ದುಡಿಮೆಯೇ ಜೀವನವೆಂದು ಬದುಕಿದ ಬಹುಮುಖೀ ವ್ಯಕ್ತಿತ್ವದ ಕಯ್ಯಾರರು ಎಂದಿಗೂ ಪ್ರೇರಣೆ-ಪ್ರೊ.ಎ.ಶ್ರೀನಾಥ್
ಗಡಿನಾಡ ಸಾಂಸ್ಕೃತಿಕ-ಸಾಹಿತ್ತಿಕ ಅಕಾಡೆಮಿಯಿಂದ ಕವಿ ಕಯ್ಯಾರರ 14ನೇ ಜನ್ಮ ದಿನಾಚರಣೆ ಕವಿ ನಿವಾಸದಲ್ಲಿ
ಬದಿಯಡ್ಕ: ಸ್ವಾತಂತ್ರ್ಯ ಹೋರಾಟಗಾರರಾಗಿ, ಕನ್ನಡ ಏಕೀಕರಣ ಮತ್ತು ವಿಲೀನೀಕರಣ ಹೋರಾಟಗಾರರಾಗಿ ಸಾಹಿತ್ಯ ದಿಗ್ಗಜ ಕವಿ ಕಯ್ಯಾರರ ಬದುಕು=ಬರಹಗಳು ಕನ್ನಡ ನಾಡು ನುಡಿಗೆ ಗಡಿನಾಡಿನ ಮಹತ್ತರ ಕೊಡುಗೆಗಳಾಗಿ ಹೆಮ್ಮೆಯೆನಿಸಿದೆ. ಕಾಯಕಯೋಗಿಯಾಗಿ, ಕವಿಯಾಗಿ, ಹೋರಾಟಗಾರರಾಗಿ, ಆದರ್ಶ ಶಿಕ್ಷಕ, ಪತ್ರಿಕೋದ್ಯಮಿಯಾಗಿ ಬಹುಮುಖದ ವ್ಯಕ್ತಿತ್ವದ ಕಯ್ಯಾರರು ಹೊಸ ತಲೆಮಾರಿಗೆ ಎಂದಿಗೂ ಆದರ್ಶ ಪ್ರಾಯರು ಎಂದು ಕಾಸರಗೋಡು ಸರಕಾರಿ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಪ್ರೊ.ಎ.ಶ್ರೀನಾಥ್ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾಸರಗೋಡಿನ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಇದರ ವತಿಯಿಂದ ಕಯ್ಯಾರ ಕಿಞ್ಞಣ್ಣ ರೈಯವರ ಕವಿತಾ ಕುಟೀರದಲ್ಲಿ ಶುಕ್ರವಾರ ಆಯೋಜಿಸಿದ ಕಯ್ಯಾರರ ನೂರ ನಾಲ್ಕನೇ ಜನ್ಮದಿನವನ್ನು ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಅವರು ಮಾತನಾಡಿದರು.
ಹೊಸ ಸಮಾಜದ ನವೋತ್ಥಾನದ ಭವಿಷ್ಯಕ್ಕೆ ಮಾರ್ಗದರ್ಶಕವೋ ಎಂಬಂತೆ ಬಾಳಿ ಬದುಕಿದ ಕಯ್ಯಾರರು ದುಡಿಮೆಯೇ ಜೀವನ ಎಂಬ ಸಂಕಲ್ಪದಿಂದ ಬಹುಮುಖದ ವ್ಯಕ್ತಿತ್ವವನ್ನು ಬೆಳೆಸಿ ಮಾದರಿಯಾದವರು ಎಂದು ತಿಳಿಸಿದ ಅವರು, ಗಡಿನಾಡಿನ ಕನ್ನಡ ಭಾಷೆ, ಸಂಸ್ಕೃತಿಯ ಉಳಿವಿಗೆ ಮಾಡಿರುವ ಹೋರಾಟಗಳು ಇಂದಿಗೂ ಪ್ರಸ್ತುತ ಎಂದು ತಿಳಿಸಿದರು. ಭಾಷಾ ಅಲ್ಪಸಂಖ್ಯಾತರಾದ ಗಡಿನಾಡ ಕನ್ನಡಿಗರ ಹಕ್ಕುಚ್ಯುತಿಯ ಸಂದರ್ಭಗಳು ಸವಾಲಾಗಿರುವ ವರ್ತಮಾನ ಕಾಲದ ಆಗುಹೋಗುಗಳು ಕನ್ನಡಿಗರನ್ನು ಮತ್ತೆ ಒಗ್ಗೂಡಿಸುವಂತೆ ಮಾಡುವಲ್ಲಿ ಕಯ್ಯಾರರ ಪ್ರೇರಣೆಗಳು ಬಹುಪಾಲಿದೆ ಎಂದು ತಿಳಿಸಿದ ಅವರು, ಮಾತೃಭಾಷಾ ಪ್ರೇಮದ ಮಹತ್ವವನ್ನು ಪ್ರಚುರಪಡಿಸುವಲ್ಲಿ ಕಯ್ಯಾರರು ಸಮಸ್ತ ಕರುನಾಡಿಗೇ ಆದ್ಯಪ್ರವರ್ತಕರು ಎಂದು ಈ ಸಂದರ್ಭ ತಿಳಿಸಿದರು.
ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದ್ದ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಕಾರ್ಯದಶರ್ಿ ಅಖೀಲೇಶ್ ನಗುಮುಗಂ ಮಾತನಾಡಿ, ಕಯ್ಯಾರರಂತಹ ಮಹಾನ್ ವ್ಯಕ್ತಿ ಕೇರಳ ಕನರ್ಾಟಕದ ಗಡಿಭಾಗವಾದ ನಮ್ಮ ಕಾಸರಗೋಡಲ್ಲಿ ಬೆಳೆದು ಬಂದು ಎರಡು ರಾಜ್ಯಗಳ ನಡುವೆ ಸೇತುವೆಯಾಗಿ ಬದುಕಿದವರು.ಕನ್ನಡದ ಸಂರಕ್ಷಣೆಗಾಗಿ ಹಗಲಿರುಳು ಹೋರಾಡಿದವರು.ಆದುದರಿಂದಲೇ ಅವರ ಜನ್ಮದಿನವನ್ನು ನೆನಪಿಟ್ಟು ನಮ್ಮ ಅಕಾಡೆಮಿಯ ವತಿಯಿಂದ ಅವರ ಮನೆಗೆ ಆಗಮಿಸಿ ಅವರಿಗೆ ಗೌರವ ಸಲ್ಲಿಸಿರುತ್ತೇವೆ.ಆದರೆ ಮಲೆಯಾಳೀಕರಣದ ಹಿಡಿತದಲ್ಲಿ ಕನ್ನಡಿಗರು ಇಂದು ನರಳುವ ಪರಿಸ್ಥಿತಿ ಎದುರಾಗಿರುವುದು ವಿಪಯರ್ಾಸ ಎಂದು ತಿಳಿಸಿದರು.
ಪೆರಡಾಲ ನವಜೀವನ ಪ್ರೌಢಶಾಲೆಯ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಆಶ್ರಫ್ ಮುನಿಯೂರು, ಶ್ರೀಧರ ಮಣಿಯಾಣಿ ಬದಿಯಡ್ಕ, ಕೈಯಾರರ ಸುಪುತ್ರ ಪ್ರದೀಪ್ ರೈ, ಅರತಿ ಪ್ರದೀಪ್ ರೈ, ನವಜೀವನ ಶಾಲಾ ಶಿಕ್ಷಕಿ ಪ್ರಭಾವತಿ ಕೆದಿಲಾಯ,ಮಾಸ್ಟರ್ಮೈಂಡ್ನ ಮುಖ್ಯೋಪಾಧ್ಯಾಯಿನಿ ಶಶಿಕಲಾ ರೈ ಮಾಯಿಪ್ಪಾಡಿ ಉಪಸ್ಥಿತರಿದ್ದು ಮಾತನಾಡಿದರು. ಮೀಡಿಯಾ ಕ್ಲಾಸಿಕಲ್ ಸದಸ್ಯ ನಿತಿನ್ ಕುಮಾರ್ ಸ್ವಾಗತಿಸಿ, ಆಶ್ವಿನ್ ಯಾದವ್ ವಂದಿಸಿದರು.