ಸಮನ್ವಯ ಕಾಸರಗೋಡು ಸಂಘಟನೆಯ ವಲಯ ಸಭೆ
ಕುಂಬಳೆ: ಸಮನ್ವಯ ಕಾಸರಗೋಡು ಇದರ ವಲಯ ಮಟ್ಟದ ಸಭೆಯು ಕುಂಬಳೆ ಸರಕಾರಿ ಹೈಸ್ಕೂಲಿನಲ್ಲಿ ಇತ್ತೀಚೆಗೆ ಜರಗಿತು. ಸಂಘಟನೆಯ ನೂತನ ಅಧ್ಯಕ್ಷರಾದ ಸಹಕಾರಿ ಇಲಾಖೆಯ ಸಹಾಯಕ ರಿಜಿಸ್ಟ್ರಾರ್ ಕೆ.ಜಯಚಂದ್ರ ಮಾತನಾಡಿ, ಕಾಸರಗೋಡಿನ ಕನ್ನಡಿಗರ ಬಾಹುಳ್ಯದ ಸಮನ್ವಯ ಸಾಂಸ್ಕೃತಿಕ ವೇದಿಕೆಯು ಕಳೆದ 20 ವರ್ಷಗಳಿಂದ ಚಟುವಟಿಕೆಯಲ್ಲಿದೆ. ಸಾರ್ವಜನಿಕ ಜೀವನ ಯಶಸ್ವಿಗೆ ಈ ಸಂಘಟನೆಯು ಶ್ರಮಿಸುತ್ತಿದೆ ಎಂದರು.
ಪ್ರೊ.ಎ.ಶ್ರೀನಾಥ್ ಶುಭಹಾರೈಸಿದರು. ನಿವೃತ್ತ ಸಾರ್ವಜನಿಕ ಅಭಿಯೋಜಕ (ಪಬ್ಲಿಕ್ ಪ್ರೋಸಿಕ್ಯೂಟರ್) ನ್ಯಾಯವಾದಿ ಕೆ.ಎಂ.ಹಸೈನಾರ್, ದಾಮೋದರ ಮೊಗ್ರಾಲ್ ಪುತ್ತೂರು, ಅಬ್ದುಲ್ ರಹಿಮಾನ್ ಪೆರ್ಲ, ಶ್ಯಾಮ ಶರ್ಮ ಪಟ್ಟಾಜೆ, ಪೊಡಿಯನ್ ಮಾಸ್ತರ್, ಜಯರಾಮ ಪೂಜಾರಿ, ಸರಸ್ವತಿ, ಪ್ರಭಾವತಿ ಕೆದಿಲಾಯ, ಮಾಲತಿ ಟೀಚರ್ ಉಪಸ್ಥಿತರಿದ್ದರು.
ಸಮನ್ವಯ ಕಾಸರಗೋಡು ಇದರ ವತಿಯಿಂದ ಮತ್ತೆ ಕಾಗರ್ಿಲ್ ಕವಿತೆಗಳು ಬಹುಭಾಷಾ ಕವಿಗೋಷ್ಠಿ ಜುಲೈ 4ರಂದು ಅಪರಾಹ್ನ 2.30ಕ್ಕೆ ಕಾಸರಗೋಡು ಹಳೆ ಬಸ್ ನಿಲ್ದಾಣದ ವಿವೇಕಾನಂದ ಕಾಲೇಜಿನಲ್ಲಿ ನಡೆಯಲಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು. ಅಧ್ಯಾಪಕ ಬಾಲಕೃಷ್ಣ ಭಟ್ ಸ್ವಾಗತಿಸಿ, ದಿಲೀಪ್ಕುಮಾರ್ ಎಚ್. ಪೆರ್ಲ ವಂದಿಸಿದರು.