HEALTH TIPS

No title

                  ಚಿಕಿತ್ಸೆ ಸಕಾಲಕ್ಕಿಲ್ಲ: ವೈದ್ಯರು ಸಹಾಯಕ್ಕಿಲ್ಲ!
    ಮಧೂರು: ಮಾಯಿಪ್ಪಾಡಿಯಲ್ಲಿ ಕಾಯರ್ಾಚರಿಸುತ್ತಿರುವ ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ ಹೊರರೋಗಿ ವಿಭಾಗದ ವೈದ್ಯರು ಸಮಯಕ್ಕೆ ಸರಿಯಾಗಿ ಹಾಜರಾಗದಿರುವುದರಿಂದ ರೋಗಿಗಳು ಸಂಕಷ್ಟ ಅನುಭವಿಸಬೇಕಾದ ಸ್ಥಿತಿ ನಿಮರ್ಾಣವಾಗಿದೆ.
   ಮಳೆಗಾಲದಲ್ಲಿ  ಅನೇಕ ಮಾರಕ ರೋಗಗಳಿಂದ ಬಳಲುತ್ತಿರುವ ಮಹಿಳೆಯರು, ಶಾಲಾ ಮಕ್ಕಳು, ವೃದ್ದರು ಸಹಿತ ಅನೇಕ ಮಂದಿ ಕಾದು ಸುಸ್ತಾಗಿ ಹಿಂತುರುಗಿ ಬೇರೆ ಖಾಸಗಿ ಆಸ್ಪತ್ರೆಗೆ ತೆರಳಬೇಕಾಗುತ್ತಿದೆ.
   ಬೆಳಗ್ಗೆ 9. ರಿಂದ ಮಧ್ಯಾಹ್ನ 02ರ ವರೆಗೆ  ರೋಗಿಗಳ ಶುಶ್ರೂಶೆಗೆ ತೆರೆದಿಡಬೇಕಿದ್ದ  ಹೊರ ರೋಗಿಗಳ ಕೌಂಟರ್ ಬೆಳಗ್ಗೆ 09.50 ಕ್ಕೂ ಪ್ರಾರಂಭವಾಗಿಲ್ಲ.( ಚಿತ್ರದಲ್ಲಿ ದಿನಾಂಕ ಮತ್ತು ಸಮಯವನ್ನು ಕಾಣಬಹುದು.)
    ಪ್ರತಿ ವರ್ಷ  ಕೇಂದ್ರ - ರಾಜ್ಯ ಸರಕಾರಗಳ ಮುಂಗಡ ಪತ್ರದಲ್ಲಿ  ಕೋಟಿ ಕೋಟಿ ಅನುದಾನ ಪಡೆಯುವ ಅರೋಗ್ಯ ಇಲಾಖೆಯ ಸಿಬ್ಬಂದಿಗಳ ಬೇಜವಾಬ್ದರಿಯಿಂದ ಅನೇಕ ಮಾರಕ ರೋಗಗಳಿಗೆ ಪ್ರಾಥಮಿಕ ಹಂತದಲ್ಲಿ ಸರಿಯಾಗಿ ಚಿಕಿತ್ಸೆ ನೀಡದಿರುವುದೇ ಸಣ್ಣ ಸಣ್ಣ ಜ್ವರಗಳು ಕೂಡ ಡೆಂಗ್ಯೂ , ಮಲೇರಿಯಾ, ನೀಫಾ ಎಂಬಿತ್ಯಾದಿ ಮಾರಕ ಜ್ವರಗಳ ಪಟ್ಟಿಗೆ ಸೇರಲು ಕಾರಣವಾಗುತ್ತಿದೆ.
   ಜಿಲ್ಲೆಯ ಬಹುತೇಕ ಆರೋಗ್ಯ ಕೇಂದ್ರಗಳಲ್ಲಿ ದುಡಿಯುತ್ತಿರುವ ವೈದ್ಯರುಗಳು-ಸಿಬ್ಬಂದಿಗಳು ಹೊರ ಜಿಲ್ಲೆಗಳಿಂದ ಆಗಮಿಸುವವರಾಗಿದ್ದು, ರೈಲು ತಡವಾಗಿದೆಯೆಂಬ ಕಾರಣ ನೀಡಿ ಬಚವಾಗುತ್ತಿದ್ದಾರೆ. ಜೊತೆಗೆ ಅಗತ್ಯ ಸಿಬ್ಬಂದಿಗಳ ಕೊರತೆಯಿರುವುದರಿಂದ ಮೇಲಧಿಕಾರಿಗಳ ಸಭೆ, ಸಮಾವೇಶಗಳಲ್ಲಿ ಭಾಗವಹಿಸಬೇಕಾದ ಒತ್ತಡಗಳೂ ಸಮಸ್ಯೆಗೆ ಕಾರಣವಾಗುತ್ತಿದೆ.  ಈ ಬಗ್ಗೆ ಅಧಿಕೃತರು ಶೀಘ್ರ ಕ್ರಮ ಕೈಗೊಳ್ಳುವರೇ ಎಂದು ಕಾದು ನೋಡಬೇಕಿದೆ.
   ಏನಂದ್ರು:
  ಜ್ವರದಿಂದ ಬಳಲುತ್ತಿದ್ದ ನಾನು ಗುರುವಾರ ಬೆಳಿಗ್ಗೆ 08.45  ಕ್ಕೆ ಮಾಯಿಪ್ಪಾಡಿ ಪ್ರಾಥಮಿಕ ಅರೋಗ್ಯ ಕೇಂದ್ರಕ್ಕೆ ತಲುಪಿ, 09.45 ರ ವರೆಗೆ ಕಾದು ಕುಳಿತು ಬಳಿಕ ಆಸ್ಪತ್ರೆ ಸಿಬ್ಬಂದಿಯಲ್ಲಿ ವೈದ್ಯರ ಸಮಯದ ಬಗ್ಗೆ ವಿಚಾರಿಸಿದಾಗ ವೈದ್ಯರು ಆಗಮಿಸುವಾಗ 10 -10.30 ಗಂಟೆಯೂ ಆಗಬಹುದು ಎಂದು  ಸರಿಯಾದ ಸಮಯ ಹೇಳಲು ಸಾಧ್ಯವಿಲ್ಲ ಎಂಬ ಉತ್ತರ ನೀಡಿರುವರು. 10. ಗಂಟೆಗೂ ವೈದ್ಯರು ಬಾರದ ಕಾರಣ ನಾನು ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ತೆರಳಬೇಕಾಯಿತು.
    ಶರತ್ ಕುಂಬಳೆ.
    ಸ್ಥಳೀಯ ನಿವಾಸಿ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries