ನಾಳೆ ಬದಿಯಡ್ಕದಲ್ಲಿ ಹಲಸಿನ ಹಬ್ಬ
ಬದಿಯಡ್ಕ: ಬದಿಯಡ್ಕ ಗ್ರಾಮ ಪಂಚಾಯತು ಆಡಳಿತ ಮತ್ತು ಕುಟುಂಬಶ್ರೀಸಿಡಿಎಸ್ ಹಾಗೂ ವಿವಿಧ ಸಂಘಸಂಸ್ಥೆಗಳ ಸಹಕಾರದೊಂದಿಗೆ ಬದಿಯಡ್ಕ ಗ್ರಾಮ ಪಂಚಾಯತು ಮಟ್ಟದ ಮೂರನೇ ವರ್ಷದ ಹಲಸು ಹಬ್ಬ ಸೋಮವಾರ(ಜೂ.18) ಬದಿಯಡ್ಕದ ಸಂಸ್ಕೃತಿ ಭವನದಲ್ಲಿ ಬೆಳಿಗ್ಗೆ 10 ರಿಂದ ನಡೆಯಲಿದೆ.
ಬದಿಯಡ್ಕ ಗ್ರಾ.ಪಂ. ಅಧ್ಯಕ್ಷ ಕೆ.ಎನ್ ಕೃಷ್ಣ ಭಟ್ ಹಲಸು ಹಬ್ಬವನ್ನು ಉದ್ಘಾಟಿಸುವರು. ಗ್ರಾ.ಪಂ. ನ ಪ್ರತಿನಿಧಿಗಳು, ಕುಟುಂಬಶ್ರೀ ಸಿಡಿಎಸ್ ಪ್ರತಿನಿಧಿಗಳ ಸಹಿತ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಉಪಸ್ಥಿತರಿರುವರು.
ಬದಿಯಡ್ಕ ಗ್ರಾಮ ಪಂಚಾಯತು ಕಳೆದ ಎರಡು ವರ್ಷಗಳಿಂದ ನಡೆಸಿಕೊಂಡುಬರಲಾಗುತ್ತಿದ್ದು, ಕೇರಳದಲ್ಲೇ ಹಲಸು ಹಬ್ಬವನ್ನು ಆಚರಿಸಿದ ಮೊದಲ ಗ್ರಾ.ಪಂ. ಎಂಬ ಹೆಗ್ಗಳಿಕೆ ಬದಿಯಡ್ಕ ಗ್ರಾಮ ಪಂಚಾಯತಿನದು. ಪ್ರಸ್ತುತ ಕೇರಳ ಸರಕಾರವು ಹಲಸನ್ನು ರಾಜ್ಯದ ಅಧಿಕೃತ ಹಣ್ಣೆಮದು ಘೋಷಿಸಿದ ಬಳಿಕ ರಾಜ್ಯದ ವಿವಿಧೆಡೆ ಹಲಸಿಗೆ ಎಲ್ಲಿಲ್ಲದ ಮಹತ್ವ ನೀಡಿ ಪ್ರದರ್ಶನ, ಉತ್ಸವ ಆಚರಿಸಲಾಗುತ್ತಿದ್ದು, ಬದಿಯಡ್ಕ ಗ್ರಾ.ಪಂ. ಈ ನಿಟ್ಟಿನಲ್ಲಿ ಕಳೆದ ಎರಡು ವರ್ಷಗಳಿಂದ ಯಶಸ್ವಿಯಾಗಿ ನಡೆಸಿದ ಹಲಸು ಹಬ್ಬ ಇದೀಗ ಮೂರನೇ ವರ್ಷಕ್ಕೆ ಪಾದಾರ್ಪಣೆಯಿರಿಸಿದೆ.
ಸೋಮವಾರ ಹಲಸಿನ ಹಬ್ಬದ ಉದ್ಘಾಟನೆಯ ಬಳಿಕ ಸಂಜೆ 4.30ರ ವರೆಗೆ ಪ್ರದರ್ಶನ ಹಾಗೂ ಮಾರಾಟ ನಡೆಯಲಿದ್ದು, ವಿವಿಧೆಡೆಗಳ ಹಲಸು ಉತ್ಪನ್ನ ಮಾರಾಟಗಾರರು ಆಗಮಿಸುವರು.