ಆಲೂರು ಮತ್ತು ಸಮೀಪ ಪ್ರದೇಶಗಳಲ್ಲಿ ಬೀದಿ ನಾಯಿ ಕಾಟ
ಮುಳ್ಳೇರಿಯ: ಬೋವಿಕ್ಕಾನ ಸಮೀಪದ ಆಲೂರು ಮತ್ತು ಪರಿಸರ ಪ್ರದೇಶಗಳಲ್ಲಿ ಬೀದಿ ನಾಯಿ ಕಾಟ ಅತಿಯಾಗಿದೆ.
ಇತ್ತೀಚೆಗೆ ಆಲೂರು ಟಿ.ಕೆ.ಅಬ್ದುಲ್ ಖಾದರ್ ಅವರ ನಾಲ್ಕು ಆಡುಗಳನ್ನು ಬೀದಿ ನಾಯಿಗಳು ಕಚ್ಚಿ ಕೊಂದು ಹಾಕಿದ್ದುವು. ಆಲೂರು, ಮುಂಡಕ್ಕಯ ಪ್ರದೇಶದ ಜನರು ಬೀದಿ ನಾಯಿಗಳ ಅತಿಯಾದ ಕಾಟದಿಂದ ಭಯಭೀತರಾಗಿದ್ದಾರೆ. ಶಾಲಾ ವಿದ್ಯಾಥರ್ಿಗಳನ್ನು ಶಾಲೆಗೆ ಕಳುಹಿಸಲು ಪೋಷಕರು ಅಂಜುವಂತಾಗಿದೆ. ಹತ್ತು ಹದಿನೈದು ನಾಯಿಗಳ ಗುಂಪು ಇಲ್ಲಿ ತಿರುಗಾಡುತ್ತಿರುತ್ತವೆ.
ನಾಯಿಗಳ ಕಾಟದಿಂದಾಗಿ ಸಾಕು ಪ್ರಾಣಿಗಳಿಗೂ ಸಂಚಕಾರ ಬಂದಿದೆ. ಇವು ಗುಂಪು ಸೇರಿ ಸಾಕು ಪ್ರಾಣಿಗಳನ್ನು ಕೊಲ್ಲುತ್ತಿವೆ. ನಾಯಿಗಳ ಕಾಟವನ್ನು ತಡೆಯಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.