HEALTH TIPS

No title

                  ಇಂದು ಕವಿ ಕಯ್ಯಾರರ ಜನ್ಮದಿನ- ಕಯ್ಯಾರ ಸಾಂಸ್ಕೃತಿ ಭವನ ನಿಮರ್ಾಣಕ್ಕೆ ಭೂಮಿ ಹಸ್ತಾಂತರ-ಪರಿಶೀಲನೆ-ಶೀಘ್ರ ಕನಸು ನನಸಾಗುವುದೇ?         
   ಬದಿಯಡ್ಕ:  ಮಹಾತ್ಮಾ ಗಾಂಧಿ ಅವರ ರಾಮರಾಜ್ಯದ ಕನಸಿನೊಂದಿಗೆ ನಗರ ಬದುಕಿನಿಂದ ವಿಮುಖರಾಗಿ ಹಳ್ಳಿಗೆ ಬಂದು ಕೃಷಿ, ಅಧ್ಯಾಪನ, ಗಡಿನಾಡ ಹೋರಾಟ, ಸಾಹಿತ್ಯ ಕ್ಷೇತ್ರಗಳ ಮಹಾನ್ ಕೊಡುಗೆಗಳ ಮೂಲಕ ಅಜರಾಮರರಾಗಿರುವ, ಶತಾಯುಷಿಯಾಗಿ ಬಾಳಿಬದುಕಿದ ನಾಡೋಜ ಕಯ್ಯಾರ ಕಿಞಿಣ್ಣ ರೈಗಳ ಜನ್ಮದಿನಾಚರಣೆ ಜೂ.8. ಬಹುಷಃ ಅವರಿಂದು ಬದುಕಿದ್ದರೆ 104 ರ ಜನ್ಮ ದಿನದ ಸಂಭ್ರಮ ಆಚರಿಸುತ್ತಿದ್ದರು. ಡಾ. ಕಯ್ಯಾರ ಅವರ ಗ್ರಾಮಸ್ವರಾಜ್ಯ ಕಲ್ಪನೆ, ಕೃಷಿಯೊಡನೆ ಬದುಕು ಕಟ್ಟಿಕೊಂಡ ಅವರ ಬದುಕು ಜೊತೆಗೆ ಗಡಿ ಹೋರಾಟ, ಸಾಹಿತ್ಯ ಕ್ಷೇತ್ರದ ಮಹತ್ವದ ಕೊಡುಗೆ ಕಾಸರಗೋಡಿನ ಹೆಮ್ಮೆಯೆನಿಸಿ ಸದಾ ಆದರ್ಶರಾಗಿ ಇಲ್ಲಿಯ ಕನ್ನಡಿಗರ ಮನಸ್ಸಲ್ಲಿ ಅಚ್ಚಳಿಯದ ಪ್ರೇರಣೆ ನೀಡಿದ್ದಾರೆ.
  ಹೆತ್ತ ತಾಯಿ ತುಳುವಾಗಿದ್ದರೆ, ಸಾಕಿ ಬೆಳೆಸಿದ ತಾಯಿ ಕನ್ನಡವಾಗಿದೆ ಎಂಬುದು ಡಾ. ಕಯ್ಯಾರ ಅವರ ಅಂತರಾಳದ ಮಾತು ಮಾಮರ್ಿಕವಾಗಿತ್ತು. ಗಡಿನಾಡು ಕಾಸರಗೋಡು ಕನರ್ಾಟಕದೊಡನೆ ವಿಲೀನಗೊಳ್ಳದೆ ಅದೇ ನೋವಲ್ಲಿ  ಜೀವಮಾನದ ಕನಸು ಈಡೇರದೆ ಕೊನೆಯುಸಿರೆಳೆದ ಕಯ್ಯಾರರ ಆತ್ಮಕ್ಕೆ ಶಾಂತಿಕೋರುವ ಕೆಲಸವನ್ನು ಕೇರಳ, ಕನರ್ಾಟಕ ಸಕರ್ಾರಗಳೆರಡೂ ಸೇರಿ ಮಾಡಬೇಕಾದ ಅನಿವಾರ್ಯತೆಯಿದೆ. ಡಾ. ಕಯ್ಯಾರ ಕಿಞಣ್ಣ ರೈ ಅವರ ಹೆಸರಲ್ಲಿ ಸಂಶೋಧನಾ ಕೇಂದ್ರ ಆರಂಭಿಸುವುದರ ಜತೆಗೆ ಅವರ ಕೃತಿಗಳ ಸಂರಕ್ಷಣೆ, ಕವಿ ನಿವಾಸ ಕವಿತಾ ಕುಟೀರವನ್ನು ಸಾಹಿತ್ಯಪ್ರೇಮಿಗಳ ಪ್ರವಾಸಿ ಕೇಂದ್ರವನ್ನಾಗಿ ಬೆಳೆಸಬೇಕೆಂಬುದು ಸಮಸ್ತ ಕನ್ನಡಿಗರ ಆಶಯವಾಗಿದೆ. ಇದಕ್ಕೆ ಕನರ್ಾಟಕ ಸಕರ್ಾರ ಸಕಾಲಿಕವಾಗಿ ಸ್ಪಂದಿಸಬೇಕಾಗಿದೆ.
   ಭರವಸೆಯ ಮೊಳಕೆ:
   ಈ ಮಧ್ಯೆ ಕಳೆದ ವರ್ಷ ಕಾಸರಗೋಡು ಜಿಲ್ಲಾ ಪಂಚಾಯತು ನಾಡೋಜ ಡಾ.ಕಯ್ಯಾರ ಕಿಞಣ್ಣ ರೈ ಅವರ ಹೆಸರಲ್ಲಿ ಸಾಂಸ್ಕೃತಿಕ ಕೇಂದ್ರವನ್ನು ಸ್ಥಾಪಿಸಲು ಉದ್ದೇಶಿಸಿರುವುದಾಗಿ ಸ್ವತಃ ಮುಂದೆ ಬಂದಿರುವುದು ಆಶಾದಾಯಕವಾಗಿದೆ. ಇದಕ್ಕಾಗಿ ಬದಿಯಡ್ಕದಲ್ಲಿ ಸ್ಥಳ ಒದಗಿಸಿಕೊಡಲು ಡಾ. ಕಯ್ಯಾರರ ಕುಟುಂಬಸ್ಥರೂ ಮುಂದೆ ಬಂದು ಈಗಾಗಲೇ 30 ಸೆಂಟ್ ಭೂಮಿಯನ್ನು ಜಿಲ್ಲಾ ಪಂಚಾಯತಿಗೆ ಹಸ್ತಾಂತರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯತು ಅಧ್ಯಕ್ಷ ಎಜಿಸಿ ಬಶೀರ್ ಅಧ್ಯಕ್ಷರಾಗಿರುವ, ಜಿಲಾ ಪಂಚಾಯತು ಸದಸ್ಯ ನ್ಯಾಯವಾದಿ ಕೆ.ಶ್ರೀಕಾಂತ್, ಕಯ್ಯಾರರ ಪುತ್ರ ಡಾ.ಪ್ರಸನ್ನ ರೈ ಸಹಿತ ಹಲವರು ಸದಸ್ಯರಾಗಿರುವ ತಾತ್ಕಾಲಿಕ ಸಮಿತಿಯನ್ನೂ ರಚಿಸಲಾಗಿದೆ.
    ಜಿಲ್ಲಾ ಪಂಚಾಯತು ಸದಸ್ಯ ನ್ಯಾಯವಾದಿ ಕೆ.ಶ್ರೀಕಾಂತ್ ಕಯ್ಯಾರರ ಕುಟುಂಬದವರು ನೀಡಿದ ಉಚಿತ ನಿವೇಶನ ಪರಿಸರಕ್ಕೆ ಕಳೆದ ವಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಯೋಜನಾನುಷ್ಠಾನದ ಬಗ್ಗೆ ಪರಿಶೀಲನೆ ನಡೆಸಿದರು.
   ಕಯ್ಯಾರರ ನೆನಪಿಗೆ ಅಗತ್ಯ:
   ಕಯ್ಯಾರರ ಹೆಸರಲ್ಲಿ ಕವಿ ನಿವಾಸ ಕವಿತಾ ಕುಟೀರದ ಸನಿಹದಲ್ಲೇ ನಿಮರ್ಾಣವಾಗಲಿರುವ ಸಾಂಸ್ಕೃತಿಕ ಕೇಂದ್ರ ಉದ್ದೇಶಿತ ಕಾಲಾವಧಿಯಲ್ಲಿ ಸಮರ್ಪಕವಾಗಿ ನಿಮರ್ಾಣಗೊಂಡರೆ ಮುಂದಿನ ತಲೆಮಾರಿಗೆ ಬಹುದೊಡ್ಡ ಕೊಡುಗೆ ನೀಡಿದ ಸಾರ್ಥಕತೆ ನಿಮರ್ಿಸಿದಂತಾಗಲಿದೆ. ಕಯ್ಯಾರರ ಸಂಗ್ರಹದ 20 ಸಾವಿರಕ್ಕಿಂತಲೂ ಮಿಕ್ಕಿದ ಕನ್ನಡ, ಸಂಸ್ಕೃತ ಸಹಿತ ವಿವಿಧ ಭಾಷೆಗಳ ಪುಸ್ತಕಗಳು, ಕಯ್ಯಾರರು ಬಳಸುತ್ತಿದ್ದ ಊರುಗೋಲು ಸಹಿತ ವಿವಿಧ ಸಾಮಗ್ರಿಗಳು, ನೂರಾರು ಮಾನ-ಸನ್ಮಾನಗಳು ಇದೀಗ ನಶಿಸುವ ಭೀತಿ ಎದುರಿಸುತ್ತಿದ್ದ, ಸಾಂಸ್ಕೃತಿಕ ಕೇಂದ್ರ ನಿಮರ್ಾಣವಾದಲ್ಲಿ ಅಲ್ಲಿ ಇವಕ್ಕೆಲ್ಲ ಸಂರಕ್ಷಣೆ ದೊರಕಲಿದೆ.   
       ಎರಡೂ ರಾಜ್ಯಗಳ ಸಕರ್ಾರ ಕೈಜೋಡಿಸಲಿ:
   ಕಾಸರಗೋಡು ಅಭಿವೃದ್ಧಿಗಾಗಿ ಕಳೆದ ಐಕ್ಯರಂಗ ಸಕರ್ಾರ ಆರಂಭಿಸಿರುವ ಡಾ. ಪ್ರಭಾಕರನ್ ಆಯೋಗವನ್ನು ರಾಜಕೀಯ ತಾರತಮ್ಯ ತೋರದೆ ಪಿಣರಾಯಿ ವಿಜಯನ್ ನೇತೃತ್ವದ ಎಡರಂಗ ಸಕರ್ಾರ ಮುಂದುವರಿಸಿಕೊಂಡು ಹೋಗುವುದೆಂಬ ಭರವಸೆ ಇಲ್ಲಿನ ಜನತೆಯಲ್ಲಿದೆ. ಆಯೋಗದ ಅಭಿವೃದ್ಧಿ ಕಾರ್ಯಗಳೊಂದಿಗೆ ಡಾ. ಕಯ್ಯಾರ ಕಿಞಣ್ಣ ರೈ ಸ್ಮಾರಕಕ್ಕೂ ಒಂದಷ್ಟು ಮೊತ್ತ ಮೀಸಲಿರಿಸಿ ಕೇರಳದ ಸಕರ್ಾರ ಕೊಡುಗೆ ನೀಡುವುದೆಂಬ ವಿಶ್ವಾಸ ಗಡಿನಾಡ ಕನ್ನಡಿಗರಲ್ಲಿದೆ. ಕೇರಳ ಮತ್ತು ಕನರ್ಾಟಕ ಸಕರ್ಾರಗಳೆರಡೂ ಜಂಟಿಯಾಗಿ ಕೈಜೋಡಿಸಿದಲ್ಲಿ ಡಾ. ಕಯ್ಯಾರ ಕಿಞಣ್ಣ ರೈ ಅವರ ಸ್ಮಾರಕವನ್ನು ಕುಪ್ಪಳ್ಳಿಯ ಕುವೆಂಪು ಸ್ಮಾರಕದಂತೆ, ಬಹು ವರ್ಷಗಳ ನೆನೆಗುದಿಗೆ ಬಿದ್ದು ಬಳಿಕ ನಿಮರ್ಾಣಗೊಂಡ ಗೋವಿಂದ ಪೈಗಳ ಗಿಳಿವಿಂಡಿನಂತೆ ಕಟ್ಟಿ ಬೆಳೆಸಲು ಸಾಧ್ಯವಿದೆ. ಈಗಾಗಲೇ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಯೋಜನೆ "ಗಿಳಿವಿಂಡು"ತಲೆಯೆತ್ತುವಲ್ಲಿ ಉಂಟಾದ  ವಿಳಂಬ ಧೋರಣೆ ಡಾ. ಕಯ್ಯಾರ ಕಿಞಣ್ಣ ರೈ ಸ್ಮಾರಕ ನಿಮರ್ಾಣದಲ್ಲಿ ಆಗದಂತೆ ನೋಡಿಕೊಳ್ಳಬೇಕಾದ ಅನಿವಾರ್ಯತೆಯಿದೆ.
    ಏನಂತಾರೆ:
  1) ನಾಡೋಜ ಡಾ.ಕಯ್ಯಾರ ಕಿಞಣ್ಣ ರೈ ಅವರು ಅಸದೃಶ್ಯ ವೈಕ್ತಿತ್ವದ ಮಹಾ ಮಾನವತಾವಾದಿಯಾಗಿ, ಬಹುಮುಖ ವ್ಯಾಪ್ತಿಯ ಈ ನಾಡಿನ ಸಾಹಿತಿ. ಅವರ ನಿವಾಸ ಕವಿತಾ ಕುಟೀರ ಈ ನಾಡಿನ ಸಾಂಸ್ಕೃತಿಕ ಹೆಗ್ಗುರುತು. ಅವರ ಅಗಾಧ ಪಾಂಡಿತ್ಯ, ಸಾಹಿತ್ಯ ಚಟುವಟಿಕೆ, ಕನ್ನಡಪರ ಹೋರಾಟ ಇಂದಿಗೂ ಮಾದರಿ. ಕವಿಶೈಲದಂತೆ ಕಯ್ಯಾರರ ಕವಿತಾ ಕುಟೀರವೂ ಬೆಳೆಯಲು ವ್ಯವಸ್ಥೆ ಮಾಡುವುದು ಕನ್ನಡಿಗರೆಲ್ಲರ ಕರ್ತವ್ಯ. ಈ ನಿಟ್ಟಿನಲ್ಲಿ ಕಯ್ಯಾರರ ಕುಟುಂಬ, ಸರಕಾರಿ ವ್ಯವಸ್ಥೆಗಳ ಜೊತೆಗೆ ಸಾರ್ವಜನಿಕರು, ಸಂಸ್ಕೃತಿ ಪ್ರೀಯರು, ನಾಡಿನ ಗಣ್ಯರು ಪರಸ್ಪರ ಕೈಜೋಡಿಸಿ ಮಹತ್ವದ ಯೋಜನೆಗೆ ಕಾಯರ್ೋನ್ಮುಖರಾಗುವ ಅಗತ್ಯವಿದೆ.
        ಡಾ. ಸದಾನಂದ ಪೆರ್ಲ, 
           ಕಾರ್ಯಕ್ರಮ ನಿರ್ವಹಣಾಧಿಕಾರಿ. ಆಕಾಶವಾಣಿ, ಮಂಗಳೂರು
  ಕೋಟ್ಸ್:
  2)  ಡಾ. ಕಯ್ಯಾರ ಕಿಞಣ್ಣ ರೈ ಅವರ ಹೆಸರಲ್ಲಿ ಸ್ಮಾರಕ ಕೇಂದ್ರ  ಸ್ಥಾಪಿಸುವುದಾದಲ್ಲಿ ಎಲ್ಲ ರೀತಿಯ ನೆರವು ಒದಗಿಸಲು ಅವರ ಕುಟುಂಬ ತಯಾರಿದೆ. ಈಗಾಗಲೇ ಕಾಸರಗೋಡು ಜಿಪಂ ಸಾಂಸ್ಕೃತಿಕ ಕೇಂದ್ರ ತೆರೆಯಲು ಮುಂದೆ ಬಂದಿದ್ದು, ಅಧಿಕಾರಿಗಳ ಬೇಡಿಕೆಯನ್ವಯ ಉಚಿತವಾಗಿ 30 ಸೆಂಟ್ ನಿವೇಶನ ಒದಗಿಸಲಾಗಿದೆ. ಎಲ್ಲರೂ ಜೊತೆಯಾಗಿ ಮುನ್ನಡೆದು ಬೃಹತ್ ಯೋಜನೆ ಸಾಕಾರಗೊಳಿಸುವ ನಿರೀಕ್ಷೆ ಇರಿಸಲಾಗಿದೆ.
         ಡಾ. ಕೆ. ಪ್ರಸನ್ನ ರೈ
     ಡಾ. ಕಯ್ಯಾರ ಕಿಞಣ್ಣ ರೈ ಅವರ ಪುತ್ರ
   ಕೋಟ್ಸ್:
  3) ನಾಡಿನ ಹೆಮ್ಮೆಯ ಸಾಂಸ್ಕೃತಿಕ, ಸಾಮಾಜಿಕ ಶಕ್ತಿಯನ್ನು ಸದಾ ನೆನಪಿಸುವ, ಅವರ ಕೊಡುಗೆಗಳನ್ನು ಮುಂದಿನ ತಲೆಮಾರಿಗೆ ತಲಪಿಸುವಲ್ಲಿ ಜಿಲ್ಲಾ ಪಂಚಾಯತು ಉತ್ಸುಕತೆಯಿಂದ ಮುಂದೆ ಬಂದಿದ್ದು, ಈಗಾಗಲೇ ಕುಟುಂಬಸ್ಥರು ನೀಡಿರುವ ಉಚಿತ ನಿವೇಶನದ ಪ್ರಾಥಮಿಕ ಚಟುವಟಿಕೆಗಳ ನಿರ್ವಹಣೆಗೆ 10 ಲಕ್ಷ ರೂ. ಗಳನ್ನು ಮೀಸಲಿರಿಸಿದೆ. ಶೀಘ್ರ ಪ್ರಾಥಮಿಕ ಕಾಮಗಾರಿ ಆರಂಭಗೊಳ್ಳಲಿದೆ. ಜೊತೆಗೆ ಕೇರಳ-ಕನರ್ಾಟಕ ಸರಕಾರಗಳ ಮೂಲಕ ಅಂದಾಜು 4 ಕೋಟಿ ವೆಚ್ಚದಲ್ಲಿ ಸಾಂಸ್ಕೃತಿಕ ಭವನ ನಿಮರ್ಾಣ ನಡೆಸಲು ಉದ್ದೇಶಿಸಲಾಗಿದೆ.
     ನ್ಯಾಯವಾದಿ ಕೆ.ಶ್ರೀಕಾಂತ್.
    ಕಾಸರಗೋಡು ಜಿಲ್ಲಾ ಪಂಚಾಯತು ಸದಸ್ಯ ಹಾಗೂ ಸಾಂಸ್ಕೃತಿಕ ಭವನ ಸಮಿತಿ ಸದಸ್ಯ.

 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries