ್ರಭಾಕರ ಶೆಟ್ಟಿ ಮಂಜಯ್ಯಹಿತ್ಲು, ಶೋಭಾ ಟೀಚರ್, ಪ್ರೀತಂ ಟೀಚರ್, ಸುಬೈದಾ ಟೀಚರ್, ಸದಾಶಿವ ಮಾಸ್ತರ್ ಉಪಸ್ಥಿತರಿದ್ದು ಶುಭಹಾರೈಸಿದರು. ಸೇವಾ ಸಹಕಾರಿ ಬ್ಯಾಂಕ್ ನಿದರ್ೇಶಕ ಜಗನ್ನಾಥ ಎಂ ಸ್ವಾಗತಿಸಿ, ಸತೀಶ ಎಲಿಯಾಣ ವಂದಿಸಿದರು.   
   

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries