HEALTH TIPS

No title

                 ದಿಢೀರ್ ಭೇಟಿಯಲ್ಲಿ ಕಂಡಿತು ಭಯಾನಕ- ಆಸ್ಪತ್ರೆಯ ಮೆಟ್ಟಲಲ್ಲೇ ರೋಗಸೃಷ್ಟಿ-ಅವ್ಯವಸ್ಥೆಯ ಆಗರ ಬದಿಯಡ್ಕ ಸಮುದಾಯ ಆರೋಗ್ಯ ಕೇಂದ್ರ
ಬದಿಯಡ್ಕ : ಆಧುನಿಕ ವ್ಯವಸ್ಥೆಗಳು ಸೃಷ್ಟಿಸುತ್ತಿರುವ ಸಮಸ್ಯೆಗಳಲ್ಲಿ ಇದೀಗ ವೈದ್ಯಯಕೀಯ ಮಾಲಿನ್ಯವೂ ಸೇರ್ಪಡೆಗ್ಯೆಂಡಿದ್ದು, ಇತರ ಮಾಲಿನ್ಯಗಳಿಗಿಂತ ಹೆಚ್ಚು ಅಪಾಯಕಾರಿಯೂ, ಭೀತಿದಾಯಕವೂ ಆಗಿ ಜನಸಾಮಾನ್ಯನ್ನು ಗೊಂದಲಕ್ಕೆ ಸಿಲುಕಿಸಿದೆ. ಬದಿಯಡ್ಕ ಸಮುದಾಯ ಆರೋಗ್ಯ ಕೇಂದ್ರ ಸಹಿತ ಜಿಲ್ಲೆಯ ಹಲವು ಆರೋಗ್ಯ ಕೇಂದ್ರಗಳಲ್ಲಿ ವೈದ್ಯಕೀಯ ಮಾಲಿನ್ಯಗಳನ್ನು ಸಮರ್ಪಕವಾಗಿ ನಿಮರ್ೂಲನೆಗೊಳಿಸುವಲ್ಲಿ ಸಂಬಂಧಪಟ್ಟವರು ತೊರಿಸುತ್ತಿರುವ ನಿರ್ಲಕ್ಷ್ಯ ಮತ್ತು ಅನುಸರಿಒಸುತ್ತಿರುವ ಅಪ್ರಬುದ್ದ ಕ್ರಮಗಳು ಮುಂದೆ ಎಂಡೋಸಲ್ಫಾನ್ ದುರಂತದಂತಹ ಜೀವಹಾನಿಯ ಸವಾಲುಗಳಿಗೆ ಕಾರಣವಾಗುವ ಭೀತಿ ಎದುರಾಗಿದೆ.
   ಬದಿಯಡ್ಕದಲ್ಲಿ ಏನಾಯ್ತು?
     ಬದಿಯಡ್ಕ ಸಮುದಾಯ ಆರೋಗ್ಯ ಕೇಂದ್ರದ ಪರಿಸರವು ಸೊಳ್ಳೆ ಉತ್ಪಾದನಾ ಕೇಂದ್ರವಾಗಿ ಮಾರ್ಪಟ್ಟಿದೆ ಎಂದು ನಾಗರಿಕರ ದೂರಿಗೆ ಸ್ಪಂಧಿಸಿದ ಕಾಸರಗೋಡು ಜಿಲ್ಲಾ ಪಮಚಾಯತು ಸದಸ್ಯ ವಕೀಲ ಕೆ.ಶ್ರೀಕಾಂತ್ ಸೋಮವಾ ಬದಿಯಡ್ಕ ಸಮುದಾಯ ಆರೋಗ್ಯ ಕೇಂರಕ್ಕೆ ದಿಡೀರ್ ಭೇಟಿ ನೀಡಿ ವಸ್ತುಸ್ಥಿತಿಯನ್ನು ಕಣ್ಣಾರೆ ಕಂಡು ಹೌಹಾರಿದ ಪ್ರಸಂಗ ನಡೆದಿದೆ.
   ಉಪಯೋಗ್ಯಶೂನ್ಯ ಔಷಧಿಗಳು, ಸಿರಿಂಜ್ಗಳು ಹಾಗೂ ಇನ್ನಿತರ ವಸ್ತುಗಳು ಇಲ್ಲಿನ ಹಳೆಯ ಬಾವಿಯೊಳಗೆ ಎಸೆದಿರುವುದು,  ಪ್ಲಾಸ್ಟಿಕ್ ಹಾಗೂ ಇನ್ನಿತರ ವಸ್ತುಗಳನ್ನು ಪರಿಸರದಲ್ಲಿಯೇ ಉರಿಸುತ್ತಿರುವುದೂ ಕಂಡುಬಂದಿದೆ. ವಿವಿಧೆಡೆ ಪ್ಲಾಸ್ಟಿಕ್ ಬಾಟಲಿಗಳು, ಹಾಗೂ ಉಪಯೋಗಶೂನ್ಯ ವಸ್ತುಗಳನ್ನು ಆಸ್ಪತ್ರೆಯ ಪರಿಸರದಲ್ಲಿ ಹೊಂಡ ತೋಡಿ ಮಣ್ಣು ಹಾಕಿ ಮುಚ್ಚಲಾಗುತ್ತಿದೆ. ಇದೇ ವೇಳೆ ಹೆಚ್ಚು ಆಳವಿಲ್ಲದ ಹೊಂಡವನ್ನು ತೋಡಿ ಉಪಯೋಗಶೂನ್ಯ ವೈದ್ಯಕೀಯ ವಸ್ತುಗಳನ್ನು ಮುಚ್ಚುವ ವ್ಯವಸ್ಥೆಗಳೂ ನಡೆದಿದಿರುವುದು ಗಮನಕ್ಕೆ ಬಂದಿದೆ.
   ಜನಸಾಮಾನ್ಯರ ಆರೋಗ್ಯ ಪರಿಪಾಲನೆಯಲ್ಲಿ ಪ್ರಧಾನ ಪಾತ್ವಹಿಸುವ ಆರೋಗ್ಯ ಕೇಂದ್ರಗಳ ಅಂತರಾಳಗಳೇ ಹಾಳುಕೊಂಪೆಯಾಗಿರುವಾಗ ಜನಸಾಮಾನ್ಯರ ಪರಿಸ್ಥಿತಿ ಚಿಂತಾಜನಕವೆಂಬುದನ್ನು ಅರಿತು ಕೆ.ಶ್ರೀಕಾಂತ್ ಅಧಿಕೃತರ ಅನಾಸ್ಥೆಯ ಬಗ್ಗೆ ಹತಾಶೆ ವ್ಯಕ್ತಪಡಿಸಿದರು.
  ಕಾಸಗೋಡು ಬ್ಲಾ.ಪಂ. ನ ಅಧೀನದ ಬದಿಯಡ್ಕದ ಸಮುದಾಯ ಆರೋಗ್ಯ ಕೇಂದ್ರದ ಸುವ್ಯವಸ್ಥೆಯ ಪೂರ್ಣ ಹೊಣೆ ಬ್ಲಾ.ಪಂ. ನದಾಗಿದ್ದು, ವೈದ್ಯಕೀಯ ಮಾಲಿನ್ಯ ನಿಮರ್ೂಲನೆಯ ಜವಾಬ್ದಾರಿಯನ್ನು ಗುತ್ತಿಗೆದಾರನೋರ್ವನಿಗೆ ವಹಿಸುವ ಮೂಲಕ ಕೈತೊಳೆದುಕೊಂಡ ಬಳಿಕ ಮುಂದಿನ ಕಾರ್ಯಕ್ಷಮತೆಯ ಬಗ್ಗೆ ಗಮನ ಹರಿಸದಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಮಾಲಿನ್ಯ ವ್ಯವಸ್ಥೆಯ ನಿರ್ವಹಣೆಯ ಹೊಣೆಹೊತ್ತ ಗುತ್ತಿಗೆದಾರರು ಜವಾಬ್ದಾರಿಯನ್ನು ಮೆರೆತು ಅವ್ಯವಸ್ಥಿತ ಕ್ರಮದಲ್ಲಿ ಮಾಲಿನ್ಯಗಳನ್ನು ಎಸೆದಿರುವುದು ಇದೀಗ ವ್ಯಾಪಕ ಜನಾಕ್ರೋಶಕ್ಕೆ ಕಾರಣವಾಗಿದೆ.
   ಸೋಮವಾರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿನೀಡಿದ ತಂಡದಲ್ಲಿ ಜಿ.ಪಂ.ಸದಸ್ಯ ವಕೀಲ ಕೆ.ಶ್ರೀಕಾಂತ್ ರವರೊಂದಿಗೆ ಬ್ಲಾ.ಪಂ.ಸದಸ್ಯ ಅವಿನಾಶ ರೈ, ಬಿಜೆಪಿ ಮಂಡಲ ಕಾರ್ಯದಶರ್ಿ ಹರೀಶ್ ನಾರಂಪಾಡಿ, ಗ್ರಾ.ಪಂ.ಸದಸ್ಯ ಬಾಲಕೃಷ್ಣ ಶೆಟ್ಟಿ ಕಡಾರು, ವಿಶ್ವನಾಥ ಪ್ರಭು ಕರಿಂಬಿಲ, ಪ್ರೇಮಾ ಕುಮಾರಿ, ಪುಷ್ಪಾ ಭಾಸ್ಕರನ್, ಶಂಕರ. ಡಿ ಮೊದಲಾದವರು ಜೊತೆಗಿದ್ದರು.     
   ಏನಂತಾರೆ:
  ಗುತ್ತಿಗೆದಾರರು ಯಾವ ರೀತಿ ವೈದ್ಯಕೀಯ ಮಾಲಿನ್ಯಗಳನ್ನು ನಿರ್ವಹಿಸುತ್ತಿರುವರೆಂಬ ಬಗ್ಗೆ ಗಮನಹರಿಸುವ ಅವಕಾಶ ನಮಗಿಲ್ಲ. ಸರಕಾರ ಒದಗಿಸುವ ಔಷಧಿಗಳಲ್ಲಿ ಕೆಲವು ಕಾಲಾವಧಿ ಮುಗಿದು ಉಪಯೋಗಶೂನ್ಯವಾಗಿರುವ ಔಷಧಿಗಳನ್ನು ಸಂಸ್ಕರಿಸುವ ಅಗತ್ಯ ಇದೆ. ಮಾಲಿನ್ಯ ನಿಯಂತ್ರಣ ಕ್ರಮ ಕೈಗೊಳ್ಳುವ ಕರಾರುದಾರರು ಈ ಬಗ್ಗೆ ಜವಾಬ್ದಾರಾಗಿರುತ್ತಾರೆ.
    ಡಾ.ಸತ್ಯಶಂಕರ ಭಟ್.
    ಆರೋಗ್ಯ ಅಧಿಕಾರಿ, ಬದಿಯಡ್ಕ ಸಮುದಾಯ ಆರೋಗ್ಯ ಕೇಂದ್ರ.

   ಏನಂತಾರೆ:
   ಬದಿಯಡ್ಕ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕಂಡುಬಂದ ಗಂಭೀರ ಪ್ರಮಾಣದ ಕರ್ತವ್ಯಲೋಪಗಳಿಗೆ ಕರಾರುದಾರರು ಹಾಗೂ ಕಾಸರಗೋಡು ಬ್ಲಾ.ಪಂ. ಜವಾಬ್ದಾರರಾಗಿದ್ದು, ಜನಸಾಮಾನ್ಯರ ಜೀವದೊಂದಿಗೆ ಚೆಲ್ಲಾಟವಾಡುತ್ತಿರುವುದು ಖಂಡನೀಯ. ಈ ಬಗ್ಗೆ ಸಮಗ್ರ ತನಿಖೆಯ ಅಗತ್ಯವಿದೆ. ಎಲ್ಲಾ ಗ್ರಾ.ಪಂ., ಬ್ಲಾ.ಪಂ. ಸಹಿತ ವಿವಿಧ ವಿಭಾಗಗಳ ಆರೋಗ್ಯ ಕೇಂದ್ರಗಳ ಮಾಲಿನ್ಯ ನಿಯಂತ್ರಣಗಳಿಗೆ ಜವಾಬ್ದಾರಿಯುತ ಕ್ರಮಗಳನ್ನು ಕೈಗೊಳ್ಳಬೇಕು.
       ನ್ಯಾಯವಾದಿ ಕೆ.ಶ್ರೀಕಾಂತ್.
      ಕಾಸರಗೋಡು ಜಿ.ಪಂ.ಸದಸ್ಯ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries