ಮಕ್ಕಳ ಸರ್ವತೋಮುಖ ಬೆಳವಣಿಗೆಯ ಚಟುವಟಿಕೆ ಸ್ಕೌಟಿಂಗ್ ಮಾತ್ರ : ಸಜಿತ್ ಎ.ಕೆ.
ಕಾಸರಗೋಡು: ಶಾಲಾ ಪ್ರಾಯದ ಮಕ್ಕಳಿಗಾಗಿ ಹಲವಾರು ಚಟುವಟಿಕೆಗಳಿದ್ದರೂ ಶಾರೀರಿಕ, ಮಾನಸಿಕ ಹಾಗೂ ನೈತಿಕ ವಿಕಾಸದ ಮೂಲಕ ಸರ್ವತೋಮುಖ ಬೆಳವಣಿಗೆಗೆ ಒದಗುವ ಚಳವಳಿ ಸ್ಕೌಟಿಂಗ್ ಗೈಡಿಂಗ್ ಮಾತ್ರ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ರಾಜ್ಯ ಕಾರ್ಯದಶರ್ಿ ಸಜಿತ್ ಎ.ಕೆ. ಹೇಳಿದರು.
ಅವರು ವಿದ್ಯಾನಗರದ ಜಿಲ್ಲಾ ಸ್ಕೌಟ್ ಭವನದಲ್ಲಿ ನಡೆದ ಸ್ಕೌಟ್ ಗೈಡ್ ಅಧ್ಯಾಪಕರ ಕಾಸರಗೋಡು ಜಿಲ್ಲಾ ಮಟ್ಟದ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದರು.
ಯುವಕರಲ್ಲಿ ಇನ್ನೂ ಸ್ಕೌಟ್ ಚಳವಳಿಯಲ್ಲಿ ಭಾಗಿಗಳಾಗುವುದರ ಕುರಿತಾಗಿ ಮತ್ತು ಅದರಿಂದ ದೊರೆಯುವ ವ್ಯಕ್ತಿತ್ವ ವಿಕಾಸದ ಪ್ರಯೋಜನದ ಅರಿವು ಕಡಿಮೆ ಕಾಣುತ್ತಿದೆ. ಇತರ ದೇಶಗಳಲ್ಲಿ ಸ್ವತ: ಯುವಕರೇ ನಡೆಸುವ ಚಳವಳಿ ಇಲ್ಲೂ ಹೆಚ್ಚು ಮಂದಿಗೆ ಪಾಲ್ಗೊಳ್ಳಲು ಅವಕಾಶವನ್ನೊದಗಿಸುವಂತಾಗಲು ಎಲ್ಲರೂ ಕೈಜೋಡಿಸಬೇಕೆಂದು ಅವರು ಹೇಳಿದರು.
ಜಿಲ್ಲಾ ಗೈಡ್ ಆಯುಕ್ತೆ ಭಾರ್ಗವಿ ಕುಟ್ಟಿ ಅಧ್ಯಕ್ಷತೆ ವಹಿಸಿದರು. ರಾಜ್ಯ ಸಹಾಯಕ ಸಂಘಟನಾ ಆಯುಕ್ತರಾದ ಪ್ರಶಾಂತ್ ಪಿ. ಈ ವರ್ಷ ನಡೆಯಲಿರುವ ರಾಜ್ಯ ಮಟ್ಟದ ಚಟುವಟಿಕೆಗಳ ಕುರಿತಾದ ಮಾಹಿತಿ ನೀಡಿ ಮಕ್ಕಳ ಹಾಗೂ ಅಧ್ಯಾಪಕರ ನೋಂದಾವಣೆಯಲ್ಲಿನ ಸಂಶಯಗಳನ್ನು ನಿವಾರಿಸಿದರು. ಜಿಲ್ಲಾ ಸ್ಕೌಟ್ ಆಯುಕ್ತ ಗುರುಮೂತರ್ಿ ಶುಭಹಾರೈಸಿದರು. ಜಿಲ್ಲಾ ಸ್ಕೌಟ್ ತರಬೇತಿ ಆಯುಕ್ತ ಭುವನೇಂದ್ರನ್ ನಾಯರ್ ಸ್ವಾಗತಿಸಿ, ಜಿಲ್ಲಾ ಗೈಡ್ ತರಬೇತಿ ಆಯುಕ್ತೆ ಆಶಾಲತಾ ವಂದಿಸಿದರು.