HEALTH TIPS

ಯಾವುದೇ ಶೀರ್ಷಿಕೆಯಿಲ್ಲ

             ನಾಡೋಜ ಕಯ್ಯಾರ ಕಿಂಞ್ಞಣ್ಣ ರೈಯವರ ಬದುಕು - ಬರಹ ಸಮಾಜಕ್ಕೆ ಆದರ್ಶ : ಡಾ|ಸದಾನಂದ ಪೆರ್ಲ
    ಮಂಗಳೂರು: ಸರಕಾರದ ಪ್ರತಿಷ್ಠಿತ ಪಂಪಾ ಪ್ರಶಸ್ತಿಯ ಗೌರವಕ್ಕೆ  ಪಾತ್ರರಾಗಿರುವ ನಾಡೋಜ ಕಯ್ಯಾರ ಕಿಂಞ್ಞಣ್ಣ ರೈ ಅವರ ಬದುಕು - ಬರಹ  ಸಮಾಜಕ್ಕೆ ಆದರ್ಶ. ಅವರ ಚಿಂತನೀಯ ವಿಚಾರಧಾರೆ, ಬದುಕಿದ ರೀತಿ-ನೀತಿ ಅನುಕರಣೀಯವಾದುದು ಎಂದು ಮಂಗಳೂರು ಆಕಾಶವಾಣಿಯ ಕಾರ್ಯಕ್ರಮ ನಿವರ್ಾಹಕರಾದ ಡಾ.ಸದಾನಂದ ಪೆರ್ಲ ಅಭಿಪ್ರಾಯಪಟ್ಟರು.
    ಅವರು ದ.ಕ.ಜಿಲ್ಲಾ ಸಾಹಿತ್ಯ ಪರಿಷತ್ತು, ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕ ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನ ಸಹಭಾಗಿತ್ವದಲ್ಲಿ ನಡೆಸಿದ `ಕಯ್ಯಾರರ ನೆನಪು' ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಯ್ಯಾರರ ಬದುಕು ಬರಹದ ಕುರಿತು ಉಪನ್ಯಾಸ ನೀಡಿದರು.
    ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಕಲ್ಕೂರ ಸಾಹಿತ್ಯ ಸಂಸ್ಕೃತಿಯ ಅರಿವು ಯುವ ಪೀಳಿಗೆಗೆ ಆಗಬೇಕಾದರೆ ಹಿರಿಯರ ಆದರ್ಶವನ್ನು ಮನಗಾಣಲೇ ಬೇಕು. ಈ ದಿಸೆಯಲ್ಲಿ ಕಯ್ಯಾರರ ನೆನಪು ಅರ್ಥಪೂರ್ಣವಾದ ಕಾರ್ಯಕ್ರಮ ಎಂದು ಅಭಿಪ್ರಾಯಪಟ್ಟರು.
   ಕವಿ ಕಯ್ಯಾರರ ಸುಪುತ್ರ ಡಾ.ಪ್ರಸನ್ನ ರೈ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಡಾ.ರೇಣುಕಾ ಕೆ. ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕ್ಷಮಾ ಎನ್. ರಾವ್, ವಿಘ್ನೇಶ್ ಬಿ, ಕು.ಸುರಕ್ಷಾ ಉಪಸ್ಥಿತರಿದ್ದರು.
  ಕ.ಸಾ.ಪ. ತಾಲೂಕು ಘಟಕದ ಅಧ್ಯಕ್ಷೆ ವಿಜಯಲಕ್ಷ್ಮಿ ಶೆಟ್ಟಿ ಸ್ವಾಗತಿಸಿ, ಕೋಶಾಧಿಕಾರಿ ಪ್ರೊ.ಕೃಷ್ಣಮೂತರ್ಿ ವಂದಿಸಿದರು. ಕಾಲೇಜಿನ ಕನ್ನಡ ಸಂಘದ ನಿದರ್ೇಶಕ ಡಾ.ದಿನಕರ ಎಸ್.ಪಚ್ಚನಾಡಿ ಕಾರ್ಯಕ್ರಮ ನಿರೂಪಿಸಿದರು. ರತ್ನಾವತಿ ಜೆ.ಬೈಕಾಡಿ ಅವರಿಂದ ಕೈಯಾರರ ಹಾಡುಗಳು ಪ್ರಸ್ತುತವಾಯಿತು. ಈ ಸಂದರ್ಭದಲ್ಲಿ ಕಾಲೇಜಿನ ಕನ್ನಡ ಸಂಘದ ಉದ್ಘಾಟನೆ ನೆರವೇರಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries