ನೆಟ್ಟಗಿಡದ ಸಂರಕ್ಷಣೆ ಬಹಳ ಮುಖ್ಯ : ಶ್ಯಾಮ ಭಟ್
ಕನ್ನಡಕಂದನ ಸಿರಿಚಂದನ ಗಿಡಯೋಜನೆ ನಾಲ್ಕನೆಯ ಕಾರ್ಯಕ್ರಮ
ಬದಿಯಡ್ಕ: ನಾವು ಮಾಡುವ ಕ್ರಿಯೆ ಮುಖ್ಯವಲ್ಲ. ಆ ಕ್ರಿಯೆಯಿಂದ ಎಷ್ಟು ಜನ ಪ್ರಯೋಜನ ಪಡೆದಿದ್ದಾರೆ ಎಂಬುದಷ್ಟೇ ಮುಖ್ಯ. ಮಾಡುವ ಕೆಲಸ ಅರ್ಥಪೂರ್ಣವಾಗಿದ್ದರೆ ಮಾತ್ರ ಅದರ ಫಲ ಮುಂದಿನ ತಲೆಮಾರಿಗೆ ಸಿಗುವುದಕ್ಕೆ ಸಾಧ್ಯ. ಸಾವಿರ ಗಿಡ ನೆಡುವುದಕ್ಕಿಂತ ನೆಟ್ಟ ಒಂದು ಗಿಡವನ್ನು ಸಾವಿರ ಕಾಲ ಉಳಿಯುವಂತೆ ಪೋಷಣೆ ಮಾಡುವುದು ಬಹಳ ಅಗತ್ಯವಾದುದು. ಅಂತಹ ಕೆಲಸವನ್ನು ಕಾಸರಗೋಡಿನ ಸಿರಿ ಚಂದನ ಕನ್ನಡ ಯುವ ಬಳಗ ಮಾಡುತ್ತಿರುವುದು ನಿಜವಾಗಿಯೂ ಶ್ಲಾಘನೀಯ ಎಂದು ಪೆರಡಾಲ ನವಜೀವನ ಹಿರಿಯ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಶ್ಯಾಮ ಭಟ್ ಕಿಳಿಂಗಾರು ಅವರು ಹೇಳಿದರು.
ಸಿರಿ ಚಂದನ ಕನ್ನಡ ಯುವ ಬಳಗ ಕಾಸರಗೋಡು ಇದರ ನೇತೃತ್ವದಲ್ಲಿ ಸೀತಾಂಗೋಳಿ ಸಮೀಪ ದಭರ್ೆತ್ತಡ್ಕದ ಡಿ.ಶಂಕರ ಅವರ ಮನೆಯಲ್ಲಿ ನಡೆದ 'ಕನ್ನಡ ಕಂದನ ಸಿರಿ ಚಂದನ ಗಿಡ' ಯೋಜನೆಯ ನಾಲ್ಕನೆಯ ಕಾರ್ಯಕ್ರಮವನ್ನು ಇತ್ತೀಚೆಗೆ ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಿರಿಚಂದನ ಕನ್ನಡ ಯುವಬಳಗದ ಪರಿಸರ ಸಂರಕ್ಷಣಾ ಸಮಿತಿ ಸಂಚಾಲಕ ಕೀರ್ತನ್ ಕುಮಾರ್ ಸಿ.ಎಚ್. ಮಾತನಾಡಿ, ಕನ್ನಡ ಕಂದನ ಸಿರಿ ಚಂದನ ಗಿಡ ಯೋಜನೆ ಅತೀ ಚಿಕ್ಕ ಯೋಜನೆಯಾದರೂ ಇದು ಸಮಾಜಕ್ಕೆ ಕೊಡುವ ಸಂದೇಶ ಅತೀ ಮಹತ್ವದ್ದು. ಕಾಸರಗೋಡಿನ ಕನ್ನಡಿಗರು ಕಾಸರಗೋಡಿನಲ್ಲಿದ್ದು ಏನನ್ನೂ ಕಲಿತಿಲ್ಲ.ಆ ಕಲಿಕೆಯನ್ನು ಇಂತಹ ಸಮಾಜಮುಖೀ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ನಾವೇನು ಎನ್ನುವುದನ್ನು ತಿಳಿದುಕೊಳ್ಳುವುದಕ್ಕೆ ನಮಗೆ ಸಾಧ್ಯವಾಗುತ್ತದೆ ಎಂದರು.
ಬಳಗದ ಮಾರ್ಗದರ್ಶಕರೂ ಪ್ರಾಧ್ಯಾಪಕರೂ ಆದ ಡಾ.ರತ್ನಾಕರ ಮಲ್ಲಮೂಲೆ ಮಾತನಾಡಿ, ಸಿರಿ ಚಂದನ ಕನ್ನಡ ಯುವ ಬಳಗವು ಮಾಡಿದ ಕೆಲಸ ಕಾರ್ಯಗಳು ಔಚಿತ್ಯಪೂರ್ಣವಾಗಿರಬೇಕೆಂಬ ಉದ್ದೇಶದಿಂದ ಮತ್ತು ಸಾಮಾನ್ಯ ಶಾಲೆಯ ವಿದ್ಯಾಥರ್ಿಗಳಿಗೆ ಪ್ರೋತ್ಸಾಹ ನೀಡುವ ಸದುದ್ದೇಶದಿಂದ ಇಂತಹ ಯೋಜನೆಯೊಂದನ್ನು ಬಳಗವು ಹಮ್ಮಿಕೊಂಡಿದ್ದು, ಜಿಲ್ಲೆಯ ವಿವಿಧ ಭಾಗಗಳ ವಿದ್ಯಾಥರ್ಿಗಳ ಮನೆಗೆ ತೆರಳಿ ಅವರ ಹೆಸರಿನಲ್ಲಿಯೇ ಅವರ ಹಿತ್ತಲಲ್ಲಿ ಗಿಡ ನೆಡುವ ಯೋಜನೆಯನ್ನು ಮಾಡಿದ್ದೇವೆ. ಈ ಪ್ರಕ್ರಿಯೆಯನ್ನು ಪ್ರತಿ ವರ್ಷ ಮುಂದುವರೆಸಿಕೊಂಡು ಹೋಗುವ ಯೋಜನೆ ಬಳಗದೆದುರಿಗಿದೆ. ಗಿಡದ ಸಂರಕ್ಷಣೆಯ ಹೊಣೆಯನ್ನು ಮಗುವಿಗೆ ವಹಿಸಿಕೊಟ್ಟು ಮಗುವಿಗೆ ಗಿಡದ ಬಗ್ಗೆ ಸದಾ ನೆನಪಿಡಲು ಮನೆಯ ಗೋಡೆಗೆ ತೂಗು ಹಾಕಲು ನೆನಪಿನ ಪ್ರಮಾಣ ಪತ್ರವೊಂದನ್ನು ನೀಡಲಾಗುತ್ತದೆ. ಬಳಿಕ ಮೂರು ವರ್ಷ ಕಳೆದು ಅದೇ ಮನೆಗೆ ಬಳಗದ ಕಾರ್ಯಕರ್ತರು ಭೇಟಿ ನೀಡಿ, ನೆಡಲಾದ `ಕನ್ನಡ ಕಂದನ ಸಿರಿ ಚಂದನ'ಎಂಬ ಹೆಸರಿನ ಈ ಎರಡು ಗಿಡಗಳಲ್ಲಿ ಕನಿಷ್ಠ ಒಂದರ ಸಂರಕ್ಷಣೆಯಾದರೂ ಸಮರ್ಪಕವಾಗಿದ್ದಲ್ಲಿ ಆ ವಿದ್ಯಾಥರ್ಿಯನ್ನು ಬಳಗವು ಸಾರ್ವಜನಿಕ ಕಾರ್ಯಕ್ರಮದಲ್ಲಿ ಅಭಿನಂದಿಸುವುದು ಈ ಮೂಲಕ ಮಗುವಿನಲ್ಲಿ ಪರಿಸರದ ಕುರಿತು ಎಳವೆಯಲ್ಲಿಯೇ ಕಾಳಜಿ ಮೂಡಿಸುವುದು ಬಳಗದ ಮತ್ತೊಂದು ಉದ್ದೇಶ ಎಂದರು.
ನ್ಯಾಯವಾದಿ ಥೋಮಸ್ ಡಿ'ಸೋಜ, ರಾಮಪ್ಪ ಮಂಜೇಶ್ವರ, ಕುಂಬಳೆ ಹೋಲಿ ಫ್ಯಾಮಿಲಿ ಶಾಲೆಯ ಅಧ್ಯಾಪಕ ರಾಜು ಕಿದೂರು, ಬೇಳ ಶಾಲೆಯ ಶಿಕ್ಷಕ ಸ್ಟಾನಿ ಲೋಬೋ, ನವಜೀವನ ಪೆರಡಾಲ ಶಾಲೆಯ ಶಿಕ್ಷಕರಾದ ಶ್ರೀನಿವಾಸ ಕಿದೂರು, ಸುಶೀಲಾ ಕೆ, ಸರ್ವಮಂಗಳಾ ಪಿ, ಪ್ರಭಾವತಿ ಕೆದಿಲಾಯ ಪುಂಡೂರು, ಜೋತ್ಸ್ನಾ ಕಡಂದೇಲು, ಸಿರಿಚಂದನ ಕನ್ನಡ ಯುವ ಬಳಗದ ಅಧ್ಯಕ್ಷ ರಕ್ಷಿತ್ ಪಿ.ಯಸ್, ಕು.ಶರಣ್ಯ ಡಿ, ಅಖಿಲ್ ಯಾದವ್ ಶುಭ ಹಾರೈಸಿದರು.
ಬಳಗದ ಪರಿಸರ ಸಂರಕ್ಷಣಾ ಸಮಿತಿ ಸಹ ಸಂಯೋಜಕ ಎಂ.ಫಿಲ್. ವಿದ್ಯಾಥರ್ಿ ಸುಜಿತ್ ಉಪ್ಪಳ ಪ್ರಾರ್ಥನೆ ಹಾಡಿದರು. ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯ, ಮನೆಯ ಯಜಮಾನ ಡಿ. ಶಂಕರ ಸ್ವಾಗತಿಸಿ, ಸಿರಿ ಚಂದನ ಕನ್ನಡ ಯುವ ಬಳಗದ ಸದಸ್ಯ ಕಾತರ್ಿಕ್ ಪಡ್ರೆ ವಂದಿಸಿದರು. ಜೊತೆ ಕಾರ್ಯದಶರ್ಿ ಸೌಮ್ಯಾ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ಕೃತೇಶ್ ಅವರ ಮನೆಯ ಹಿತ್ತಲಲ್ಲಿ ಹಲಸಿನ ಗಿಡಗಳನ್ನು ನೆಡಲಾಯಿತು. ನವಜೀವನ ಶಾಲೆಯ ಮುಖ್ಯೋಪಾಧ್ಯಾಯ ಶಾಮ ಭಟ್ ಪ್ರಮಾಣಪತ್ರವನ್ನು ಕೃತೇಶ್ಗೆ ಹಸ್ತಾಂತರಿಸಿದರು. ಪ್ರಮಾಣ ಪತ್ರ ಸ್ವೀಕರಿಸಿ ಮಾತನಾಡಿದ ಕೃತೇಶ್ ತನಗೆ ವಹಿಸಿದ ಕೆಲಸವನ್ನು ತಾನು ಅಚ್ಚುಕಟ್ಟಾಗಿ ಮಾಡುತ್ತೇನೆ ಎಂದು ಭರವಸೆ ನೀಡಿ ಮಾತನಾಡಿದರು.
ದಿವಾಣ ಶಿವಶಂಕರ ಭಟ್, ಸುಕುಮಾರ ಕುದ್ರೆಪ್ಪಾಡಿ, ವಿದ್ಯಾಲಕ್ಷ್ಮಿ ಕುಂಬಳೆ, ಹರಿಕಿರಣ್ ಎಚ್, ಪ್ರಶಾಂತ್ ಹೊಳ್ಳ, ಸ್ವಾತಿ ಕೆ.ವಿ, ಧನೇಷ್ ಯು, ಸುಶ್ಮಿತಾ ಆರ್, ಸುಬ್ರಹ್ಮಣ್ಯ ಹೇರಳ, ಅಜಿತ್ ಶೆಟ್ಟಿ, ಶಶಿಧರ ಕೆ, ಕೃತಿಕಾ, ಸುಂದರಿ ಸಿ, ನಿತೀಷ್ ಡಿ, ರಮೇಶ್ ಡಿ, ಶ್ರೀಧರ ಡಿ. ಮುಂತಾದವರು ಉಪಸ್ಥಿತರಿದ್ದರು.