HEALTH TIPS

No title

              ಹದಗೆಟ್ಟ ಕುಂಟಾರು-ಮಾಯಿಲಂಕೋಟೆ-ಮಿಂಚಿಪದವು ರಸ್ತೆ; ವಾಹನ ಸಂಚಾರಕ್ಕೆ ಅಡ್ಡಿ
    ಮುಳ್ಳೇರಿಯ: ಮುಂಗಾರು ಮಳೆ ಪ್ರಾರಂಭವಾಗುತ್ತಿರುವಂತೆ ಗ್ರಾಮೀಣ ಪ್ರದೇಶಗಳ ರಸ್ತೆಗಳು ತೀವ್ರ ಹದಗೆಟ್ಟು ಸಂಚಾರ ಸಂಕಷ್ಟವಾಗಿ ಜನಸಾಮಾನ್ಯರು ಪರಿತಪಿಸುವಂತಾಗಿದೆ. ಕಾರಡ್ಕ ಗ್ರಾಮ ಪಂಚಾಯಿತಿಯ 7ನೇ ವಾಡರ್್ನ ಕುಂಟಾರು-ಮಾಯಿಲಂಕೋಟೆ-ಮಿಂಚಿಪದವು ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿದ್ದು ವಾಹನ ಸಂಚಾರ, ಜನ ಸಂಚಾರ ದುಸ್ತರವಾಗಿದೆ.
   ಬೆಳ್ಳೂರು ಗ್ರಾಮ ಪಂಚಾಯಿತಿನ ಕುಡಿಯುವ ನೀರಿನ ಕೊಳವೆ ಜೋಡಿಸುವ ಕಾಮಗಾರಿ ನಡೆಸುವಾಗ ಅಗಲ ಕಿರಿದಾದ ರಸ್ತೆಯ ಒಂದು ಪಾಶ್ರ್ವವನ್ನು ಅಗೆದು ಕೊಳವೆ ಜೋಡಿಸಿದುದರ ಪರಿಣಾಮವೇ ಈ ಸಮಸ್ಯೆಗೆ ಪ್ರಧಾನ ಕಾರಣ. ಇದ್ದ ಚರಂಡಿಯೂ ಮುಚ್ಚಿಹೋಗಿ ಈಗ ರಸ್ತೆಯಲ್ಲಿಯೇ ನೀರು ಹರಿಯುವ ಕಾರಣ ರಸ್ತೆಗೆ ಹಾಕಿದ ಡಾಮಾರು ಕಿತ್ತು ಹೋಗಿದೆ. ಮಾಯಿಲಂಕೋಟೆ ಪ್ರದೇಶದಲ್ಲಿ ಪರಿಶಿಷ್ಟ ಜಾತಿ ಕಾಲನಿಯೂ ಸೇರಿ ಸಾಕಷ್ಟು ಮನೆಗಳಿವೆ.
   ದಿನ ನಿತ್ಯ ಈ ರಸ್ತೆಯಲ್ಲಿ ನೂರಾರು ಮಂದಿ ಸಂಚರಿಸುತ್ತಾರೆ. ಸಾಕಷ್ಟು ವಾಹನಗಳೂ ಓಡಾಡುತ್ತಿವೆ. ರಸ್ತೆ ಕುಸಿದು ಹದಗೆಟ್ಟ ಕಾರಣ ಅನಿವಾರ್ಯ ಸಂದರ್ಭದಲ್ಲಿ ಜೀಪು ಸಂಚಾರ ಮಾತ್ರಾ ಸಾಧ್ಯವಾಗುತ್ತಿದೆ.  ಕುಂಟಾರಿನಿಂದ ಮಾಯಿಲಂಕೋಟೆಯ ಮೂಲಕ ಸಾಗುವ ಈ ರಸ್ತೆಯು ಕಾರಡ್ಕ ಗ್ರಾಮ ಪಂಚಾಯಿತಿಗೆ ಸೇರಿದೆ. ರಸ್ತೆ ದುರಸ್ತಿಗಾಗಿ ಗ್ರಾಮ ಸಭೆಗಳಲ್ಲಿ ಒತ್ತಾಯಿಸಿದ್ದರೂ ಯಾವುದೇ ಕ್ರಮ ಈ ತನಕ ಕೈಗೊಂಡಿಲ್ಲ.
    ಎದುರಾಗಬಹುದಾದ ಸಮಸ್ಯೆಯ ಬಗ್ಗೆ ಕೊಳವೆ ಜೋಡಿಸುವಾಗಲೇ ಸಮಸ್ಯೆಯನ್ನು ಮನವರಿಕೆ ಮಾಡಲಾಗಿತ್ತು. ಆದರೆ ಅದನ್ನು ಕಿವಿಗೆ ಹಾಕಿಕೊಳ್ಳದ ಕರಾರುದಾರರು ತಮ್ಮ ಕೆಲಸವನ್ನು ಸಲೀಸುಗೊಳಿಸುವುದಕ್ಕಾಗಿ ರಸ್ತೆಯ ಮಧ್ಯೆಯೇ ಕಾಲುವೆ ತೋಡಿ, ಕಾಮಗಾರಿ ಮುಗಿಸಿದರು. ಮಳೆಗಾಲ ಬಂದಾಗ ಇದರಿಂದಾಗುವ ಸಮಸ್ಯೆಯ ಬಗ್ಗೆ ಕರಾರುದಾರರೂ, ಅಭಿಯಂತರರೂ ಆಲೋಚಿಸದೆ ಇಷ್ಟು ಸಾಕು ಎಂಬ ರೀತಿಯಲ್ಲಿ ಮುಂದುವರಿದರು. ಈಗ ಈ ಪ್ರದೇಶದ ಜನರನ್ನು ನುಂಗುವುದಕ್ಕಾಗಿ ಈ ಕಾಲುವೆಗಳು ಬಾಯ್ದೆರೆದು ನಿಂತಿವೆ. ಮಕ್ಕಳು ಮಹಿಳೆಯರು ನಿತ್ಯ ನಡೆದು ಹೋಗುವ ದಾರಿ ಇದು. ಇದರ ಮೂಲಕ ಅಗತ್ಯ ವಾಹನ ಸಂಚಾರವೂ ಸಾಧ್ಯವಿತ್ತು. ಈಗ ಅಪಾಯಕರವಾಗಿ ಬಾಯ್ದೆರೆದಿರುವ ರಸ್ತೆಯಲ್ಲಿ ಎಚ್ಚರತಪ್ಪಿ ಸಂಚಾರ ಮಾಡಿದರೆ ಹೊಂಡದೊಳಗೆ ಸಲೀಸಾಗಿ ಬೀಳಬಹುದು! ಈಗ ಇದನ್ನು ಮುಚ್ಚುವ ಗೋಜಿಗೂ ಹೋಗುವವರಿಲ್ಲ. ನಡೆದು ಹೋಗುವ ದಾರಿಯಲ್ಲಿಯೇ ಮಣ್ಣಿನ ಮೇಲ್ಭಾಗದಲ್ಲಿ ಕೊಳವೆಯನ್ನು ಜೋಡಿಸಿ ಕೈತೊಳೆದುಕೊಂಡಿರುವುದೂ ಸ್ಥಳೀಯರ ಪಾಲಿಗೆ ನಿತ್ಯದ ಸಮಸ್ಯೆಯಾಗುತ್ತಿದೆ.
   ಮಾಯಿಲಂಕೋಟೆ ಪ್ರದೇಶದಲ್ಲಿ ಸ್ಥಳೀಯರ ಸಹಕಾರದೊಂದಿಗೆ  ಕಿರು ಸೇತುವೆ ನಿಮರ್ಿಸಿದುದು ಈ ರಸ್ತೆಯ ಅಭಿವೃದ್ಧಿಯಾಗುವ ಮುನ್ಸೂಚನೆಯಾಗಿತ್ತು. ಈ ರಸ್ತೆಯನ್ನು ಸಮಗ್ರ ಅಭಿವೃದ್ಧಿ ಮಾಡುವ ಯೋಜನೆಯ ಕಡತವು ಅಧಿಕೃತರ ಮುಂದಿದೆ. ಮುಂದಿನ ವರ್ಷಗಳಲ್ಲಿ ಜನರು ಕಾಲ್ನಡಿಗೆಯ ಮೂಲಕ ಮೂರ್ನಾಲ್ಕು ಕಿಲೋ ಮೀಟರ್ ನಡೆದೇ ಮಿಂಚಿಪದವು ಸೇರುವ ಅನಿವಾರ್ಯತೆಯಿಂದ ಹೊರ ಬರುವ ಲಕ್ಷಣವಿತ್ತು. ಆದರೆ ಈ ಯೋಜನೆ ಕಡತದಿಂದ ಹೊರಬರುವುದು ಯಾವಾಗ ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ.
   ಈ ರಸ್ತೆಯನ್ನು ಶೀಘ್ರ ದುರಸ್ತಿಗೊಳಿಸಿ ಸಂಚಾರಯೋಗ್ಯವಾಗಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.



     

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries