HEALTH TIPS

No title

              ನವಜೀವನ ತರಗತಿ ಗ್ರಂಥಾಲಯ ಉದ್ಘಾಟನೆ
    ಬದಿಯಡ್ಕ: ಪುಸ್ತಕ ನಮ್ಮ ಜ್ಞಾನ ದಾಹವನ್ನು ಇಂಗಿಸುವ ಪ್ರಥಮ ಮೂಲ. ಪುಸ್ತಕದ ಓದು ನಮ್ಮನ್ನು ಉನ್ನತಿಗೆ ಕೊಂಡೊಯ್ಯುತ್ತದೆ. ಮಕ್ಕಳು ಸದಾ ಪುಸ್ತಕವನ್ನು ಓದಬೇಕೆಂಬ ದೃಷ್ಟಿಯಿಂದ ಶಾಲೆಗಳಲ್ಲಿ ಪ್ರತಿ ತರಗತಿಯಲ್ಲೂ ಗ್ರಂಥಾಲಯದ ಸ್ಥಾಪನೆಯನ್ನು ನವಜೀವನ ಹೈಯರ್ ಸೆಕೆಂಡರಿ ಶಾಲೆ ಪೆರಡಾಲದಲ್ಲಿ ಮಾಡಲಾಗಿದೆ. ವಿದ್ಯಾಭಿಮಾನಿಗಳು 31 ತರಗತಿಗಳಿಗೆ ಕವಾಟುಗಳನ್ನು ನೀಡಿದ್ದಾರೆ. ಮಕ್ಕಳು ಒದಗಿಸಿದ ವ್ಯವಸ್ಥೆಯನ್ನು ಸದುಪಯೋಗಿಸುವಲ್ಲಿ ಉತ್ಸುಕತೆ ತೋರಿಸಬೇಕು ಎಂದು ಬದಿಯಡ್ಕ ಗ್ರಾಮ ಪಂಚಾಯತಿ ಅಧ್ಯಕ್ಷ ಕೆ ಎನ್ ಕೃಷ್ಣ ಭಟ್ ಕರೆನೀಡಿದರು.
     ಅವರು ಪೆರಡಾಲ ನವಜೀವನ ಹೈಸ್ಕೂಲ್ನಲ್ಲಿ ತರಗತಿ ಗ್ರಂಥಾಲಯವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡುತ್ತಿದ್ದರು.
        ಇದೇ ಸಂದರ್ಭ ಪಿ.ಎನ್. ಪಣಿಕ್ಕರ್ ವಾಚನಾ ವಾರದ ಉದ್ಘಾಟನೆಯನ್ನು ಬದಿಯಡ್ಕ ಗ್ರಾಮ ಪಂಚಾಯತಿ ವಿದ್ಯಾಭ್ಯಾಸ ಸ್ಥಾಯೀ ಸಮಿತಿ ಅಧ್ಯಕ್ಷ ಕೆ ಶ್ಯಾಮ ಪ್ರಸಾದ್ ಮಾನ್ಯ ನೆರವೇರಿಸಿದರು. ವಿದ್ಯಾಥರ್ಿ ಸಂಚಿಕೆ "ಚಿಲುಮೆ"ಯನ್ನು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯೋಪಾಧ್ಯಾಯ ಶಂಕರ್ ಸಾರಡ್ಕ ಉದ್ಘಾಟಿಸಿ ಒಂದು ತರಗತಿಗೆ ಕವಾಟ ಮತ್ತು ಪುಸ್ತಕದ ಕೊಡುಗೆಯನ್ನು ನೀಡಿದರು. ಒಂದು ಮಗು ಒಂದು ಪುಸ್ತಕವನ್ನು ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಆಶ್ರಫ್ ಮುನಿಯೂರು ಉದ್ಘಾಟಿಸಿದರು.
     ಶಾಲಾ ಮುಖ್ಯೋಪಾಧ್ಯಾಯ ಶ್ಯಾಮ ಭಟ್ ಕೆ ಸಭಾಧ್ಯಕ್ಷತೆ ವಹಿಸಿದ್ದರು. ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಕೈಲಾಸ ಮೂತರ್ಿ ಅವರು ಈ ಸಂದರ್ಭ ಅಧ್ಯಾಪಕಲೋಕ ಸಾಹಿತ್ಯ ಪ್ರಶಸ್ತಿ ವಿಜೇತ ಪದ್ಮನಾಭನ್ ಬ್ಲ್ಲಾತ್ತೂರು ಇವರನ್ನು ಸ್ಮರಣಿಕೆ ನೀಡಿ ಗೌರವಿಸಿ, ಮಕ್ಕಳಿಗೆ ಬಹುಮಾನ ವಿತರಿಸಿದರು. ವಾಚನಾ ಸಪ್ತಾಹದ ಸಂದೇಶವನ್ನು ಕುಂಬಳೆ ಕುಂಬಳೆ ಬ್ಲಾಕ್ ಯೋಜನಾಧಿಕಾರಿ   ಎನ್.ವಿ. ಕುಂಞ್ಞಿ ಕೃಷ್ಣನ್ ಮತ್ತು ಶಿಕ್ಷಕಿ ಸುಶೀಲ ಕೆ ನೀಡಿದರು.  ಗ್ರಾಮ ಪಂಚಾಯತಿ ಸದಸ್ಯೆ ರಾಜೇಶ್ವರಿ, ಪ್ರಾಂಶುಪಾಲ ರಾಮಚಂದ್ರನ್, ಮಾತೃ ಸಂಘದ ಅಧ್ಯಕ್ಷೆ ಸುರೇಖ, ಸಂಘಟನಾ ಸಮಿತಿ ಅಧ್ಯಕ್ಷ ಸಲೀಂ ಎಡನೀರು ಮತ್ತು ಶಾಲಾ ನೌಕರ ಸಂಘದ  ಕರುಣಾಕರನ್ ಎಂಪಿ ಶುಭಾಶಂಸನೆಗೈದರು.
    ಸ್ವಾಗತ ಸಮಿತಿ ಅಧ್ಯಕ್ಷ ಶಾಫಿ ಚೂರಿಪಳ್ಳ ಸ್ವಾಗತಿಸಿ, ಚಿಲುಮೆ ಸಂಯೋಜನಾಧಿಕಾರಿ ವಿ.ಇ. ಉಣ್ಣಿಕೃಷ್ಣನ್ ಪ್ರಾಸ್ತಾವಿಕವಾಗಿ ಮಾತನಾಡಿದರು.ವಿದ್ಯಾರಂಗದ ಸಂಚಾಲಕಿ  ವಿ.ಎಂ. ಕಾತರ್ಿಕಾ ವಂದಿಸಿದರು. ಶಿಕ್ಷಕ  ಶ್ರೀನಿವಾಸ ಕೆ ಮತ್ತು ಬಾಲಕೃಷ್ಣನ್ ಕಾರ್ಯಕ್ರಮ ನಿರೂಪಿಸಿದರು.
   

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries