ಸಮಾಜದ ಶ್ರೇಯೋಭಿವೃದ್ಧಿಗಾಗಿ ಮಾತೆಯರು ಜಾಗೃತರಾಗಬೇಕಾಗಿದೆ: ಮಾಧವ ನೆಟ್ಟಣಿಗೆ
ಬದಿಯಡ್ಕ: ಕರ್ಮ, ಭಕ್ತಿ, ಹಾಗೂ ಜ್ಞಾನ ಯೋಗದಿಂದ ಜೀವನದಲ್ಲಿ ಧರ್ಮ, ಅರ್ಥ, ಕಾಮ, ಮೋಕ್ಷಗಳನ್ನು ಪಡೆಯಲು ಸಾಧ್ಯ. ಸನಾತನ ಧರ್ಮದಲ್ಲಿ ಇದು ಪ್ರತಿಪಾದಿತವಾಗಿದೆ ಎಂದು ಖ್ಯಾತ ಯಕ್ಷಗಾನ ಕಲಾವಿದ, ನಾಟ್ಯಗುರು ಮಾಧವ ನೆಟ್ಟಣಿಗೆ ಹೇಳಿದರು.
ಅವರು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾಸರಗೋಡು ಒಕ್ಕೂಟ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಕಿನ್ನಿಂಗಾರು, ಬೆಳ್ಳೂರು, ಕಾಯರ್ ಪದವು, ಐತ್ತನಡ್ಕ, ಕಾರಡ್ಕ ವಲಯಗಳ ಸಂಯುಕ್ತ ಆಶ್ರಯದಲ್ಲಿ ನೆಟ್ಟಣಿಗೆ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿಇತ್ತೀಚೆಗೆ ನಡೆದ ಸಾಮೂಹಿಕ ಸತ್ಯನಾರಾಯಣ ಪೂಜೆಯ ಸಭಾ ಕಾರ್ಯಕ್ರಮದಲ್ಲಿ ಧಾಮರ್ಿಕ ಉಪನ್ಯಾಸ ನೀಡಿ ಮಾತನಾಡಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ಯೋಜನಾಧಿಕಾರಿ ಚೇತನ ಎಂ. ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿ, ಜಗತ್ತಿಗೆ ಮಾತೃತ್ವದ ಕಲ್ಪನೆಯನ್ನು, ಮಹತ್ವವನ್ನು ತೋರಿದ ನಮ್ಮ ಭಾರತ ದೇಶದಲ್ಲಿ ಮಾತೆಯರು ಜಾಗೃತರಾಗಬೇಕು. ಸ್ತ್ರೀ ಶಿಕ್ಷಣ ಪಡೆದರೆ ಮುಂದೆ ಇಡೀ ಕುಟುಂಬವೇ ವಿದ್ಯೆಯನ್ನು ಗಳಿಸುತ್ತದೆ. ಜೀವನದ ಗುರಿಯನ್ನು ತೋರುವಲ್ಲಿ ಅವಳ ಪಾತ್ರ ಮಹತ್ತರವಾದುದು ಎಂದರು. ಸಮಾಜದ ತೊಡಕನ್ನು ಹೋಗಲಾಡಿಸಿ ಸಮಾಜದ ಉನ್ನತಿಗೆ ಕಾರಣಳಾಗುವ ಸಾಮಥ್ರ್ಯ ಮಹಿಳೆಗಿದೆ ಎಂದವರು ಅಭಿಪ್ರಾಯ ಪಟ್ಟರು.
ನೆಟ್ಟಣಿಗೆ ಕ್ಷೇತ್ರದ ಆಡಳಿತ ಮೊಕ್ತೇಸರ ದಾಮೋದರ ಮಣಿಯಾಣಿ ನಾಕೂರು ಅಧ್ಯಕ್ಷತೆ ವಹಿಸಿದ್ದರು. ಡಾ.ಮೋಹನ್ ದಾಸ್,ಬೆಳ್ಳೂರು ಗ್ರಾಮ ಪಂಚಾಯತಿ ಸದಸ್ಯ ರಾಧಾಕೃಷ್ಣ, ಕೃಷ್ಣ ಮಣಿಯಾಣಿ ಕಿನ್ನಿಂಗಾರು ಮುಂತಾದವರು ಶುಭಾಶಂಸನೆಗೈದರು.ಸೇವಾಪ್ರತಿನಿಧಿಗಳಾದ ಸುರೇಖಾ,ಪುಷ್ಪಾಲತ,ಸುಮತಿ ಕಲ್ಪಣೆ ಉಪಸ್ಥಿತರಿದ್ದರು. ಮೇಲ್ವಿಚಾರಕ ಉದಯ ವರದಿ ವಾಚಿಸಿದರು. ಸಂಘಗಳ ಪದಾಧಿಕಾರಿಗಳು ಹಾಗೂ ಸದಸ್ಯೆಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಭವ್ಯ ಧನಂಜಯ ಸ್ವಾಗತಿಸಿ, ಶಶಿಕಲಾ ವಂದಿಸಿದರು. ನಿಶಾ ರತ್ನಾಕರ ನೆಟ್ಟಣಿಗೆ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಪೂಜಾ ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು.