HEALTH TIPS

No title

              ಕನ್ನಡಕಂದನ ಸಿರಿಚಂದನ ಗಿಡ - ಬಂದಡ್ಕದಲ್ಲಿ ಸಾಕಾರ
    ಮುಳ್ಳೇರಿಯ: ವಿದ್ಯಾಥರ್ಿಗಳಲ್ಲಿ ಎಳವೆಯಿಂದಲೇ ಪರಿಸರ ಮತ್ತು ಅರಣ್ಯಗಳ ಮಹತ್ವವನ್ನು ಕ್ರಿಯಾತ್ಮಕವಾಗಿ ತಿಳಿಸುವ ಕನ್ನಡ ಕಂದನ ಸಿರಿಚಂದನ ಯೋಜನೆಯನ್ನು ಪ್ರತಿಯೊಬ್ಬ ಶಿಕ್ಷಕಕರೂ ಅನುಸರಿಸಬೇಕು. ಇದೊಂದು ಅತ್ಯತ್ತಮಯೋಜನೆ. ಗಿಡವನ್ನು ಸಂರಕ್ಷಸಲಿರುವ ಈ ಯೋಜನೆಯ ಮಹತ್ವವನ್ನು ಇತರರೂ ಅನುಸರಿಸಬೇಕು ಎಂದು ಬಂದಡ್ಕದ ಗಡಿನಾಡ ಕನ್ನಡ ಸಂಘದ ಅ`್ಯಕ್ಷ ಪುರುಷೋತ್ತಮ ಬೊಡ್ಡನಕೊಚ್ಚಿ ಅಭಿಪ್ರಾಯಪಟ್ಟರು.
  ಸಿರಿಚಂದನ ಕನ್ನಡ ಯುವಬಳಗದ ವತಿಯಿಂದ ನಡೆದುಕೊಂಡು ಬರುತ್ತಿರುವ ಕನ್ನಡಕಂದನ ಸಿರಿಚಂದನ ಗಿಡಯೋಜನೆಯ ಎರಡನೆಯ ಹಂತವನ್ನು ಅವರು ಬಂದಡ್ಕದ ನಿತ್ಯಾನಂದ ಮಾಸ್ತರ್ಅವರ  ಪುತ್ರಿ ಕುಮಾರಿ ತುಷಾರ ಅವರ ನಿವಾಸದಲ್ಲಿ ನೆರವೇರಿಸಿ ಮಾತನಾಡಿದರು. ಕುಮಾರಿ ತುಷಾರ ಬಂದಡ್ಕ ಸರಕಾರಿ ಕನ್ನಡ ಶಾಲೆಯ ನಾಲ್ಕನೆಯ ತರಗತಿಯ ವಿದ್ಯಾಥರ್ಿನಿಯಾಗಿದ್ದು, ಅವರ ಹಿತ್ತಲಲ್ಲಿ ಬಳಗದ ಸದಸ್ಯರು ತುಷಾರ ಅವರ ಹೆಸರಲ್ಲಿ ಗಿಡ ನೆಟ್ಟು, ಸಂರಕ್ಷಣೆಯ ಹೊಣೆಯನ್ನು ವಿದ್ಯಾಥರ್ಿನಿಗೆ ನೀಡಿದರು.
   ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಳಗದ ಪರಿಸರ ಸಂರಕ್ಷಣ ಸಮಿತಿಯ ಸಂಯೋಜಕ ಕೀರ್ತನ್ಕುಮಾರ್ ಸಿ.ಎಚ್. ವಹಿಸಿದ್ದರು. ಮಾರ್ಗದರ್ಶಕರಾದ ಡಾ.ರತ್ನಾಕರ ಮಲ್ಲಮೂಲೆ ಪ್ರಾಸ್ತಾವಿಕವಾಗಿ ಮಾತನಾಡಿ ಯೋಜನೆಯ ಮಹತ್ವ ಹಾಗೂ ಉದ್ದೇಶಗಳನ್ನು ವಿವರಿಸಿದರು. ನಿತ್ಯಾನಂದ ಮಾಸ್ತರ್, ಪವಿತ್ರಾ ಟೀಚರ್, ರಕ್ಷಿತ್ ಪಿ.ಎಸ್, ಪ್ರದೀಪ್ ಕುಮಾರ್ ಎಡನೀರು ಮಾತನಾಡಿದರು. ಪ್ರಶಾಂತ ಹೊಳ್ಳ, ಧನೇಶ್ ಯು, ಅಜಿತ್ ಶೆಟ್ಟಿ ಬೋವಿಕಾನ ಈ ಮುಂತಾದವರು ಉಪಸ್ಥಿತರಿದ್ದರು. ಬಳಗದ ಕಾರ್ಯದಶರ್ಿ ರಾಜೇಶ್ ಎಸ್.ಪಿ. ಕಾರ್ಯಕ್ರಮ ನಿರ್ವಹಿಸಿದರು. ನಿತ್ಯಾನಂದ ಮಾಸ್ತರ್, ಅನೀಶ್ ಟಿ.ಆರ್.  ವಂದಿಸಿದರು. ಪ್ರೇಕ್ಷ ಎಂ.ಎಚ್. ಮತ್ತು ಬಳಗ ಪ್ರಾರ್ಥನೆ ಹಾಡಿದರು

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries