ಕಾಸರಗೋಡು ಆಯುವರ್ೇದ ಆಸ್ಪತ್ರೆ ಮೇಲ್ದಜರ್ೆಗೆ : ಡಿಎಂಒ
ಕಾಸರಗೋಡು: ಭಾರತೀಯ ಚಿಕಿತ್ಸಾ ಇಲಾಖೆಯ ಆಶ್ರಯದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಚಿಕಿತ್ಸಾ ಸೌಕರ್ಯ ಉತ್ತಮಗೊಳಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತ್ವರಿತಗೊಳಿಸಲಾಗುವುದು ಎಂದು ನೂತನ ಡಿಎಂಒ(ಡಿಸ್ಟ್ರಿಕ್ಟ್ ಮೆಡಿಕಲ್ ಆಫೀಸರ್) ಆಗಿ ಅಧಿಕಾರ ವಹಿಸಿಕೊಂಡ ಡಾ.ಎಸ್.ವಿಜಯ ಹೇಳಿದ್ದಾರೆ.
ಕಾಸರಗೋಡು ಮತ್ತು ಮಂಜೇಶ್ವರ ತಾಲೂಕುಗಳಲ್ಲಿ ಒಳರೋಗಿಗಳಿಗೆ ಚಿಕಿತ್ಸೆ ನೀಡುವ ಏಕೈಕ ಸರಕಾರಿ ಆಯುವರ್ೇದ ಆಸ್ಪತ್ರೆ ಕಾಸರಗೋಡು ಆಯುವರ್ೇದ ಆಸ್ಪತ್ರೆಯಾಗಿದೆ. ಮಂಜೇಶ್ವರ ತಾಲೂಕಿನಲ್ಲಿ ಮೀಂಜ ಗ್ರಾಮ ಪಂಚಾಯತ್ನ ಮೀಯಪದವಿನಲ್ಲಿ ಆಸ್ಪತ್ರೆ ಸ್ಥಾಪಿಸಲು ಮೂರು ಎಕರೆ ಸ್ಥಳ ಒದಗಿಸಲು ನಾಲ್ಕು ತಿಂಗಳ ಹಿಂದೆ ಪಂಚಾಯತ್ ಆಡಳಿತ ಸಮಿತಿಯು ತೀಮರ್ಾನ ಕೈಗೊಂಡಿತ್ತು.
ಮೀಯಪದವಿನ ಡಿಸ್ಪೆನ್ಸರಿಗೆ ಹೊಂದಿಕೊಂಡಿರುವ ಸ್ಥಳ ಇದಾಗಿದೆ. ಇದನ್ನು ಉಪಯೋಗಿಸಿ ಆಸ್ಪತ್ರೆ ಸ್ಥಾಪಿಸಲು ಆದ್ಯತೆ ನೀಡಲಾಗುವುದು. ಕನರ್ಾಟಕದ ಗಡಿ ಪ್ರದೇಶಗಳು ಮೊದಲಾದೆಡೆಗಳಿಂದ ರೋಗಿಗಳು ಬರುವ ಕಾಸರಗೋಡು ಮತ್ತು ಮಂಜೇಶ್ವರ ತಾಲೂಕುಗಳ ಏಕೈಕ ಸರಕಾರಿ ಆಯುವರ್ೇದ ಆಸ್ಪತ್ರೆಯಾದ ಕಾಸರಗೋಡು ಆಯುವರ್ೇದ ಆಸ್ಪತ್ರೆಯನ್ನು 50 ಬೆಡ್ಗಳಿರುವ ತಾಲೂಕು ಆಸ್ಪತ್ರೆಯನ್ನಾಗಿ ಅಭಿವೃದ್ಧಿ ಗೊಳಿಸಲು ನಿರ್ಧರಿಸಲಾಗಿದೆ ಎಂದು ಡಿಎಂಒ ತಿಳಿಸಿದರು.
ಇದೀಗ ಕಾಸರಗೋಡು ಆಯುವರ್ೇದ ಆಸ್ಪತ್ರೆಯಲ್ಲಿ 30 ಬೆಡ್ಗಳಿವೆ. ಜಿಲ್ಲೆಯಲ್ಲಿ ಒಟ್ಟು ಐದು ಆಸ್ಪತ್ರೆಗಳು, ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್ನ ಒಂಭತ್ತು ಡಿಸ್ಪೆನ್ಸರಿಗಳ ಸಹಿತ 46 ಡಿಸ್ಪೆನ್ಸರಿಗಳಿವೆ. ಇವುಗಳ ಕಾಯರ್ಾಚರಣೆಯನ್ನು ಮತ್ತಷ್ಟು ಸಕ್ರಿಯಗೊಳಿಸಲು ತೀಮರ್ಾನಿಸಲಾಗಿದೆ.
ಖಾಲಿಯಿರುವ ವೈದ್ಯರ ಹುದ್ದೆಗಳಿಗೆ ತಾತ್ಕಾಲಿಕ ನೇಮಕಾತಿ ನಡೆಸಲಾಗುವುದು. ಸಾಂಕ್ರಾಮಿಕ ರೋಗ ಪ್ರತಿರೋಧಕ ಕಾರ್ಯ ಚಟುವಟಿಕೆಗಳಿಗೆ ಅಗತ್ಯವಿರುವ ಎಲ್ಲಾ ರೀತಿಯ ಯೋಜನೆಗಳನ್ನು ರೂಪಿಸಲಾಗುವುದು. ಜಾಗೃತಿ ತರಗತಿಗಳು ಇತ್ಯಾದಿಗಳನ್ನು ನಡೆಸಲಿರುವ ಕ್ರಮಗಳಿಗೆ ಆರು ಬ್ಲಾಕ್ಗಳಲ್ಲಿ ತಲಾ ಒಬ್ಬ ಸಂಚಾಲಕರನ್ನು ನಿಯೋಜಿಸಲಾಗಿದೆ. ಸಾಂಕ್ರಾಮಿಕ ರೋಗ ಇರುವುದಾಗಿ ಮಾಹಿತಿ ಲಭಿಸಿದರೆ ಕೂಡಲೇ ಸ್ಥಳಕ್ಕೆ ತಲುಪಲು ಅಗತ್ಯವಿರುವ ಟಾಸ್ಕ್ಫೋಸರ್್ ರಚಿಸಲಾಗಿದೆ. ಜಿಲ್ಲೆಯಾದ್ಯಂತದ ಕಾರ್ಯ ಚಟುವಟಿಕೆಗಳಿಗೆ ಪ್ರಧಾನ ಸಂಚಾಲಕರಾಗಿ ಡಾ.ಪಿ.ಎಸ್.ಮಹೇಶ್ ಅವರಿಗೆ ಹೊಣೆಗಾರಿಕೆ ವಹಿಸಿಕೊಡಲಾಗಿದೆ ಎಂದು ಡಿಎಂಒ ಡಾ.ಎಸ್.ವಿಜಯ ತಿಳಿಸಿದ್ದಾರೆ.