ಸವಿತಾಳಿಗೆ ಗ್ಯಾಸ್ ಸಿಲಿಂಡರ್, ಸ್ಟೌ ವಿತರಣೆ
ಬದಿಯಡ್ಕ: ಸೋರುತ್ತಿರುವ ಮನೆಯಲ್ಲಿ ಬಹುಕಷ್ಟದ ಬದುಕು ನಡೆಸುತ್ತಿರುವ ಸವಿತಾ ಅವರ ಸಂಕಷ್ಟದ ಕಥೆಯನ್ನು ಕೇಳಿ ತಿಳಿದ ಸಿರಿಚಂದನ ಕನ್ನಡ ಯುವಬಳಗ ಕಾಸರಗೋಡು ಸಂಘಟನೆಯ ಪದಾಧಿಕಾರಿಗಳು ಮಾರ್ಗದರ್ಶಕರಾದ ಕಾಸರಗೋಡು ಸರಕಾರಿ ಕಾಲೇಜಿನ ಪ್ರಾಧ್ಯಾಪಕ ಡಾ. ರತ್ನಾಕರ ಮಲ್ಲಮೂಲೆ ಅವರ ನೇತೃತ್ವದಲ್ಲಿ ಸವಿತಾರ ನಿವಾಸಕ್ಕೆ ತೆರಳಿದರು. ಕಾಸರಗೋಡು ತಾಲೂಕಿನ ಚೆರ್ಕಳ ಗ್ರಾಮ ಪಂಚಾಯಿತಿನ ಪಾಡಿಯ ಮಹಾಬಲ ರೈ ಹಾಗೂ ಸುಮಿತ್ರ ದಂಪತಿಯ ಪುತ್ರಿ ಸವಿತ. ಟರ್ಪಲ್ ಹಾಕಿದ ಸೋರುವ ಮನೆಯಲ್ಲಿ ಕಟ್ಟಿಗೆ ಕೂಡಾ ಶೇಖರಿಸಲಾಗದೆ ಒದ್ದೆ ನೆಲದಲ್ಲಿ ಒಲೆ ಉರಿಸುವ ಅವರ ದುಸ್ಥಿತಿಯನ್ನು ಕಂಡು ಮಾರ್ಗದರ್ಶಕರಾದ ಡಾ. ರತ್ನಾಕರ ಮಲ್ಲಮೂಲೆ ಅವರು ತಮ್ಮ ಮನೆಯಿಂದ ಗ್ಯಾಸ್ ಸಿಲಿಂಡರ್ನ್ನು ತಂದು ಯುವಬಳಗದ ಪದಾಧಿಕಾರಿಗಳೊಂದಿಗೆ ಸವಿತಾ ನಿವಾಸಕ್ಕೆ ತೆರಳಿ ಗ್ಯಾಸ್ ಒಲೆಯನ್ನು ವ್ಯವಸ್ಥೆಗೊಳಿಸಿದರು. ಯುವಬಳಗದ ಪದಾಧಿಕಾರಿಗಳಾದ ಕೀರ್ತನ್ ಕುಮಾರ್ ಸಿ. ಎಚ್., ಅಜಿತ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಸವಿತಾ ಅವರ ತಂದೆ ಮಾಡುವ ಕೃಷಿ ಹಾಗೂ ತಾಯಿ ಬೀಡಿ ಕಟ್ಟಿ ಲಭಿಸುವ ಸಂಪಾದನೆಯೇ ಇವರಿಗೆ ಏಕ ಆಶ್ರಯ. ಮೂವತ್ತು ವರ್ಷಕ್ಕಿಂತ ಹೆಚ್ಚು ಹಳೆಯ ಈ ಮನೆಯ ಗೋಡೆಯನ್ನು ಮಣ್ಣಿನಿಂದ ನಿಮರ್ಿಸಲಾಗಿದ್ದು, ಗೋಡೆ ಮಳೆನೀರಿಗೆ ಕರಗಿ ಕುಸಿದು ಬಿದ್ದಿದೆ. ಮನೆಯ ಮಾಡಿಗೆ ಪಕ್ಕಾಸುಗಳ್ಯಾವುದೂ ಇಲ್ಲ. ಮಾಡೇ ಒಂದು ಬದಿಗೆ ಕುಸಿದಂತಿದೆ. ಮಣ್ಣಿನಿಂದ ನಿಮರ್ಿಸಿದ ಗೋಡೆಯ ಮೇಲೆ ಸೋಗೆ ಹಾಸಿದ್ದು ಅದರ ಮೇಲೆ ಟರ್ಪಲ್ ಹಾಸಲಾಗಿದೆ. ಈ ಟರ್ಪಲ್ ಹಾಗೂ ಸೋಗೆಯನ್ನು ಪ್ರತಿ ಮಳೆಗಾಲ ಆರಂಭದ ಮುನ್ನ ಇವರು ಬದಲಾಯಿಸಬೇಕಾಗುತ್ತದೆ. ಆದರೂ ಸೋರುವ ಮಾಡಿಗೆ ಮಾತ್ರ ಪರಿಹಾರವಿಲ್ಲ. ಕಳೆದ ಎರಡು ಮೂರು ವಾರಗಳಿಂದ ನಿರಂತರ ಸುರಿಯುವ ಮಳೆಗೆ ಇವರು ಮನೆಯೊಳಗೆ ಕೊಡೆ ಬಿಡಿಸಿ ನಿಲ್ಲಬೇಕಾದ ಸ್ಥಿತಿ ಯಾರನ್ನೂ ಕಣ್ಣೀರಿಡುವಂತೆ ಮಾಡುತ್ತಿದೆ. ರಾತ್ರಿ ಹಗಲಿಡೀ ಮಳೆ ಬಂದರೆ ಸೋರುವ ಮನೆಯಲ್ಲಿ ಇವರಿಗೆ ನಿದ್ರೆ ಮಾಡಲು ವ್ಯವಸ್ಥೆಯಿಲ್ಲ. ಯಾವುದೇ ಕ್ಷಣದಲ್ಲಿ ಈ ಮನೆ ಸಂಪೂರ್ಣವಾಗಿ ಕುಸಿದು ಬೀಳುವ ಸ್ಥಿತಿಯಲ್ಲಿದೆ.
ಸವಿತ ಅವರ ಸಹೋದರಿಯ ವಿವಾಹಕ್ಕಾಗಿ ಇವರು ಬ್ಯಾಂಕ್ನಲ್ಲಿ ಮಾಡಿದ ಸಾಲ ತೀರಿಸಲು ಇದುವರೆಗೆ ಸಾಧ್ಯವಾಗಿಲ್ಲ. ಒಂದೂವರೆ ಲಕ್ಷ ರೂ. ಬ್ಯಾಂಕ್ ಸಾಲವಿದ್ದು ಇದಕ್ಕೆ ಪ್ರತಿವರ್ಷ 20000ರೂ. ಬಡ್ಡಿಯನ್ನು ಪಾವತಿಸಲು ಕುಟುಂಬ ಸಂಕಷ್ಟ ಪಡುತ್ತಿದೆ. ಸವಿತಾಳ ಕುಟುಂಬಕ್ಕೆ ಇದುವರೆಗೆ ಶೌಚಾಲಯ ಸೌಕರ್ಯ ಲಭ್ಯವಾಗಿಲ್ಲ. ಕುಡಿಯುವನೀರಿಗಾಗಿ ಒಂದು ಬಾವಿ ಇದೆಯಾದರೂ ಬೇಸಗೆಯಲ್ಲಿ ನೀರು ಬತ್ತುತ್ತದೆ. ಬೇಸಗೆ ಬಂದರೆ ಸಮೀಪದ ಮನೆಯ ಕೊಳವೆಬಾವಿಯಿಂದ ನೀರು ತರಬೇಕಾದ ದುಸ್ಥಿತಿ. ಸವಿತಾಳ ಕುಟುಂಬದ ದುಸ್ಥಿತಿಯನ್ನು ಮನಗಂಡು ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಆಥರ್ಿಕವಾಗಿ ಹಿಂದುಳಿದ ಈ ಕುಟುಂಬಕ್ಕೆ ಪುಟ್ಟ ಮನೆ ನಿಮರ್ಿಸಿ ನೀಡಲು ಮುಂದಾಗಿದೆ. ಇವರಿಗೆ ಸಹಾಯ ಮಾಡಲು ಇಚ್ಛಿಸುವವರು ಕಾಲೇಜಿನ ಎನ್ಎಸ್ಎಸ್ ಘಟಕವನ್ನು ಅಥವಾ ಸವಿತಾ ಕುಟುಂಬವನ್ನು ಸಂಪಕರ್ಿಸಬಹುದು.