HEALTH TIPS

No title

                  ಮಲೆಯಾಳ ಮಾತೃಭಾಷಾ ಸಮಿತಿಯಿಂದ ಪ್ರತಿಭಟನಾ ಮೆರವಣಿಗೆ
     ಉಪ್ಪಳ: ಗಡಿನಾಡಿನ ಶಾಲೆಗಳಲ್ಲಿ ಮಲಯಾಳಂ ಭಾಷಾ ಪಠ್ಯಕ್ರಮದ ಅವಶ್ಯಕತೆಯಿದೆ. ಕಾಸರಗೋಡಿನ ಸಪ್ತಭಾಷಾ ಸಂಗಮ ಭೂಮಿ ಹಲವು ಭಾಷಾ ವೈವಿಧ್ಯತೆಯನ್ನು ಹೊಂದಿರುವ ನೆಲ. ಶಾಲೆಗಳಲ್ಲಿ ಎಲ್ಲ ಭಾಷೆಗಳನ್ನು ಪಠ್ಯಕ್ರಮದ ಭಾಗವಾಗಿ ಕಲಿಸಲಾಗುತ್ತಿದೆ, ಆದರೆ ಮಲಯಾಳಂ ಭಾಷೆ ಪಠ್ಯಕ್ರಮದಿಂದ ಹೊರತಾಗಿದೆ. ಈ ನೀತಿಯಿಂದ ವಿದ್ಯಾಥರ್ಿಗಳು ಅವಕಾಶ ವಂಚಿತರಾಗುತ್ತಿದ್ದಾರೆ. ಗಡಿನಾಡಿನ ಶಾಲೆಗಳಲ್ಲಿ ಮಲಯಾಳಂ ಭಾಷಾ ಪಠ್ಯಕ್ರಮವನ್ನು ಅಳವಡಿಸಿ ಕಲಿಸಬೇಕು ಎಂಬ ಬೇಡಿಕೆಯನ್ನು ಮುಂದಿರಿಸಿ ಮಲಯಾಳಂ ಮಾತೃಭಾಷಾ ಸಮಿತಿ ನೇತೃತ್ವದಲ್ಲಿ ಮಂಗಳವಾರ ಪೈವಳಿಕೆ ಸಮೀಪದ ಕಾಯರ್ಕಟ್ಟೆ ಶಾಲೆಗೆ ಮೆರವಣಿಗೆ ನಡೆಯಿತು.
    ಕೇರಳ ರಾಜ್ಯದ ಭಾಗವಾಗಿರುವ ಕಾಸರಗೋಡು ಜಿಲ್ಲೆಯಲ್ಲಿ ಮಲಯಾಳಂ ಭಾಷೆಯನ್ನು ಕಲಿಸಲಾಗುತ್ತಿಲ್ಲ. ಜಾತಿ, ಮತ, ಧರ್ಮದಿಂದ ಹೊರತಾದ ಎಲ್ಲರನ್ನೂ ಬೆಸೆಯುವ ಭಾಷೆಯ ಅವಗಣನೆ ಸರಿಯಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಅಜೀಜ್ ಕಳಾಯಿ ಹೇಳಿದರು. ಜಾಥಾವನ್ನು ಉದ್ಘಾಟಿಸಿ ಮಾತನಾಡಿದ ಅವರು ಜಿಲ್ಲೆಯ ಉತ್ತರ ಭಾಗದ ಹಲವು ಶಾಲೆಗಳಲ್ಲಿ ಮಲಯಾಳಂ ಭಾಷಾ ಪಠ್ಯಕ್ರಮ ಇಲ್ಲದ ಕಾರಣ ಸ್ಪಧರ್ಾತ್ಮಕ ಪರೀಕ್ಷೆಗಳಲ್ಲಿ ಇಲ್ಲಿನ ವಿದ್ಯಾಥರ್ಿಗಳು ಭಾಷಾ ಜ್ಞಾನವಿಲ್ಲದೆ ಅವಕಾಶ ವಂಚಿತರಾಗುತ್ತಿದ್ದಾರೆ ಎಂದರು. ಇಲ್ಲಿನ ಭಾವಿ ಪೀಳಿಗೆಗೆ ಮಲಯಾಳಂ ಭಾಷೆಯ ಅಗತ್ಯತೆ ಇದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಭಾಷಾ ಸಮಿತಿಯು ಯಾವುದೇ ರಾಜಕೀಯ ದುರುದ್ದೇಶವಿಲ್ಲದೆ ನಾಗರಿಕ ಹಕ್ಕಿಗಾಗಿ ಭಾಷಾ ಪಠ್ಯಕ್ರಮದ ಬೇಡಿಕೆಯನ್ನು ಮುಂದಿಡುತ್ತಿದೆ ಎಂದು ಭಾಷಾ ಸಮಿತಿಯ ಸದಸ್ಯ ನಾಸಿರ್ ಕೋರಿಕ್ಕಾರ್ ಹೇಳಿದ್ದಾರೆ.
    ಜಿಲ್ಲೆಯ ಉತ್ತರ ಭಾಗದಲ್ಲಿನ ಹಲವು ಶಾಲೆಗಳು ಕನ್ನಡ ಮಾಧ್ಯಮ ಶಾಲೆಗಳಾಗಿವೆ. ನಾವು ಭಾಷಾ ದ್ವೇಷಿಗಳಲ್ಲ ಆದರೆ ಉತ್ತಮ ಅವಕಾಶಗಳಿಗಾಗಿ ಇಲ್ಲಿನ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಲಯಾಳಂ ಭಾಷೆಯನ್ನು ಪಠ್ಯಕ್ರಮದ ಭಾಗವಾಗಿಸಬೇಕಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಜೀಜ್ ಮರಿಕೆ ಜಾಥಾ ಅಧ್ಯಕ್ಷತೆ ವಹಿಸಿದ್ದರು. ಕುಂಜಾಲಿಮ್ಮ ಇದ್ದರು. ಜಾಥಾದಲ್ಲಿ ಹಲವು ಮಂದಿ ಕಾರ್ಯಕರ್ತರು ಭಾಗವಹಿಸಿದ್ದರು. ಶಾಲಾ ಮುಖ್ಯೋಪಾಧ್ಯಾಯರಿಗೆ ಮಾತೃಭಾಷಾ ಮಲಯಾಳಂ ಸಮಿತಿ ಪೈವಳಿಕೆ ಇದರ ವತಿಯಿಂದ ಮಲಯಾಳಂ ಪಠ್ಯಕ್ರಮದ ಬೇಡಿಕೆಯಿರುವ ಮನವಿ ಪತ್ರವನ್ನು ನೀಡಲಾಯಿತು.
    

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries