ಸಚಿವರಿಂದ ಬದಿಯಡ್ಕದಲ್ಲಿ ಅಬಕಾರಿ ಕಚೇರಿಗೆ ಶಂಕುಸ್ಥಾಪನೆ
ಬದಿಯಡ್ಕ: ಶಾಲಾ ಕಾಲೇಜುಗಳನ್ನು ಕೇಂದ್ರವಾಗಿರಿಸಿ ಅವುಗಳ ಆಸುಪಾಸಿನಲ್ಲಿ ಅಮಲು ಪದಾರ್ಥಗಳ ಸಹಿತ ಮದ್ಯ ಮಾರಾಟ ಮಾಡುವುದನ್ನು ನಿಯಂತ್ರಿಸಲು ಸಾರ್ವಜನಿಕರು ಅಬಕಾರಿ ಇಲಾಖೆಯೊಂದಿಗೆ ಕೈಜೋಡಿಸಬೇಕು. ಇಲ್ಲದಿದ್ದರೆ ಮುಂದಿನ ಜನಾಂಗ ವ್ಯಾಪಕ ಅಸಂತುಷ್ಠಿಗೆ ಒಳಗಾಗುವ ಭೀತಿ ಎದುರಿಸಲಿದೆ ಎಂದು ರಾಜ್ಯ ಅಬಕಾರಿ ಸಚಿವ ಟಿ.ಪಿ.ರಾಮಕೃಷ್ಣನ್ ತಿಳಿಸಿದರು.
ಅವರು ಬದಿಯಡ್ಕ ವಿಭಾಗೀಯ ಅಬಕಾರಿ ನೂತನ ಕಾಯರ್ಾಲಯಕ್ಕೆ ವಿದ್ಯುತ್ ವಿಭಾಗೀಯ ಕಾಯರ್ಾಲಯ ಸಮೀಪ ಶನಿವಾರ ಶಂಕುಸ್ಥಾಪನೆ ನಿರ್ವಹಿಸಿ ಮಾತನಾಡಿದರು.
ವಿದ್ಯಾಥರ್ಿಗಳನ್ನು ಅಮಲು ಪದಾರ್ಥಗಳ ದಾಸರಾಗಿಸಿ ಅದರ ಮಾರಾಟ ಜಾಲವನ್ನು ವಿಸ್ತರಿಸುವ ದೊಡ್ಡ ಜಾಲ ಕಾಯರ್ಾಚರಿಸುತ್ತಿರುವುದು ಆತಂಕಾರಿಯಾಗಿದೆ. ಮದ್ಯ ಸಹಿತವಾದ ಅಮಲು ಪದಾರ್ಥಗಳು ಇಂದಿನ ಸಮಾಜದ ಅತಿ ದೊಡ್ಡ ಆತಂಕವಾಗಿ ನಮ್ಮ ಮುಂದಿರುವಾಗ ಪ್ರಜ್ಞಾವಂತ ನಾಗರಿಕರು ಸರಕಾರದೊಂದಿಗೆ ಕೈಜೋಡಿಸಿ ಅವುಗಳನ್ನು ಮಟ್ಟ ಹಾಕಲು ಮುನ್ನುಗ್ಗಬೇಕು ಎಂದು ಸಚಿವರು ತಿಳಿಸಿದರು.ನೂತನ ಕಾಯರ್ಾಲಯ ಕಟ್ಟಡ ಮುಂದಿನ 10 ತಿಂಗಳುಗಳಲ್ಲಿ ಪೂತರ್ಿಯಾಗುವುದು ಎಂದು ಸಚಿವರು ಈ ಸಂದರ್ಭ ತಿಳಿಸಿದರು.
ಶಾಸಕ ಎನ್.ಎ.ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದ್ದರು. ಬದಿಯಡ್ಕ ಗ್ರಾ.ಪಂ. ಅಧ್ಯಕ್ಷ ಕೆ.ಎನ್ ಕೃಷ್ಣ ಭಟ್, ಬ್ಲಾ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ಎ.ಎಸ್.ಅಹಮ್ಮದ್, ಬದಿಯಡ್ಕ ಗ್ರಾ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ಅನ್ವರ್ ಓಝೋನ್, ಗ್ರಾ.ಪಂ. ಸದಸ್ಯ ಬಿ.ಶಾಂತಾ ಸಹಿತ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಉಪಸ್ಥಿತರಿದ್ದರು.ಕೇರಳ ಉತ್ತರ ವಲಯ ಅಬಕಾರಿ ಇಲಾಖೆಯ ಸಹ ನಿದರ್ೇಶಕ ಡಿ.ಸಂತೋಷ್ ಸ್ವಾಗತಿಸಿ, ಕಾಸರಗೋಡು ವಲಯ ಅಬಕಾರಿ ನಿದರ್ೇಶಕ ವಿ.ಬಾಲಕೃಷ್ಣನ್ ವಂದಿಸಿದರು.