ಜೂ.30ರಂದು ಶ್ರೀ ರಾಮಚರಿತ ಮಾನಸ ಲೋಕಾರ್ಪಣೆ
ಉಪ್ಪಳ: ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕ ಕಾಸರಗೋಡು ಇದರ ಆಶ್ರಯದಲ್ಲಿ ಉದಯೋನ್ಮುಖ ಲೇಖಕ, ನಿವೃತ್ತ ಅಧ್ಯಾಪಕ ಎನ್.ತಿಮ್ಮಣ್ಣ ಭಟ್ ಅವರು ಹಿಂದಿಯಿಂದ ಕನ್ನಡಕ್ಕೆ ಅನುವಾದಿಸಿದ ತುಳಸೀದಾಸ ವಿರಚಿತ ಶ್ರೀ ರಾಮಚರಿತ ಮಾನಸ ಕೃತಿ ಲೋಕಾರ್ಪಣೆ ಕಾರ್ಯಕ್ರಮವು ಜೂ.30ರಂದು ಅಪರಾಹ್ನ 2ಗಂಟೆಗೆ ಬಾಯಾರು ಹೆದ್ದಾರಿ ಎಯುಪಿ ಶಾಲೆಯಲ್ಲಿ ಜರಗಲಿದೆ.
ಖ್ಯಾತ ಕವಿ ಡಾ.ಕೆ.ರಮಾನಂದ ಬನಾರಿ ಕೃತಿಯನ್ನು ಬಿಡುಗಡೆ ಮಾಡುವರು. ಕಸಾಪ ಗಡಿನಾಡ ಘಟಕದ ಅಧ್ಯಕ್ಷ ಎಸ್.ವಿ.ಭಟ್ ಕಾಸರಗೋಡು ಅಧ್ಯಕ್ಷತೆ ವಹಿಸುವರು. ಕಾಸರಗೋಡು ಸರಕಾರಿ ಕಾಲೇಜಿನ ಪ್ರಾಧ್ಯಾಪಕ ಶ್ರೀಧರ ಏತಡ್ಕ ಕೃತಿ ಅವಲೋಕನ ನಡೆಸುವರು. ರಾಮನಾಥ ಎನ್., ರಾಮಕೃಷ್ಣ ಭಟ್ ಪಿ., ಆದಿನಾರಾಯಣ ಭಟ್, ಮೋನಪ್ಪ ಶೆಟ್ಟಿ ಕಟ್ನಬೆಟ್ಟು ಮುಂತಾದವರು ಉಪಸ್ಥಿತರಿರುವರು.