HEALTH TIPS

No title

          ಉಚಿತ ಕಣ್ಣಿನ ಪೊರೆ ತಪಾಸಣಾ, ಶಸ್ತ್ರ ಚಿಕಿತ್ಸಾ ಶಿಬಿರ ಮತ್ತು ನೂತನ ಉಪಕರಣಗಳ  ಲೋಕಾರ್ಪಣೆ
   ಕುಂಬಳೆ:  ಹೊಸನಗರ  ಶ್ರೀ ರಾಮಚಂದ್ರಾಪುರಮಠ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿಗ್ದರ್ಶನದಲ್ಲಿರುವ ಶ್ರೀ ಧರ್ಮ ಚಕ್ರ ಟ್ರಸ್ಟ್ , ಶ್ರೀ ಭಾರತೀ ನೇತ್ರ ಚಿಕಿತ್ಸಾಲಯ ಮುಜುಂಗಾವು, ಮತ್ತು ಕಾಸರಗೋಡು ಜಿಲ್ಲಾ ಅಂಧತ್ವ ನಿವಾರಣಾ ಸಮಿತಿ ಇವರ  ಆಶ್ರಯದಲ್ಲಿ  ಉಚಿತ ಕಣ್ಣಿನ ಪೊರೆ ತಪಾಸಣಾ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ ಮುಜುಂಗಾವಿನ  ಶ್ರೀ ಭಾರತೀ ನೇತ್ರ ಚಿಕಿತ್ಸಾಲಯದಲ್ಲಿ ಭಾನುವಾರ ಜರಗಿತು.
      ಮುಳ್ಳೇರಿಯ ಹವ್ಯಕ ಮಂಡಲ ಅಧ್ಯಕ್ಷ ಪ್ರೊ. ಶ್ರೀಕೃಷ್ಣ ಭಟ್ ಅವರು ದೀಪಜ್ವಲನ ಮಾಡಿ ಸಮಾರಂಭದ ಉದ್ಘಾಟಿಸಿದರು.  ಈ ಸಂದರ್ಭದಲ್ಲಿ  ಕೊಚ್ಚಿಯ ಭಾರತ್  ಪೆಟ್ರೋಲಿಯಂ ಕಾಪರ್ೊರೇಷನ್ ಲಿಮಿಟೆಡ್ನವರು  ಚಿಕಿತ್ಸಾಲಯಕ್ಕೆ ಕೊಡಮಾಡಿದ ನೂತನ ಉಪಕರಣಗಳಾದ ಶಸ್ತ್ರಚಿಕಿತ್ಸಾ ಸಹಾಯಿ ಉಪಕರಣ ಓಪರೇಟಿಂಗ್ ಮೈಕ್ರೋಸ್ಕೋಪ್, ಅಟೋ ರಿಫ್ರೇಕ್ಟೋಮೀಟರ್, ರೆಟಿನಾ ಟೆಸ್ಟ್ ಮಾಡುವ ಎ ಸ್ಕೇನ್, ಸ್ಲಿಟ್ ಲೇಂಪ್, ವ್ಯಕ್ತಿಯ ಸ್ತಿತಿ ಮಾಹಿತಿ ಉಪಕರಣ ಯೂನಿಟ್ ಚೆಯರ್ ಇವುಗಳ ಲೋಕಾರ್ಪಣಾ ಕಾರ್ಯಕ್ರಮ ಜರಗಿತು. 
    ಗೋಕರ್ಣ ಮಹಾ ಮಂಡಲಾಧ್ಯಕ್ಷೆ ಈಶ್ವರೀ ಬೇರ್ಕಡವು ಅಧ್ಯಕ್ಷತೆ ವಹಿಸಿದ್ದರು. ನೇತ್ರ ಚಿಕಿತ್ಸಾಲಯದ ಆಡಳಿತಾಧಿಕಾರಿ ಡಾ. ಯಂ ಶ್ರೀಧರ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಕೆ.ವಿ. ಶ್ರೀರಾಮ ಕಾಸರಗೋಡು, ಡಾ. ಪ್ರಶಾಂತ ಕುಮಾರ್, ಡಾ. ಆನಂದ್ ಶುಭಾಶಂಸನೆಗೈದರು.
   ಸಭೆಯಲ್ಲಿ ಚಿಕಿತ್ಸಾಲಯಕ್ಕೆ ಸೂಕ್ತ ಸಮಯದಲ್ಲಿ ನೂತನ ಉಪಕರಣವನ್ನು ಒದಗಿಸುವಲ್ಲಿ ಸಕ್ರಿಯವಾಗಿ ಸಹಕರಿಸಿ ವ್ಯವಸ್ಥೆ ಮಾಡಿದ  ಕೃಷ್ಣ ಪ್ರವೀಣ ಓಪ್ಟಿನ್ ಹೆಲ್ತ್ ಕೇರ್ ಮಂಗಳೂರು ,  ಚಿಕಿತ್ಸಾಲಯದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಸದಾ ಕಾಲ ಸಹಕರಿಸುತ್ತಾ ಬಂದಿರುವ ಡಾ. ಪ್ರಶಾಂತ್ ಕುಮಾರ್ ನೇತ್ರ ತಜ್ಞರು, ಡಾ. ಕಾತರ್ಿಕ್ , ಡಾ. ಆನಂದ್  ಇವರನ್ನು ಹಾರಾರ್ಪಣೆಗೈದು ಶಾಲು ಹೊದೆಸಿ, ಫಲ ಮತ್ತು ಸ್ಮರಣಿಕೆಯನ್ನಿತ್ತು ಸನ್ಮಾನಿಸಲಾಯಿತು. 
     ಕುಂಬಳೆ ವಲಯಾಧ್ಯಕ್ಷ  ಬಾಲಕೃಷ್ಣ ಶರ್ಮ ಸ್ವಾಗತಿಸಿ, ನೇತ್ರಚಿಕಿತ್ಸಾಲಯದ ಕಾರ್ಯದಶರ್ಿ ಕೃಷ್ಣ ಮೋಹನ ಭಟ್ ಎಡನಾಡು ವಂದಿಸಿದರು. ಶ್ರೀ ಭಾರತೀ ವಿದ್ಯಾಪೀಠದ ಪ್ರಾಂಶುಪಾಲ ಶಾಮ ಭಟ್ ದಭರ್ೆಮಾರ್ಗ ಕಾರ್ಯಕ್ರಮ ನಿರೂಪಿಸಿದರು. ಚಿಕಿತ್ಸಾಲಯದ ಆಡಳಿತ ಮಂಡಳಿ ಸದಸ್ಯರು , ಮಂಡಲ ವಲಯದ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

     

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries