HEALTH TIPS

No title

                ಯೋಗ ಎಲ್ಲರನ್ನೂ ಒಗ್ಗೂಡಿಸುತ್ತದೆ: ಪ್ರಧಾನಿ ಮೋದಿ
      ಡೆಹ್ರಾಡೂನ್: ನೂರಾರು ದೈಹಿಕ ಸಮಸ್ಯೆಗಳಿಗೆ ಯೋಗ ಮದ್ದಾಗಿದ್ದು, ಯೋಗ ಎಲ್ಲರನ್ನೂ ಒಗ್ಗೂಡಿಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.
         ಅಂತಾರಾಷ್ಟ್ರೀಯ ಯೋಗ ದಿನ ಅಂಗವಾಗಿ ಉತ್ತರಾಖಂಡ್ ನ ಡೆಹ್ರಾಡೂನ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ 55 ಸಾವಿರಕ್ಕೂ ಹೆಚ್ಚು ಜನರೊಂದಿಗೆ ಗುರುವಾರ  ಯೋಗಸಾನ ಮಾಡಿದರು. ಇದಕ್ಕೂ ಮೊದಲು ಯೋಗದಿನವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, 'ಈ ವಿಶಾಲ ಹಾಗೂ ಸುಂದರ ಮೈದಾನದಲ್ಲಿರುವ ಎಲ್ಲರಿಗೂ ಹಾಗೂ ಎಲ್ಲಾ ಯೋಗ ಪ್ರೇಮಿಗಳಿಗೂ ನಾನು ದೈವ ಭೂಮಿ ಉತ್ತರಾಖಂಡ್ ನಿಂದ ನಾಲ್ಕನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಶುಭಾಶಯ ತಿಳಿಸುತ್ತೇನೆ' ಎಂದು ಹೇಳಿದರು.
    'ತಾಯಿ ಗಂಗಾ ನೆಲೆಸಿರುವ ಈ ಭೂಮಿಯಲ್ಲಿ ಆದಿಶಂಕರಚಾರ್ಯ ಕಾಲಿಟ್ಟಿದ್ದಾರೆ. ಈ ಜಾಗ ವಿವೇಕಾನಂದ ಅವರಿಗೆ ಪ್ರೇರಣೆ ಮಾಡಿತ್ತು. ಅಂತಹ ಭೂಮಿಯಲ್ಲಿ ನಾವು ಈ ರೀತಿ ಸೇರಿರುವುದು ಯಾವುದೇ ಸೌಭಾಗ್ಯಕ್ಕೆ ಕಡಿಮೆ ಇಲ್ಲ. ಉತ್ತರಾಖಂಡ್ ಹಲವಾರು ದಶಕಗಳಿಂದ ಯೋಗದ ಮುಖ್ಯ ಕೇಂದ್ರವಾಗಿದೆ. ಇಲ್ಲಿನ ಪರ್ವತಗಳು ಸ್ವತಃ ಯೋಗ ಹಾಗೂ ಆಯುವರ್ೇದಕ್ಕೆ ಪ್ರೇರಣೆ ನೀಡುತ್ತದೆ. ಸಾಮಾನ್ಯನಾಗಿರುವ ನಾಗರಿಕ ಈ ಭೂಮಿಗೆ ಬಂದಾಗ ಅವರಿಗೆ ಒಂದು ಬೇರೆ ರೀತಿಯ ದಿವ್ಯ ಅನುಭವ ಆಗುತ್ತದೆ' ಎಂದ ಪ್ರಧಾನಿಗಳು 'ಇದು ನಮ್ಮ ಎಲ್ಲ ಭಾರತೀಯರಿಗೆ ಗೌರವದ ಮಾತು. ಏಕೆಂದರೆ ಸೂರ್ಯ ಹುಟ್ಟುತ್ತಲೇ ತಮ್ಮ ಕಿರಣವನ್ನು ಎಲ್ಲೆಡೆ ಹರಡಿಸಿದ್ದಾನೆ. ವಿಶ್ವದಾದ್ಯಂತ ಎಲ್ಲರೂ ಸೂರ್ಯನನ್ನು ಯೋಗದ ಮೂಲಕ ಸ್ವಾಗತಿಸುತ್ತಿದ್ದಾರೆ. ಡೆಹ್ರಾಡೂನ್ನಿಂದ ಡಬ್ಲಿನ್ ವರೆಗೂ, ಶಾಂಘೈಯಿಂದ ಚಿಕಾಗೋವರೆಗೂ ಎಲ್ಲಾ ಕಡೆ ಯೋಗ ಮಾಡುತ್ತಿದ್ದಾರೆ ಎಂದು ತಿಳಿಸಿದರು.
    ವಿಶ್ವಸಂಸ್ಥೆ ಯೋಗಕ್ಕಾಗಿ ಪ್ರಸ್ತಾವನೆ ನೀಡಿದಾಗ ಎಲ್ಲ ದೇಶದವರು ಈ ಯೋಗಕ್ಕಾಗಿ ಸಹಕಾರ ನೀಡಿದ್ದಾರೆ. ಮೊದಲ ಬಾರಿಗೆ ಕಡಿಮೆ ಸಮಯದಲ್ಲಿ ಯೋಗ ಇಷ್ಟರ ಮಟ್ಟಿಗೆ ಖ್ಯಾತಿಗೊಂಡಿದೆ. ವಿಶ್ವದ ಎಲ್ಲ ಜನರು ಹಾಗೂ ಎಲ್ಲ ದೇಶದವರು ಯೋಗವನ್ನು ತಮ್ಮದೇ ಎಂದುಕೊಳ್ಳುತ್ತಿದ್ದಾರೆ. ಯೋಗದ ಕುರಿತು ಏರುತ್ತಿರುವ ಪ್ರಚಾರದಿಂದ ಭಾರತ ಇನ್ನಷ್ಟು ಪ್ರಸಿದ್ಧಿಗೊಂಡಿದೆ. ಸ್ವಸ್ಥ ಹಾಗೂ ಒಳ್ಳೆಯ ಜೀವನಕ್ಕಾಗಿ ಯೋಗ ಸಮಾಜವನ್ನು ಹೆಚ್ಚು ಸಮೃದ್ಧಿಗೊಳಿಸುತ್ತಿದೆ. ಯೋಗ ಎಲ್ಲರನ್ನೂ ಒಗ್ಗೂಡಿಸುತ್ತಿದೆ ಎಂದು ಹೇಳಿದರು.
    ಪ್ರಧಾನಿ ಮೋದಿ ಪಾಲ್ಗೊಂಡಿರುವ ಡೆಹ್ರಾಡೂನ್ ಯೋಗ ಕಾರ್ಯಕ್ರಮದಲ್ಲಿ ಸುಮಾರು 50 ಸಾವಿರಕ್ಕೂ ಅಧಿಕ ಮಂದಿ ಯೋಗ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ, ಸಕರ್ಾರ ಸುಮಾರು 50 ಸಾವಿರ ಯೋಗ ಮ್ಯಾಟ್ ಗಳನ್ನು ಪೂರೈಕೆ ಮಾಡಿದ್ದು, ಸುಮಾರು 5 ಸಾವಿರಕ್ಕೂ ಅಧಿಕ ಜನರ ಸ್ವಯಂ ಪ್ರೇರಿತರಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries